ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ಮಹಾರಾಜರ ದರ್ಶನಕ್ಕೆಂದು ಆಗಮಿಸಿದ ಮಹಾರಾಷ್ಟ್ರ ಮೂಲದ ಇಬ್ಬರು ಸಹೋದರರು ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಮುಳುಗಿ ಮೃತಪಟ್ಟಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಮಹಾರಾಷ್ಟ್ರದ ಲಾತೂರ ಜಿಲ್ಲೆಯ ಉದಗಿರ ತಾಲೂಕಿನ ನಿವಾಸಿಗಳಾದ ಬಾಲಾಜಿ ವೈಜನಾಥ ಡೊಯಿಜೋಡೆ (40) ಮತ್ತು ಮಹೇಶ ವೈಜನಾಥ ಡೊಯಿಜೋಡೆ (47) ಮೃತ ಇಬ್ಬರು ಸಹೋದರರು ಎಂದು ತಿಳಿದು ಬಂದಿದೆ.
ಇವರೊಂದಿಗೆ ಆಗಮಿಸಿದ ಮೊಹನ ಪಾಟೀಲ ಎಂಬುವರು ಭೀಮಾ ನದಿಯಲ್ಲಿ ಸ್ನಾನ ಮಾಡುವ ವೇಳೆ ಮುಳುಗುತ್ತಿರುವುದನ್ನು ಕಂಡು ಅವರನ್ನು ರಕ್ಷಿಸಲು ಮುಂದಾಗಿರುವ ವೇಳೆ ಇಬ್ಬರು ಸಹೋದರರು ನದಿಯಲ್ಲಿ ಮುಳುಗಿ ಸಾವನಪ್ಪಿದ್ದ ದುರ್ಘಟನೆ ಜರುಗಿದೆ ಎನ್ನಲಾಗಿದೆ. ಆದರೆ, ಸ್ಥಳೀಯರು ಮೊಹನ ಪಾಟೀಲ್ ಅವರನ್ನು ರಕ್ಷಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ‘ಯುವನಿಧಿ’ ಗ್ಯಾರಂಟಿ ಯೋಜನೆ : 7,266 ಅರ್ಜಿ; 2,743 ನಿರುದ್ಯೋಗಿಗಳಿಗೆ ಭತ್ಯೆ
ಈ ಕುರಿತು ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.