ಪೆಟ್ರೋಲ್, ಡಿಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಇಂದು ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ನಗರದ ಅಜ್ಜರಕಾಡು ಹುತಾತ್ಮ ವೇದಿಕೆ ಬಳಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಪ್ರತಿಭಟನಕಾರರು ಸ್ಥಳದಲ್ಲೇ ಸೌದೆ ಒಲೆ ಮೂಲಕ ಚಹಾ ಮಾಡಿ ಕುಡಿದು ಕೇಂದ್ರ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಂ ಎ ಗಫೂರ್, ಬಿಜೆಪಿಯರ ಜನಾಕ್ರೋಶ ಯಾತ್ರೆ ಕೇಂದ್ರ ಸರ್ಕಾರದ ವಿರುದ್ದವೋ ರಾಜ್ಯ ಸರ್ಕಾರದ ವಿರುದ್ಧವೂ, ದೇಶಗಳಲ್ಲಿನ ಅರ್ಥಿಕ ವ್ಯವಸ್ಥೆ ಯಾವ ಮಟ್ಟದಲ್ಲಿ ಹದಗೆಟ್ಟಿದೆ ಎಂದು ಎಲ್ಲರಿಗೂ ತಿಳಿದಿದೆ. ಬಡವರು ಇನ್ನಷ್ಟು ಬಡವರಾಗಿಯೇ ಉಳಿದಿದ್ದಾರೆ, ಬಡವರ ಬಗ್ಗೆ ಸ್ವಲ್ಪ ಕಾಳಜಿ ಇಲ್ಲದ ಬಿಜೆಪಿ ಸರ್ಕಾರ ಬಡವರನ್ನು ತುಳಿಯುವ ಕೆಲಸ ಮಾಡುತ್ತಿದೆ. ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವುದು ಬಿಡಿ ಇರುವ ಉದ್ಯೋಗವನ್ನೇ ಖಾಸಗಿಯವರಿಗೆ ನೀಡುತ್ತದೆ ಎಂದು ಹೇಳಿದರು. ವಾಹನ ಚಾಲಕರು, ರಿಕ್ಷಾ ಚಾಲಕರು ರಸ್ತೆಯ ಇಳಿಯುವ ವಾತಾವರಣ ನಿರ್ಮಾಣವಾಗಿದೆ ಬೆಲೆ ಏರಿಕೆಯಿಂದ ಒಲೆ ಉರಿಸುವ ಪರಿಸ್ಥಿತಿ ತಂದು ನಿಲ್ಲಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ, ಮೈಕ್ರೋ ಇಂಡಸ್ಟ್ರಿಯನ್ಬು ತಳಮಟಕ್ಕೆ ತಲುಪಿಸುವಲ್ಲಿ ಬಿಜೆಪಿ ಸರ್ಕಾರದ ಪಾಲು ಹೆಚ್ಚು ಇದ್ದು, 12 ಕೋಟಿ ಜನರಿಗೆ ಉದ್ಯೋಗ ನೀಡುತ್ತೇವೆ ಎಂದು ನಿರುದ್ಯೋಗವನ್ನೇ ಹೆಚ್ಚಿಸಿದೆ ಎಂದು ಹೇಳಿದರು.
ಜನರ ಕಷ್ಟವನ್ನು ಅರಿತು ಐದು ಯೋಜನೆಯನ್ನು ತಂದು ಅವರ ಕಷ್ಟಕ್ಕೆ ಸ್ಪಂದಿಸಿದರೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನೇ ಟೀಕಿಸುತ್ತಿದ್ದಾರೆ. 62 ಸಾವಿರ ಕೋಟಿ ರೈತರ ಸಾಲ ಮನ್ನ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಮಾತ್ರ ರೈತರ ಬಡವರ ಕಾಳಜಿಯಿದೆ ಹೊರತು ಉದ್ಯಮಿಗಳ ಸಾಲ ಮನ್ನ ಮಾಡಿ, ರೈತರಿಗೆ, ಮೀನುಗಾರರಿಗೆ ಮೋಸ ಮಾಡಿದ ಬಿಜೆಪಿ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿಯಿಲ್ಲ ಎಂದು ಹೇಳಿದರು.

ನಗರ ಸಭಾ ಸದಸ್ಯ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ಅಂಜುಮ್, ಗಣೇಶ್ ನರ್ಗಿ, ಹರೀಶ್ ಕಿಣಿ, ಅಬ್ದುಲ್ ಅಝೀಜ್ ಮುಂತಾದವರು ಉಪಸ್ಥಿತರಿದ್ದರು.