ಒಳಮೀಸಲಾತಿ ಜಾರಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರುದ್ದ ತನಿಖೆಗೆ ಅನುಮತಿ ನೀಡಿರುವ ವಿಚಾರವಾಗಿ ಚರ್ಚೆ ನಡೆಸುವ ಸಲುವಾಗಿ ಇಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಅವರ ನೇತೃತ್ವದಲ್ಲಿ ಇಂದು ದಲಿತ ಪರ ಸಂಘಟನೆಗಳ ಮುಖಂಡರ ಸಭೆಯನ್ನು ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಮುಡಾ ಹಗರಣದಲ್ಲಿ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿರುವುದು ಖಂಡನೀಯ. ಮುಖ್ಯಮಂತ್ರಿಗಳ ಪತ್ನಿ ಹೆಸರಿನಲ್ಲಿ ಇರುವ ನಿವೇಶನಕ್ಕೆ ಬದಲಿ ನಿವೇಶನ ನೀಡಿರುವ ವಿಚಾರದಲ್ಲಿ ಅವರ ತಪ್ಪಿಲ್ಲದಿದ್ದರೂ ಅವರ ವಿರುದ್ದ ತನಿಖೆಗೆ ಅನುಮತಿ ನೀಡಿರುವುದನ್ನು ದಸಂಸ ಖಂಡಿಸುತ್ತದೆ. ಸ್ವತಃ ಮುಖ್ಯಮಂತ್ರಿಗಳೇ ಹಗರಣದ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇಮಕ ಮಾಡಿದ್ದು, ತನಿಖೆ ಪೂರ್ಣ ಗೊಳ್ಳುವ ಮುನ್ನವೇ ಆಧಾರ ರಹಿತವಾಗಿ ತನಿಖೆಗೆ ಆದೇಶ ನೀಡಿದ್ದಾರೆ.ಇದನ್ನು ಹಿಂಪಡೆಯಬೇಕೆನ್ನುವ ಒತ್ತಾಯವನ್ನು ದಸಂಸ ಮಾಡುತ್ತದೆ ಎಂಬ ನಿರ್ಣಯ ಕೈಗೊಳ್ಳಲಾಯಿತು
ಒಳಮೀಸಲಾತಿ ದಲಿತ ಸಮುದಾಯಗಳ ಬಹಳ ವರ್ಷಗಳ ಹೋರಾಟದ ಫಲವಾಗಿ ಸುಪ್ರೀಂಕೋರ್ಟು ಒಳ ಮೀಸಲಾತಿ ಜಾರಿಯ ಸಂಪೂರ್ಣ ಜವಾಬ್ದಾರಿಯನ್ನು ಅಯಾಯ ರಾಜ್ಯ ಸರಕಾರಗಳಿಗೆ ನೀಡಿದೆ. ಅಲ್ಲದೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಅಯೋಗ ಮತ್ತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ನೀಡಿದ ವರದಿಯಂತೆ ಒಳಮೀಸಲಾತಿ ಜಾರಿ ಮಾಡಲು ಮುಂದಾಗಬೇಕು. ಕೆನೆಪದರ ಎಂಬ ಅನಗತ್ತ ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸರಕಾರ ಕೂಡಲೇ ಸುಪ್ರೀಂಕೋರ್ಟು ಆದೇಶ ಪಾಲಿಸಬೇಕು ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ಡಿವಿಎಸ್ ನ ಹಬ್ಬತ್ತನಹಳ್ಳಿ ಶ್ರೀನಿವಾಸ್, ಮಾದಿಗ ದಂಡೋರದ ಆಟೋ ಶಿವರಾಜು, ನಾಗೇಶ್.ಎ. ಟಿ.ಡಿ.ಮೂರ್ತಿ, ಎ.ರಂಜನ್, ಪರುಶುರಾಮ್,ಲಕ್ಷ್ಮಮ್ಮ, ಲಕ್ಷ್ಮಿಶ್.ಸಲ್ಮಾ,ಯೂಸೂಫ್, ಜಗದೀಶ್.ಚಂದ್ರಯ್ಯ,ಹನುಮಂತರಾಜು, ಪೂಜಾಹುನುಮಯ್ಯ, ಈರಣ್ಣ,ಗೌರಮ್ಮ,ನರಸಿಂಹಮೂರ್ತಿ, ಸುನೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
