ಇಂದು ಕಾರ್ಮಿಕರನ್ನು ಗೌರವಿಸುವುದು ಪುಣ್ಯ ಹಾಗೂ ಗೌರವದ ಕೆಲಸವಾಗಿದೆ. ಈ ಕಾರ್ಮಿಕರು ನಮಗಾಗಿ ಸ್ವಚ್ಚತೆ ಕೆಲಸ ಮಾಡುತ್ತಿದ್ದಾರೆ. ಇಂತಹ ಕಾರ್ಮಿಕರನ್ನು ಗುರುತಿಸುವಂತಹ ಕೆಲಸಗಳು ಸಮಾಜದಲ್ಲಿ ನಡೆಯಬೇಕು ಮುಂದಿನ ದಿನಗಳಲ್ಲಿ ಬಡವರು, ಅಶಕ್ತರು ಹಾಗೂ ಅಂಗವಿಕಲರಿಗಾಗಿ ಬೇರೆ ಬೇರೆ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತದೆ ಎಂದು ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಹೇಳಿದರು.
ಕಾರ್ಮಿಕ ದಿನಾಚಣೆ ಅಂಗವಾಗಿ ಉಡುಪಿ ಜಿಲ್ಲೆಯ ಕಾರ್ಕಳದ ಸಾಲ್ಮರ ಬಳಿಯ ಪ್ರಶಾಂತ್ ವಿಹಾರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸುಮಾರು 37 ಮಂದಿಯನ್ನು ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಕಾರ್ಕಳ ಟೈಗರ್ಸ್ ಆಶ್ರಯದಲ್ಲಿ ಕಾರ್ಕಳ ಪುರಸಭೆಯಲ್ಲಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಸಮಾಜ ಸೇವಕಿ ರಮಿತ ಶೈಲೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸನ್ಮಾನಿತರ ಪರವಾಗಿ ಸುದೇಶ್ ರಾವ್ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕಾರ್ಕಳ ಪುರಸಭಾ ಸದಸ್ಯ ಅವಿನಾಶ್ ಶೆಟ್ಟಿ, ಮಾಜಿ ಸದಸ್ಯ ಪ್ರಕಾಶ್ ರಾವ್, ಬಿಜೆಪಿ ಮುಖಂಡ ಅನಂತ ಕೃಷ್ಣ ಶೆಣೈ, ಉದ್ಯಮಿಗಳಾದ ಹರೀಶ್ ಆಚಾರ್ಯ, ಪ್ರಕಾಶ್ ಶೆಣೈ, ಪ್ರದೀಪ್ ಆಚಾರ್ಯ ಶೃಂಗಾರ, ಹರೀಶ್ ಅಮೀನ್, ಗುರುಪ್ರಸಾದ್ ನಾರಾವಿ, ಸಂತೋಷ್ ಬೆಳ್ಮಣ್, ರಾಜೇಶ್ ಬೆಳ್ಮಣ್, ಕವಿತಾ ಹರೀಶ್, ಪ್ರವೀಣ್ ಕುಲಾಲ್, ರವಿ ಶೆಟ್ಟಿ, ಸುದೀಪ್ ಇನ್ನಿತರ ಭಾಗಿಯಾಗಿದ್ದರು.
