ಬೀಚ್ ಗೆ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರು ಪಾನಿಪೂರಿ ತಿನ್ನುವ ವೇಳೆ ಒಂದು ಹೆಚ್ಚುವರಿ ಪಾನಿಪೂರಿ ಕೇಳಿದ್ದಕ್ಕೆ ಅಂಗಡಿಯವರು ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವ ಘಟನೆ ಮಲ್ಪೆ ಬೀಚ್ ಬಳಿ ಮಂಗಳವಾರ ರಾತ್ರಿ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಮಲ್ಪೆ ಬೀಚ್ ಬಳಿಯ ಪಾನಿಪೂರಿ ಅಂಗಡಿಯೊಂದರಲ್ಲಿ ಮಂಗಳವಾರ ರಾತ್ರಿ 8:30ರ ಸುಮಾರಿಗೆ ಪಾನಿಪೂರಿ ತಿನ್ನುವ ವೇಳೆ ಹೆಚ್ಚುವರಿಯಾಗಿ ಒಂದು ಪಾನಿ ಪೂರಿ ನೀಡುವಂತೆ ಕೇಳಿದ ವಿಚಾರಕ್ಕೆ ಮಾತಿನ ಚಕಮಕಿ ನಡೆದು ಪ್ರವಾಸಕ್ಕೆ ಬಂದಿದ್ದ ಮಂಡ್ಯ ಜಿಲ್ಲೆಯ ಪ್ರವಾಸಿಗರಿಗೆ ಮತ್ತು ಸ್ಥಳೀಯ ಪಾನಿಪೂರಿ ಅಂಗಡಿಯ ಎರಡೂ ಕಡೆಯವರಿಂದ ಹಲ್ಲೆ ನಡೆದಿದ್ದು ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಲಾಟೆ ಸಂಬಂಧ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2025 ಕಲಂ: 189(2), 191(2), 191(3), 115(2), 118(1), 352, 351 (2) ಜೊತೆಗೆ 190 BNS ಮತ್ತು 72/2025, ಕಲಂ: 189(2),191(2), 191(3), 115(2), 118(1), 352, 351 (2) ಜೊತೆಗೆ 190 BNS ರಂತೆ ಪ್ರಕರಣ ದಾಖಲಾಗಿರುತ್ತದೆ.
ಇದನ್ನು ಓದಿದ್ದೀರಾ ? ವಾಲ್ಮೀಕಿ ಹಗರಣ | ಸಂಸದ ತುಕಾರಾಂ, ಶಾಸಕರಾದ ಭರತ್ ರೆಡ್ಡಿ, ಗಣೇಶ್ ನಿವಾಸದ ಮೇಲೆ ಇಡಿ ದಾಳಿ
ಈ ಎರಡು ಪ್ರಕರಣಗಳು ಕೇಸ್ ಮತ್ತು ಕೌಂಟರ್ ಕೇಸ್ ಆಗಿದ್ದು, ಮೊದಲ ಪ್ರಕರಣದ ಆರೋಪಿಗಳಾದ ಸುದೀಪ, ಸಂಪತ್, ಪುನೀತ, ಮಹೇಶ, ಕನ್ನ ವೈಜಿ ಅರವಿಂದ ಹಾಗೂ ಎರಡನೇ ಪ್ರಕರಣದ ಆರೋಪಿಗಳಾದ ರಮೇಶ, ಮೋನು, ವಿನೋದ್ ಎಂಬಾತನನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ.
