ಕಲಬುರಗಿ ನಗರದ ಗೋವಾ ಹೋಟೆಲ್ ಹತ್ತಿರ ಎರಡು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಯುವಕನೋರ್ವ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮಲ್ಲು ಓಂಪ್ರಕಾಶ ಸಂಗೋಳಗಿ (18) ಮೃತ ಯುವಕ, ಇನ್ನೋರ್ವ ಯುವಕ ಶರಣು ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ನಗರ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಮತ್ತು ಸಿಬ್ಬಂದಿ ಭೇಟಿ ನೀಡಿ ಸರಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಲ್ಕಿಸ್ ಬಾನೊ ಪ್ರಕರಣ: ಗೋಧ್ರಾ ಜೈಲಿನ ಅಧಿಕಾರಿಗಳಿಗೆ ಶರಣಾದ ಎಲ್ಲ 11 ಅಪರಾಧಿಗಳು
ಈ ಕುರಿತು ಕಲಬುರಗಿ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.