ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಹತ್ಯಾಕಾಂಡದ ಪ್ರತೀಕಾರವಾಗಿ ಭಾರತೀಯ ಸೇನೆ ಉಗ್ರರನ್ನು, ಶತ್ರುರಾಷ್ಟ್ರದ ದುಷ್ಟ ಶಕ್ತಿಗಳನ್ನು ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ಥಾನಿ ಉಗ್ರಗಾಮಿಗಳನ್ನು ದಮನಿಸಿ, ನಾಶಪಡಿಸಿದ ಸೇನೆಯ ನೇತೃತ್ವ ವಹಿಸಿದ ಧೀರೆ ಕರ್ನಲ್ ಸೋಫಿಯಾ ಖುರೈಶಿ ವಿರುದ್ದ ಅವಮಾನಕಾರಿ ಹೇಳಿಕೆ ನೀಡಿರುವ ಮದ್ಯಪ್ರದೇಶದ ಬಿಜೆಪಿ ಸರ್ಕಾರದ ಸಚಿವ ಕುನ್ವರ್ ವಿಜಯ್ ಶಾ ವಿರುದ್ದ ಕ್ರಮಕೈಗೊಳ್ಳಲು ಒತ್ತಾಯಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ನಾಯಕರು ಉಡುಪಿ ಜಿಲ್ಲಾಧಿಕಾರಿ ಶ್ರೀಮತಿ ಡಾ.ವಿದ್ಯಾ ಕುಮಾರಿ ಇವರಿಗೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ನಿರ್ದೇಶನದಂತೆ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್ ರವರ ನೇತೃತ್ವದಲ್ಲಿ ಮನವಿ ನೀಡಿದರು.
ಈ ಸಂಧರ್ಭದಲ್ಲಿ ಕೆಪಿಸಿಸಿ ಉಪಾದ್ಯಕ್ಷರಾದ ಎಂ ಎ ಗಫೂರ್,ನಾಯಕರುಗಳಾದ ಡಾ. ಫಾರೂಕ್ ಚಂದ್ರನಗರ, ಇಸ್ಮಾಯಿಲ್ ಆತ್ರಾಡಿ, ಹಬೀಬ್ ಆಲಿ, ರೋಶನ್ ರೋಡ್ರಗ್ರೀಸ್, ಹನೀಫ್ ಗುಲ್ವಾಡಿ, ಮತ್ತಿತರರು ಉಪಸ್ಥಿತರಿದ್ದರು.