ಕರಾವಳಿ ಜಿಲ್ಲೆಗಳಲ್ಲಿ ಕೆಂಪು ಕಲ್ಲು ಹಾಗೂ ಮರಳು ಸಮಸ್ಯೆಯಿಂದ ಜಿಲ್ಲೆಯಲ್ಲಿರುವ ಸಾಮಾನ್ಯ ಜನರು ಚಿಕ್ಕ-ಪುಟ್ಟ ಮನೆ ಕಟ್ಟಲು ಸಾಧ್ಯವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇವರನ್ನು ಅವಲಂಭಿಸಿ ಮನೆಗಳನ್ನು ಕಟ್ಟುವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಹಾಗೂ ಕಲ್ಲು ಕೋರೆಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಕಲ್ಲು ಸಾಗಿಸುವ ವಾಹನ ಚಾಲಕರು ಅದರ ಕಾರ್ಮಿಕರು ಹಲವು ತಿಂಗಳಿಂದ ಕೆಲಸ ಇಲ್ಲದೇ ನಿರದ್ಯೋಗಿಗಳಾಗಿ ಕುಟುಂಬ ನಿರ್ವಹಣೆಗೆ ತೆಗೆದ ಸಾಲಗಳ ಕಂತುಗಳನ್ನು ತೀರಿಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ನೆಲಕಚ್ಚುತ್ತಿದೆ. ಆದುದರಿಂದ ತಾವು ಈ ಜನಗಳ ಕುಟುಂಬಕ್ಕಾಗಿ ಗಣಿಗಾರಿಕೆಯಲ್ಲಿ ಈಗಿರುವ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ಸರಳಗೊಳಿಸಿ ಉದ್ಯೋಗ ಸಿಗುವಂತೆ ಮಾಡಬೇಕು ಎಂದು ಜಿಲ್ಲೆಯ ಕಟ್ಟಡ ಕಾರ್ಮಿಕರು ಈಗಾಗಲೇ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಕೂತಿದ್ದಾರೆ.

ಮರಳು ಕೊರತೆ ಇಲ್ಲ, ಆದರೆ ಮರಳುಗಾರಿಕೆಯಲ್ಲಿ ಸಮಸ್ಯೆ ಹೂಳೆತ್ತುವ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಉಡುಪಿ ಜಿಲ್ಲೆಯ ಹಲವು ನದಿಗಳಲ್ಲಿ ಮರಳು ಘಟ್ಟದಿಂದ ಸಾಗಿ ಬರುವ ಮರಳು ಶೇಖರಣೆಯಾಗುತ್ತಿದೆ. ಈ ರೀತಿ ಶೇಖರಣೆ ಆಗುತ್ತಿರುವ ಮರಳನ್ನು ಕೆಲವು ನದಿಗಳಲ್ಲಿ ಹೂಳೆತ್ತದೇ ಇರುವುದರಿಂದ ಮಳೆಗಾಲದಲ್ಲಿ ನೆರೆಗಳು ಬಂದು ಜನವಸತಿ ಪ್ರದೇಶಗಳು ಮುಳುಗಡೆ ಆಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ಸಂಬಂಧಿಸಿದಂತೆ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಕರ್ನಾಟಕ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಸದರಿ ನದಿಯಲ್ಲಿ ಮರಳು ತುಂಬಿಕೊಂಡ ಪರಿಣಾಮವಾಗಿ ನದಿಯ ಹರಿಯುವಿಕೆ ತಿರುವು ಬದಲಾಯಿಸಿದೆ ಇದು ಅಪಾಯಕಾರಿ ಎಂದು ತಿಳಿಸಿದೆ. ಇದೇ ರೀತಿಯಲ್ಲಿ ಉಡುಪಿ ಜಿಲ್ಲೆಯ ಕೆಲವು ಹೊಳೆ ಮತ್ತು ನದಿಗಳಲ್ಲಿ ಹೂಳೆತ್ತದೇ ಇರುವುದು ಪ್ರತಿಬಾರಿ ನೆರೆ ಬರಲು ಕಾರಣವಾಗುತ್ತಿದೆ. ಈ ರೀತಿ ಹೂಳೆತ್ತುವ ಕಾರ್ಯ ಎಲ್ಲಾ ಹೊಳೆ ಮತ್ತು ನದಿಗಳಲ್ಲಿ ನಡೆಸಿದರೆ ಸ್ಥಳೀಯವಾಗಿಯೂ ಅಲ್ಪ ಸ್ವಲ್ಪ ಮರಳು ಸಿಗುತ್ತದೆ. ಜಿಲ್ಲೆಯಲ್ಲಿ ಮರಳಿಗೆ ಕೊರತೆ ಇಲ್ಲ. ಅಪಾಯವಿಲ್ಲದ ಕೆಲವು ಕಡೆಗಳಲ್ಲಿ ಮರಳುಗಾರಿಕೆಗೆ ಅವಕಾಶ ನೀಡಬೇಕು. ಆ ಮೂಲಕ ಪ್ರತಿವರ್ಷ ಮರಳು ಸ್ಥಳೀಯರಿಗೆ ಸಿಗಲು ಸಾಧ್ಯವಾಗಬಹುದು. ಎಲ್ಲಾ ಕಡೆಗಳಲ್ಲಿಯೂ ಸಾಂಪ್ರದಾಯಿಕ ಮರಳುಗಾರಿಕೆಗೆ ಹೆಚ್ಚು ಆದ್ಯತೆ ಕೊಡಬೇಕು. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ನಮ್ಮ ಬೇಡಿಕೆಗಳನ್ನು ಆಗ್ರಹಿಸಿ ಜಿಲ್ಲೆಯ ನೋಂದಾಯಿತ ಮೂರು ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘಟನೆಗಳು ಸಮನ್ವಯ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಕಾರ್ಮಿಕ ಹೋರಾಟಗಾರ ಸಿಐಟಿಯು ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕರಾವಳಿ ಜಿಲ್ಲೆಯಲ್ಲಿ ಕೆಂಪು ಕಲ್ಲಿನಿಂದ ಸಣ್ಣ ಸಣ್ಣ ಮನೆಯನ್ನು ಕಟ್ಟುವ ಪದ್ದತಿ ಮೊದಲಿನಿಂದಲೂ ಇದೆ. ಕರಾವಳಿಯಲ್ಲಿ ಹೆಚ್ಚು ಮಳೆ ಗಾಳಿ ಇರುವಂತಹ ಪ್ರದೇಶ ಈ ಪ್ರದೇಶಗಳಲ್ಲಿ ಮನೆಗಳು ಗಟ್ಟಿಯಾಗಿರಬೇಕು ಎನ್ನುವಂತಹ ಕಾರಣಕ್ಕಾಗಿ ಮಳೆ ಗಾಳಿಯಿಂದ ರಕ್ಷಣೆ ಪಡೆಯಲು ಕೆಂಪು ಕಲ್ಲನ್ನು ಬಳಸುತ್ತಾರೆ. ದೊಡ್ಡ ದೊಡ್ಡ ಕಂಟ್ರಾಕ್ಟ್ ಗಾರರು ದೊಡ್ಡ ದೊಡ್ಡ ಮನೆಗಳನ್ನು ಹೋಲೋ ಬ್ಲಾಕ್ ನಲ್ಲಿ ಕಟ್ಟುತ್ತಿದ್ದಾರೆ ಆದರೆ ಸಣ್ಣ ಸಣ್ಣ ಮನೆಯವರು ಬಾಳಿಕೆ ಬರ ಬೇಕು ಎನ್ನುವಂತಹ ಕಾರಣಕ್ಕಾಗಿ ಪದೇ ಪದೇ ಮನೆ ಕಟ್ಟಲು ಸಾಧ್ಯವಾಗದ ಕಾರಣಕ್ಕಾಗಿ ಅವರು ಕೆಂಪು ಕಲ್ಲನ್ನು ಹೆಚ್ಚು ಬಳಕೆ ಮಾಡುತ್ತಾರೆ. ಆದರೆ ಕೆಂಪು ಕಲ್ಲಿಗೆ 35 ರೂಪಾಯಿ ಇದ್ದಂತಹ ರೇಟು ಇವತ್ತು ಸುಮಾರು ಮೂರು ಪಟ್ಟು ಹೆಚ್ಚು 75ರೂ ಗಳಷ್ಟು ದಲ್ಲಾಳಿಗಳ ಮೂಲಕ ಪಡೆಯುವ ಪರಿಸ್ಥಿತಿ ಬಡವರಿಗೆ ಬಂದೊದಗಿದೆ, ಬಡವರಿಗೆ ಈ ರೀತಿ ಕ್ರಯ ಕೊಟ್ಟು ಪಡೆಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ನಮ್ಮ ಜಿಲ್ಲೆಯ ಬಡ ಜನರು ಇದ್ದಾರೆ. ಜಿಲ್ಲಾಡಳಿತ 147 ಗಣಿಗಳಿಗೆ ನಾವು ಲೈಸಸ್ಸ್ ಕೊಟ್ಟಿದ್ದೇವೆ ಹಾಗಾಗಿ ಕೆಂಪು ಕಲ್ಲಿಗೆ ಏನು ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿಯವರು ಮಾಹಿತಿಯನ್ನು ಕೊಡುತ್ತಿದ್ದಾರೆ. ಆದರೆ ಜಿಲ್ಲಾಡಳಿತ ಲೈಸನ್ಸ್ ನೀಡಿದ 147 ಗಣಿಯಲ್ಲಿ ಗುಣಮಟ್ಟದ ಕಲ್ಲುಗಳು ಸಿಗುತ್ತಿಲ್ಲ ಮೇಲ್ಪದರಲ್ಲಿ ಮಾತ್ರ ಸ್ವಲ್ಪ ಕಲ್ಲು ಸಿಕ್ಕಿದರೆ ಇನ್ನು ಅಡಿ ಹೋದಹಾಗೆ ಕಲ್ಲಿನ ಗುಣಮಟ್ಟ ಮತ್ತು ಬಳಸಲು ಅಸಾಧ್ಯವಾದ ವಾಗಿರುವುದರಿಂದ ಜನರಿಗೆ ಪೂರೈಕೆ ಆಗುತ್ತಿಲ್ಲ, ಮತ್ತು ಅವಶ್ಯಕತೆಗೆ ಅನುಗುಣವಾಗಿ ಪೂರೈಕೆ ಆಗುತ್ತಿಲ್ಲ ಹಾಗಾಗಿ ದಲ್ಲಾಳಿಗಳು ಬೆಲೆಯನ್ನು ಏರಿಕೆ ಮಾಡುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಗೊತ್ತಿದ್ದು ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಶೀಘ್ರವಾಗಿ ಮಾನ್ಯ ಜಿಲ್ಲಾಧಿಕಾರಿಗಳು ಅವರ ಅಧಿಕಾರ ವ್ಯಾಪ್ತಿಯಲ್ಲಿ ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಅವರ ಅಧ್ಯಕ್ಷತೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ನಮ್ಮ ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆ ಜಂಟಿ ಸಭೆ ನಡೆಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಚಂದ್ರಶೇಖರ್ ದೇವಾಡಿಗ, ಜಿಲ್ಲೆಯಲ್ಲಿ ಬಡವರು ಮನೆಯನ್ನು ಪಿಲ್ಲರ್ ನಿಂದ ಕಟ್ಟಲು ಸಾಧ್ಯವಿಲ್ಲದಿರುವುದರಿಂದ ಕೆಂಪು ಕಲ್ಲು ಅವಲಂಭಿಸಿದ್ದಾರೆ ಜಿಲ್ಲಾಡಳಿತದ ನೀತಿಯಿಂದ ಬಡವರಿಗೆ ಮನೆ ಕಟ್ಟುವ ಕನಸು ನುಚ್ಚು ನೂರಾಗಿದೆ ಮನೆ ಕಟ್ಟುವ ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದೇ ನಿರುದ್ಯೋಗಿದ್ದಾರೆ ಮುಂದೆ ಮರಳು ಸಮಸ್ಯೆಯೂ ಬಿಗಡಾಯಿಸಲಿದೆ ಇದರ ವಿರುದ್ಧ ತೀವ್ರ ಹೋರಾಟದ ಅಗತ್ಯವಿದೆ. ಇದು ಸಾಮಾನ್ಯ ಜನರ ಬದುಕಿನ ಪ್ರಶ್ನೆ, ಕೆಂಪು ಕಲ್ಲು ತೆಗೆಯುವ ಕೆಲಸಗಾರಿಗೆ ಆ ಕೆಲಸ ಬಿಟ್ಟು ಬೇರೆ ಕೆಲಸ ಗೊತ್ತಿಲ್ಲ, ಕಲ್ಲು ತೆಗೆಯುವ ಕಾರ್ಮಿಕರು, ಕಲ್ಲುಗಳನ್ನು ಸಾಗೀಸುವ ಕಾರ್ಮಿಕರು ಎಲ್ಲರೂ ಸಹ ಸಾಮಾನ್ಯ ವಿಭಾಗದ ಜನರು ಅವರ ಜೀವನೋಪಾಯವನ್ನು ರಕ್ಷಣೆ ಮಾಡುವಂತಹದು ಸಹ ಸರ್ಕಾರದ ಕರ್ತವ್ಯ ಆಗಿರುವುದರಿಂದ ಇದಲ್ಲಿರುವ ನೀತಿಗಳನ್ನು ಸಹ ಸರಳೀರಕಣ ಮಾಡಬೇಕು ಎಷ್ಟು ಲಭ್ಯತೆ ಇದೆಯೋ ಎಂಬುದನ್ನು ಸಹ ನೋಡಿಕೊಳ್ಳಬೇಕು. ಕೇವಲ ಕಾನೂನಿನ ಚೌಕಟ್ಟಿನಲ್ಲಿ ಹಿಡಿದಿಟ್ಟರೆ ಸಾವಿರಾರು ಕುಟುಂಬಗಳು ಉಪವಾಸ ಬೀಳುವಂತಹ ಪರಿಸ್ಥಿತಿ ಎದುರಾಗಬಹುದು ಎಂಬದನ್ನು ಸಹ ನಾವು ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.

ಮಹಿಳಾ ಪರ ಹೋರಟಗಾರ್ತಿ ನಾಗರತ್ನ ಬೈಂದೂರು ಮಾತನಾಡಿ ಈಗಾಗಲೇ ಕೆಂಪು ಕಲ್ಲಿನ ಸಮಸ್ಯೆ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ ಹಾಗಾಗಿ ಕಾರ್ಮಿಕರ ಹೋರಾಟ ಅನಿವಾರ್ಯವಾಗಿದೆ. ನಮ್ಮ ಬೇಡಿಕೆ ಜಿಲ್ಲೆಯಲ್ಲಿರುವ ಕೆಂಪುಕಲ್ಲು ಅಥವಾ ಮುರುಕಲ್ಲು ಎಂದು ಕರೆಯಲ್ಪಡುವ ಲ್ಯಾಟರೈಟ್ ಕೋರೆಗಳಿಗೆ ಅಪಾಯವಿಲ್ಲದ ಸ್ಥಳಗಳಲ್ಲಿ ಪರವಾನಿಗೆ ನೀಡಬೇಕು. ಕೇರಳ ಮಾದರಿಯಲ್ಲಿ ರಾಜಧನ ಅಥವಾ ರಾಯಲ್ಟಿ ಪ್ರತಿ ಟನ್ನಿಗೆ ರೂ. 76/- ಮಾತ್ರ ಪಾವತಿಸಲು ಅವಕಾಶ ನೀಡಬೇಕು. ಈಗ ಇರುವ ಬೇರೆ ಬೇರೆ ತೆರಿಗೆಗಳನ್ನು ಕೈ ಬಿಡಬೇಕು. ಆರು ತಿಂಗಳಿಗೊಮ್ಮೆ ಪರವಾನಿಗೆ ನವೀಕರಿಸುವುದನ್ನು ಕೈಬಿಟ್ಟು ವರ್ಷಕೊಮ್ಮೆ ನವೀಕರಿಸಲು ಅವಕಾಶ ನೀಡಬೇಕು. ಇದರಿಂದ ಅನಧಿಕೃತ ವ್ಯವಹಾರ ತಡೆಯಲು ಸಾಧ್ಯವಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಕೆಂಪುಕಲ್ಲು ದೊರಕುವ ಕೋರೆಗಳು ಕಡಿಮೆ ಇರುವುದರಿಂದ ದಕ್ಷಿಣ ಕನ್ನಡ ಕೋರೆಗಳಿಂದ ಬರುವ ಕೆಂಪು ಕಲ್ಲುಗಳಿಗೆ ನಿರ್ಬಂಧ ಹೇರಬಾರದು. ಕೆಂಪುಕಲ್ಲು ದುಬಾರಿ ದರದಲ್ಲಿ ವಿತರಣೆ ಮಾಡುವವರ ಮೇಲೆ ಕ್ರಮ ಜರುಗಿಸಬೇಕು. ಈ ಹಿಂದಿನ ದರದಂತೆ ಕಲ್ಲು ಜನರಿಗೆ ಸಿಗುವಂತಾಗಬೇಕು. ಕಳೆದ ಹಲವಾರು ತಿಂಗಳುಗಳಿಂದ ಕೆಲಸವಿಲ್ಲದೆ ಇದ್ದ ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರೂ. 10 ಸಾವಿರ ಪರಿಹಾರ ಹಣ ನೀಡಬೇಕು. ಕೆಂಪುಕಲ್ಲು, ಮರಳು ಸಮಸ್ಯೆ ಬಗೆಹರಿಸಲು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಸಂಘಟನೆಯ ಪ್ರಮುಖರೊಂದಿಗೆ ಜಂಟಿ ಸಭೆ ನಡೆಸಬೇಕು ಎಂದು ಹೇಳಿದರು.

ಒಟ್ಟಿನಲ್ಲಿ ಜಿಲ್ಲಾಡಳಿತ ಈ ಬಗ್ಗೆ ಕಾರ್ಮಿಕ ಮುಖಂಡರ ಜೊತೆ ಮಾತನಾಡಿ ಇದಕೊಂದು ಪೂರ್ಣ ವಿರಾಮ ಹಾಕೂದರ ಜೊತೆಗೆ ಕರಾವಳಿ ಜಿಲ್ಲೆಯಲ್ಲಿರುವ ಹೆಚ್ಚಿನ ಮಧ್ಯಮ ಮತ್ತು ಬಡ ಕುಟುಂಬದ ಜನರಿಗೆ ಕೈಗೆಟಕುವ ದರದಲ್ಲಿ ಕೆಂಪು ಮಣ್ಣಿನಿಂದ ನಿರ್ಮಿಸಬಹುದಾದ ಸಣ್ಣದಾದ ಸೂರನ್ನು ಕಟ್ಟಿಕೊಳ್ಳುವ ಕನಸನ್ನು ನನಸು ಮಾಡಬೇಕಿದೆ.

https://shorturl.fm/ddIJu