ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿರುವ ಎಸ್‌ಎಲ್‌ಆರ್‌ಎಂ ಘಟಕ (ತ್ಯಾಜ್ಯ ನಿರ್ವಹಣಾ ಘಟಕ)ದಲ್ಲಿ ಇಂದು ಮುಂಜಾನೆ ಭಾರೀ ಬೆಂಕಿ ಅವಘಡ ಸಂಭವಿಸಿದ್ದು, ತ್ಯಾಜ್ಯ ಸಂಗ್ರಹಣಾ ವಾಹನವೊಂದು ಸ್ಫೋಟಗೊಂಡಿದೆ.
ಘಟಕದ ತುಂಬೆಲ್ಲಾ ಬೆಂಕಿ ಆವರಿಸಿ ಯಂತ್ರೋಪಕರಣಗಳು ಬೆಂಕಿಗಾಹುತಿಹಾಗಿವೆ.
ಮಲ್ಪೆ, ಉಡುಪಿ, ಕುಂದಾಪುರದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಮತ್ತು ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಇದನ್ನೂ ಓದಿ: ಉಡುಪಿ | ಸಂಭವನೀಯ ಪ್ರಕೃತಿ ವಿಕೋಪದ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಿ – ಡಿಸಿ ಡಾ. ಕೆ ವಿದ್ಯಾ ಕುಮಾರಿ
