ಇತ್ತೀಚೆಗೆ ನಿಧನರಾದ ಜಗತ್ತಿನ ಮಹಾಮಾನವತವಾದಿ ಪಾಪಾ ಫೋಪ್ ಫ್ರಾನ್ಸಿಸ್‌ರವರ ಆತ್ಮಕ್ಕೆ ಚಿರಶಾಂತಿ ಕೋರಿ ಹಾಕಿರುವ ಫ್ಲಕ್ಸ್ ಬ್ಯಾನರಿಗೆ ಹಾನಿಮಾಡಿರುವ ಘಟನೆಯನ್ನು ಅಂಬೇಡ್ಕರ್ ಯುವಸೇನೆ ಖಂಡಿಸಿದೆ.
ಮಲ್ಪೆ ವಡಭಾಂಡೇಶ್ವರದ ಪೊಲೀಸ್ ಠಾಣೆಯ ಎದುರಿಗೆ ಹಾಕಿರುವ ಈ ಬ್ಯಾನರನ್ನು ಅದಿತ್ಯವಾರ ಮಧ್ಯರಾತ್ರಿ ಕೆಲವು ಸಮಾಜ ಘಾತುಕ ದುಷ್ಕರ್ಮಿಗಳು ಬ್ಯಾನರಿನ ಹಿಂಬದಿಯಿಂದ ಬಂದು ಹರಿದು ಹಾಕುತ್ತಿರುವುದು ಪಕ್ಕದ ಸಿ.ಸಿ.ಕ್ಯಾಮರದಲ್ಲಿ ದಾಖಲಾಗಿದೆ.
ಮಲ್ಪೆ ಪೊಲೀಸರು ಜಗತ್ತಿನ ಧರ್ಮಗುರುವಿನ ಭಾವಚಿತ್ರವನ್ನು ಅಮಾನುಷ್ಯವಾಗಿ ಹರಿದುಹಾಕಿದ್ದರೂ ಯಾವುದೇ ಕಾನೂನುಕ್ರಮ ಕೈಗೊಳ್ಳದಿರುವುದು ದುಷ್ಟಶಕ್ತಿಗೆ ಬೆಂಬಲಿಸಿದ್ದಂತಿದೆ.
ಬ್ಯಾನರಿಗೆ ಹಾನಿಮಾಡಿರುವ ಬಗ್ಗೆ ಸಂಬಂಧಪಟ್ಟವರು ದೂರು ನೀಡದಿದ್ದರೂ, ಪೊಲೀಸ್ ಠಾಣೆಯ ಎದಯರೇ ಈರೀತಿ ದುಷ್ಕೃತ್ಯ ನಡೆದರೂ ಮೌನವಾಗಿರುವುದು ಅನೇಕ ಶಂಸಯಕ್ಕೆ ಎಡೆಮಾಡಿದೆ.
ಮಲ್ಪೆ ಪೊಲೀಸರು ಸುಮೊಟೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ವಡಭಾಂಡೇಶ್ವರದ ಸುತ್ತುಮುತ್ತಲಿನ ಸಿ.ಸಿ.ಕ್ಯಾಮಾರವನ್ನು ತಪಾಸನೆಮಾಡಿದರೆ ಆರೋಪಿಗಳನ್ನು ಪತ್ತೆಹಚ್ಚಬಹುದಾದರೂ ಈ ಬಗ್ಗೆ ನಿರ್ಲಕ್ಷವಹಿಸಿರುವುದು ಖಂಡನೀಯ ಎಂದು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ತಿಳಿಸಿದ್ದಾರೆ.
ಅಲ್ಲ ಪುಣ್ಯಾತ್ಮ ಅಂಬೇಡ್ಕರ್ ಸಂಘಟನೆ ಮತ್ತು ಕ್ರೈಸ್ತ ಗುರು ಪೋಪ್ ಗೂ ಯಂತ ಸಂಬಂಧ ಮರಾಯ? ಪೋಪ್ ಕೇವಲ ಕ್ರೈಸ್ತ ಧರ್ಮದ ಗುರು ಮಾತ್ರ. ಜಗತ್ತಿನ ಧರ್ಮ ಗುರುವಲ್ಲ.ಯಾಕಂದರೆ ಜಗತ್ತಿನಲ್ಲಿ ಹಲವು ಧರ್ಮಗಳಿವೆ.