ತುರುವೇಕೆರೆ ತಾಲ್ಲೂಕಿನ ಮಾದಿಹಳ್ಳಿ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ವಿನೋದಾ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷರಾಗಿದ್ದ ಶಿವಮ್ಮ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 16 ಸದಸ್ಯರ ಬಲ ಹೊಂದಿರುವ ಪಂಚಾಯಿತಿಯಲ್ಲಿ 10 ಮಂದಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ವಿಶ್ವನಾಥಪುರ ಮಾಳೆ ಕ್ಷೇತ್ರದ ಗ್ರಾಪಂ ಸದಸ್ಯೆ ವಿನೋದಾ ಮಂಜುನಾಥ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ಎನ್.ಎ.ಕುಂಞ ಅಹಮದ್ ವಿನೋದಾ ಮಂಜುನಾಥ್ ರವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನ ಅಧ್ಯಕ್ಷರಾದ ವಿನೋದಾ ಮಂಜುನಾಥ್ ರವರ ಬೆಂಬಲಿಗರು ಹೂ ಮಾಲೆ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೇ ವೇಳೆ ತಾಲ್ಲೂಕು ಚುನಾವಣಾ ಇಲಾಖೆಯ ಪಿ.ಕಾಂತರಾಜು ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ್ದರು.
ನೂತನ ಅಧ್ಯಕ್ಷೆ ವಿನೋದಾ ಮಂಜುನಾಥ್ ರವರನ್ನು ಉಪಾಧ್ಯಕ್ಷರಾದ ಕೆಂಪಯ್ಯ, ಸಹ ಸದಸ್ಯರಾದ ಎಂ.ಬೊಮ್ಮಲಿಂಗಯ್ಯ, ಮಂಜುನಾಥ್, ಹರೀಶ್, ಲತಾಯೋಗಾನಂದ್, ವೆಂಕಟೇಶ್, ಎಸ್.ಆರ್.ಗಿರೀಶ್, ನಂಜಪ್ಪ, ಶಿವಮ್ಮ ಮತ್ತು ಪಿಡಿಒ ಸಾವಿತ್ರಮ್ಮ ಮುಖಂಡರಾದ ಶಿವಶಂಕರ್ ಸೇರಿದಂತೆ ಹಲವರು ಅಭಿನಂದಿಸಿದರು.
ವರದಿ – ನಾಗಭೂಷಣ್ ತುರುವೇಕೆರೆ
