“ಹ್ಯಾಂಡ್ಸ್ ಆನ್ ಸೊಯ್ಲ್, ಹಾರ್ಟ್ಸ್ ವಿತ್ ಇಂಡಿಯಾ” ಎಂಬ ರಾಷ್ಟ್ರವ್ಯಾಪಿ ಅಭಿಯಾನದ ಭಾಗವಾಗಿ, ಚಿಲ್ಡ್ರನ್ ಇಸ್ಲಾಮಿಕ್ ಆರ್ಗನೈಸೇಶನ್ (CIO) ನ ಉಡುಪಿ ಘಟಕವು ಜುಲೈ ಇಂದು ಪರಿಸರ ಜಾಗೃತಿಯನ್ನು ಮೂಡಿಸಲು ಹಾಗೂ ಯುವ ಮನಸ್ಸುಗಳಲ್ಲಿ ಪ್ರಕೃತಿಯ ಕುರಿತು ಜವಾಬ್ದಾರಿಯನ್ನು ಹೆಚ್ಚಿಸಲು ಪ್ಲಾಂಟೇಶನ್ ಡ್ರೈವ್ (ಗಿಡ ನೆಡುವ ಕಾರ್ಯಕ್ರಮ) ಆಯೋಜಿಸಿತು.
ಮೆಹರುನಿಸಾ ಅವರು ನಡೆಸಿದ ಸಂವಾದಾತ್ಮಕ ಅಧಿವೇಶನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಅವರು ದೈನಂದಿನ ಜೀವನದಲ್ಲಿ ಸಸ್ಯಗಳ ಪ್ರಾಮುಖ್ಯತೆ ಮತ್ತು ಅವುಗಳ ವಿವಿಧ ಉಪಯೋಗಗಳ ಬಗ್ಗೆ ಮಕ್ಕಳಿಗೆ ತಿಳಿಯಪಡಿಸಿದರು.

ಅಧಿವೇಶನದ ನಂತರ, CIO ಮಕ್ಕಳು, ICC ಹುಡುಗರು ಮತ್ತು JIH ಕಾರ್ಯಕರ್ತರು ಉಡುಪಿಯ ಜಾಮಿಯಾ ಮಸೀದಿಯ ಆವರಣದಲ್ಲಿ ಸಸಿಗಳನ್ನು ನೆಡುವಲ್ಲಿ ಸಕ್ರಿಯವಾಗಿ ಭಾಗವಹಿಸಿದರು.
ಜಾಮಿಯಾ ಮಸೀದಿಯ ಜನಾಬ್ ರಿಯಾಜ್ ಅಹ್ಮದ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಮಕ್ಕಳು ಮತ್ತು ಸಂಘಟಕರ ಪ್ರಯತ್ನಗಳನ್ನು ಶ್ಲಾಘಿಸಿದರು.
ಈ ಅಭಿಯಾನವು ಮಕ್ಕಳಲ್ಲಿ ಮಣ್ಣಿನ ಜ್ಞಾನ, ಪರಿಸರ ಕುರಿತು ಆಸಕ್ತಿಯನ್ನು ಮೂಡಿಸುದರೊಂದಿಗೆ ಭವಿಷ್ಯ ಭಾರತದತ್ತ ಉದಾತ್ತ ಪ್ರಜೆಯಾಗಿ ಬೆಳೆಯಲು ಪ್ರೇರಕ ಶಕ್ತಿಯಾಗಲಿದೆಯೆಂದು ಆಯೋಜಕರು ತಿಳಿಸಿದ್ದಾರೆ.