ತುರುವೇಕೆರೆ | ಹೆತ್ತಮ್ಮನಿಗೇ ತುತ್ತು ಅನ್ನ ಹಾಕದವನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ಏನು ಬೋಧನೆ ಮಾಡ್ತಾನೆ : ಸಣ್ಣಮ್ಮ

Date:

Advertisements

ಹೆತ್ತಮ್ಮ ನಾನು. ನನಗೇ ಒಂದು ತುತ್ತು ಅನ್ನ ಹಾಕದೇ, ನನ್ನನ್ನು ಮನೆಯಿಂದ ಹೊರಗೆ ಹಾಕಿದವನು ಅವನು. ನನ್ನ ಕತ್ತು ಹಿಡಿದು ಮನೆಯಿಂದ ಆಚೆ ಹಾಕಿದವನು ಅವನು. ನೀನು ತಾಯಿ ಅಲ್ಲ. ನಾಯಿ ಅಂದವನು ಅವನು. ಆಸ್ತಿ ವ್ಯಾಮೋಹಕ್ಕಾಗಿ ರಕ್ತ ಸಂಬಂಧಗಳನ್ನೇ ಕಳೆದುಕೊಂಡವನು. ಕಾಲು ಕತ್ತರಿಸಿ ಹಾಕ್ತೀನಿ ಅಂದವನು. ನೀನು ಯಾವತ್ತು ಸಾಯುತ್ತೀಯೇ ಎಂದು ಕೇಳಿದವನು. ಇಂತಹ ಮನುಷ್ಯ ಕನ್ನಡಮ್ಮನ ಉದ್ದಾರ ಮಾಡ್ತಾನಂತೆ. ಹೆತ್ತಮ್ಮನ ಹೊಟ್ಟೆ ಉರಿಸಿದವನು ವೇದಿಕೆಯಲ್ಲಿ ಏನು ಬೋಧನೆ ಮಾಡ್ತಾನೋ ನಾ ಕಾಣೆ. – ಇದು ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕು ದಬ್ಬೇಘಟ್ಟ ಹೋಬಳಿಯಲ್ಲಿ ನಡೆಯಲಿರುವ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ವಿಶ್ರಾಂತ ಅಧ್ಯಾಪಕ ಎಲ್ ಮಂಜಯ್ಯಗೌಡರ ತಾಯಿ ಸಣ್ಣಮ್ಮನವರ ಆಕ್ರೋಶದ ನುಡಿಗಳು.

ತುರುವೇಕೆರೆಯ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಹೆತ್ತು ಹೊತ್ತು ಹೊಟ್ಟೆ ಬಟ್ಟೆ ಕಟ್ಟಿ ಸಾಕಿ ಸಲುಹಿದ ನನ್ನ ಮಗ ಮಂಜಯ್ಯಗೌಡ ಇಂದು ನನ್ನನ್ನು ಬೀದಿಗೆ ಹಾಕಿದ್ದಾನೆ. ಮತ್ತೊಬ್ಬ ಮಗ ನನ್ನನ್ನು ನೋಡಿಕೊಳ್ಳದೇ ಹೋಗಿದ್ದರೆ ನಾನು ಕೆರೆ ಕಟ್ಟೆ ಪಾಲು ಆಗಬೇಕಿತ್ತು ಎಂದು ಅಲವತ್ತುಗೊಂಡರು.

 ಹೆತ್ತ ತಾಯಿಗೆ ಗೌರವ ನೀಡದ ಅವನು ಕನ್ನಡ ಸಾಹಿತ್ಯ ಪರಿಷತ್‌ನ ಸಮ್ಮೇಳನದ ಅಧ್ಯಕ್ಷನಾಗಲು ನಾಲಾಯಕ್. ಆ ಸ್ಥಾನಕ್ಕೆ ಚ್ಯುತಿ ತಂದಿದ್ದಾನೆ. ಆಸ್ತಿ ಹಂಚಿಕೆ ಸಂಬಂಧ ಗ್ರಾಮದ ಹಿರಿಯರು ನನ್ನ ಪಾಲಿಗೆಂದು ಒಂದಿಷ್ಟು ಜಮೀನು ಬಿಡಿಸಿದ್ದರು. ಅದನ್ನೂ ಅವನೇ ಸ್ವಾಹಾ ಮಾಡಿದ. ಪ್ರತಿ ತಿಂಗಳು 5 ಸಾವಿರ ರೂ ಕೊಡಬೇಕೆಂದು ಹಿರಿಯರು ಹೇಳಿದ್ದರು. ಅದನ್ನೂ ಕೊಡುತ್ತಿಲ್ಲ. ಹಿರಿಯರ ಮಾತಿಗೆ ಬೆಲೆ ನೀಡದ ಆತ ನಮಗಾಗಿ ಬಿಟ್ಟಿದ್ದ ತೆಂಗಿನ ಮರದಲ್ಲೂ ಫಸಲನ್ನು ಕದ್ದು ಕಿತ್ತ. ಕೇಳಲು ಹೋದಾಗ ತಾಯಿ ಎಂಬ ಮಮಕಾರವೂ ಇಲ್ಲದೇ ಮನಸಾ ಇಚ್ಚೆ ಬೈದ. ನಾನು ಮತ್ತು ನನ್ನ ಗಂಡ ಕಷ್ಟಪಟ್ಟು ಕಟ್ಟಿದ್ದ ಮನೆಯಿಂದ ಆಚೆ ಹೋಗುವಂತೆ ಗದರಿದ. ಇಂತಹ ಕೀಳು ಸ್ವಭಾವದವನಿಂದ ಜನರು ಏನು ಮಾತನ್ನು ನಿರೀಕ್ಷಿಸಲು ಸಾಧ್ಯ. ಈತ ಸಮಾಜಕ್ಕೆ ಏನು ಸಂದೇಶ ನೀಡಿಯಾನು ಎಂದು ಸಣ್ಣಮ್ಮ ಪ್ರಶ್ನಿಸಿದರು.

Advertisements

ಮಂಜಯ್ಯಗೌಡನಿಗೆ ಮತ್ತೋರ್ವ ಸಹೋದರನಿದ್ದರೂ ಸಹ ಪಿತ್ರಾರ್ಜಿತ ಆಸ್ತಿಯನ್ನು ಸಮಪಾಲು ಮಾಡದೇ ವಂಚಿಸಿದ್ದಾನೆ. ರಕ್ತ ಸಂಬಂಧಕ್ಕಿಂತ ಅವನಿಗೆ ಆಸ್ತಿಯೇ ಮುಖ್ಯವಾಯಿತು. ಕನ್ನಡ ಭಾಷಾ ಭೋಧಕನಾಗಿರುವ ಮಗ ಮಂಜಯ್ಯಗೌಡನ ಬಾಯಿಯಲ್ಲಿ ತೀರಾ ಕೆಟ್ಟ ಕೆಟ್ಟ ಶಬ್ದಗಳು ಬರುತ್ತವೆ. ನಿನ್ನ ಕಾಲು ಕತ್ತರಿಸ್ತೀನಿ, ನೀನು ಯಾವತ್ತು ಸಾಯ್ತಾ ಅಂತ ಕಾಯ್ತಾ ಇದ್ದೀನಿ ಕಣೇ ಅಂತ ಹೆತ್ತ ತಾಯಿಯನ್ನು ನಿಂದಿಸಿದ. ಇದು ಸರಿನಾ?. ಇದು ತಾಯಿಗೆ ಕೊಡುವ ಗೌರವವಾ? ಮೊದಲು ತನ್ನ ತಾಯಿಗೆ ಗೌರವ ಕೊಡುವುದನ್ನು ಕಲಿಯಲಿ. ನಂತರ ಕನ್ನಡಮ್ಮನಿಗೆ ಗೌರವ ಕೊಡಲಿ ಎಂದು ಸಣ್ಣಮ್ಮ ವಿಷಾದದ ಮಾತು ಹೇಳಿದರು.

 ಈತ ಒಂದು ಹಿಂಸೆ ಕೊಟ್ಟಿಲ್ಲ. ಮಗ ಅಂತ ಹೇಳಿಕೊಳ್ಳಲು ನಾಚಿಕೆ ಆಗುತ್ತೆ. ಆತ ಇದ್ದರೂ ಒಂದೇ ಹೋದರೂ ಒಂದೇ. ಅವನಿಗೆ ಸಂಬಂಧಗಳಿಗಿಂತ ಆಸ್ತಿಯೇ ಮುಖ್ಯವಾಯಿತು. ಹೆತ್ತಮ್ಮನಿಗೆ ಒಂದು ತುತ್ತು ಅನ್ನ ಹಾಕದವನು ಈಗ ಬೋಧನೆ ಮಾಡಕ್ಕೆ ಹೋಗ್ತಾವ್ನೆ. ಹೆತ್ತಮ್ಮನ್ನನ್ನು ಬೀದಿ ಪಾಲು ಮಾಡಿದ ಅವನು ನಾನು ಸತ್ತ ಮೇಲೆ ನನ್ನ ಹೆಣ ನೋಡಲೂ ಬರಬಾರದು. ನನ್ನ ಮುಖ ನೋಡಲೂ ಬರಬಾರದು ಎಂದು ಸಣ್ಣಮ್ಮ ಖಡಾಖಂಡಿತವಾಗಿ ಹೇಳಿದರು.

 ಇಂತಹ ನೀತಿಗೆಟ್ಟವನಿಂದ ಮಕ್ಕಳು ಏನನ್ನು ಕಲಿಯಲು ಸಾಧ್ಯ. ಯಾವ ಭೋಧನೆ ಮಾಡಲು ಸಾಧ್ಯ. ಶನಿವಾರ ನಡೆಯಲಿರುವ ದಬ್ಬೇಘಟ್ಟ ಹೋಬಳಿ ಸಮ್ಮೇಳನಾಧ್ಯಕ್ಷನಾಗಿ ಏನು ಸಂದೇಶ ನೀಡಲಿದ್ದಾನೆ. ಇವನಿಗೆ ಯಾವ ನೈತಿಕತೆ ಇದೆ ಎಂದು ಸಣ್ಣಮ್ಮ ಮಂಜಯ್ಯಗೌಡರ ವಿರುದ್ಧ ಕಿಡಿಕಾರಿದರು. 

 ನಾಲ್ಕು ಜನರಿಗೆ ಬುದ್ದಿ ಹೇಳಬೇಕಿದ್ದ ಈ ಮನುಷ್ಯ ಹೆತ್ತಮ್ಮನನ್ನು ನಿಕೃಷ್ಟವಾಗಿ ಕಾಣುತ್ತಿದ್ದಾನೆ. ನನಗೆ ಮೋಸ ಮಾಡಿ ಆಸ್ತಿ ಬರೆಸಿಕೊಂಡಿದ್ದಾನೆ. ಎಲ್ಲಾ ಆಸ್ತಿಯೂ ಇವನಿಗೇ ಬೇಕು ಎಂಬ ದುರಾಸೆ ಇದೆ. ಕಾರ್ಯಕ್ರಮದಲ್ಲಿ ಅವನಿಗೆ ರ‍್ಯಾದೆ ಹೋಗಲಿ ಅಂತಲೇ ಈಗ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇನೆ. ಇಂತಹ ವ್ಯಕ್ತಿಯ ಮುಖ ಜನರಿಗೆ ಗೊತ್ತಾಗಲಿ ಅಂತಲೇ ಈಗ ಹೇಳಿಕೆ ನೀಡುತ್ತಿದ್ದೇನೆ ಎಂದು ಮಂಜಯ್ಯಗೌಡರ ತಾಯಿ ಸಣ್ಣಮ್ಮ ಸ್ಪಷ್ಟಪಡಿಸಿದರು.

ವರದಿ – ಎಸ್. ನಾಗಭೂಷಣ್

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

15 COMMENTS

  1. ನಮ್ಮ ಜನಗಳಿಗೆ ಇಂತಹ ಸಮಾಜ ಕಂಟಕರೆ ಸಿಗುತ್ತಾರೆ ನೋಡಿ.ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಇಂತಹ ಮಾತೃ ದ್ರೋಹಿ ಗಳಿಗೆ ಜನ ಮಣೆ ಹಾಕಿ ಮನ್ನಣೆ ಕೊಡುತ್ತಾರೆ.ನಾವು ಆ ಮನುಷ್ಯನನ್ನು ( ನಿಜ ಹೇಳಬೇಕೆಂದರೆ, ತಾಯಿಗೆ ಕಾಲು ಕತರಿಸುತ್ತೇನೆ ಎಂದವನು ಮೃಗ.) ನಿಂದಿಸುವದಕ್ಕಿಂತ
    ಅವನನ್ನು ಈ ಸ್ಥಾನಕ್ಕೆ ಆರಿಸಿದ ಮುಠ್ಠಾಳ ರನ್ನು ನಿಂದಿಸಬೇಕು.ಇಂದು ರಾಜ್ಯದಲ್ಲಿ ನೈತಿಕತೆ ಮಾಯವಾಗಿದೆ ಎಲ್ಲೆಲ್ಲಿಯೂ ದುಷ್ಟತನ ತುಂಬಿ ತುಳುಕಾಡುತ್ತಿದೆ. ಪ್ರಾಯಶಃ ಇದು ನಮ್ಮನ್ನು ಆಳುತ್ತಿರುವ ಜನ ಪ್ರತಿನಿಧಿಗಳ ಅನುಕರಣೆ ಎನ್ನಿಸುತ್ತಿದೆ. ಕಾಲೇಜಿನ ಅವನ ಸುತ್ತ ಇರುವ ವಿದ್ಯಾರ್ಥಿ
    ವೃಂದ ಹಾಗೂ ಸಹ ಪಾಠಿಗಳು ಇದನ್ನು ಖಂಡಿಸಿ, ಜಿಲ್ಲಾಧ್ಯಕ್ಷರ ಲ್ಲಿ ಮನವಿ ಮಾಡಿ ಈ ಆಯೋಗ್ಯನ ಅಧ್ಯಕ್ಷತೆಯನ್ನು ರದ್ದು ಪಡಿಸಬೇಕು.

    • ಈತ ಯಾವದಕ್ಕೂ ಲಾಯಕ್ಕಿಲ್ಲ, ಹೆತ್ತ್ ಕರಳು ಇಷ್ಟ್ಟು ಸಂಕಟ ಪಟ್ಟು ಹೇಳಬೇಕಾದರೆ ಸಮಾಜದ ಜನ ಹೇಗೆ ಸಹಿಸಿ ಕೊಂಡ್ ಕುರಬೆಕು. ನಾಚಿಕೆಗೇಡು… ಮನಾವಿಯಾ ಮೌಲ್ಯ ಮರೆತ ಮನಷ್ಯ ಇದ್ದು ಸತ್ತಂತೆ… ಆತನಿಂದ ಸಮಾಜಕ್ಕೆ ಏನು ಬೇಡ ಮೊದಲು ಹೆತ್ತವರಾದ ಅವರನ್ನು ಸಂತೃಪ್ತಿಪಡಿಸಲು ಹೇಳಿಕೊಡಿ ಸಾಕು…. ಸಮಾಜದ ನಾಯಕರೇ ದಯವಿಟ್ಟು ಇಂಥವರನ್ನು ಪರಿಶೀಲಿಸಿ…

  2. Inta muttala Nanna makkalige oorina jana Cheemari haki oorininda Hira hakabeku Asti vishayadalli mosa madiddare nyayalaya dalli dhave oodi kambi enisuvante madabeku _ muttala_ ayigya_ dhanapishachi_ 😡😡😡😡😡

  3. ಹೆತ್ತ ತಾಯಿಯ ಹೆಣದ ಮೇಲೆ ಬದುಕನ್ನ ಕಟ್ಟಿಕೊಳ್ಳಬಯಸಿದವನಿಗೆ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ. ಚೆನ್ನಾಗಿದೆ ಚೆನ್ನಾಗಿದೆ.

  4. Very sad,
    Yes there are such people in the present society,
    A person filled with cruelty in behind screen also keep growing and displaying VIP personality,
    This trend is due to more support with corrupted social personalities around him.
    We can’t say he will face difficulties in future for his karna.
    But he might not get good life in next birth
    For now we bless happier life for grandma for her ending days

  5. I never expected such a worst possible treatment to an aged mother by her own son to whom she gave birth and,brought him to such a decent position. It is great shame on him. I request The honorable Assistant com
    missioner, Tiptur, The superintendent of Police,Tumkur, Senior citizens helpline to take IMMEDEATE Drastic step to get legitamate share of the aged old women. It is shame on such a son.

  6. ಇಂತ ಮನೆಹಾಳರನ್ನು ಅಧ್ಯಕ್ಷ ಎಂದು select ಮಾಡಿದವರೇ ಇವನನ್ನು ಒದ್ದು police ಗೆ handover ಮಾಡಿ 🙏

  7. ತಾಯಿಗಿಂತ ದೇವರಿಲ್ಲ ಅಂತಾರೆ. ಈ ಅಧಮ ಮಂಜಯ್ಯ ಗೌಡ ನಾಯಿಗಿಂತಲೂ ಕೀಳು. ಇವನು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾದರೆ, ಅದಕ್ಕಿಂತ ದುರ್ಭಾಗ್ಯ ಕನ್ನಡಿಗರಿಗೆ ಇಲ್ಲ..

  8. ತಾಯಿ ಮೇಲೆ ಗೌರವ ಇಲ್ಲದ ವ್ಯಕ್ತಿ ಭೂಮಿ ಮೇಲೆ ಇರಬಾರದು, ಇಂತ ನೀಚ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಕನ್ನಡ ನಾಡಿಗೆ ಮಾಡಿರುವ ಅವಮಾನ.

  9. ಇಷ್ಟು ಸಾಕು, ಮತ್ತೇನು ಅರ್ಹತೆ ಬೇಕು ಅಧ್ಯಕ್ಷ ಆಗಕೆ🤗. ನಮ್ ಸಮಾಜದಲ್ಲಿ ನಡೆಯುತ್ತಿರುವುದೇ ಹೀಗೆ, ಇಲ್ಲಿ ದುಡ್ಡಿದ್ರೆ ಏನು ಬೇಕಾದ್ರೂ ನಡೆಯುತ್ತೆ😡

  10. People who doesn’t respect their parents should never be allowed to grow in the society. Because a rotten Apple will spoil the whole basket of apples, to save other good apples rotten Apple should be thrown out. So is the case he should never be allowed to have public profile. I am starting it by boycotting him and his works. If any one respects their parents they should also bycott it.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X