ಭಾರತೀಯ ಹವಾಮಾನ ಇಲಾಖೆಯು ಮೇ 24ರಿಂದ 30ರ ವರೆಗೆ ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಉಡುಪಿ ಮತ್ತು ದ.ಕ.ಜಿಲ್ಲೆಯ ಬಹುತೇಕ ಕಡೆ ಶುಕ್ರವಾರ ಉತ್ತಮ ಭಾರೀ ಮಳೆಯಾಗಿದೆ. ಮುಂಗಾರು ಪೂರ್ವ ಮಳೆಯು ಕೆಲವು ಕಡೆ ಅನಾಹುತಗಳನ್ನು ಸೃಷ್ಟಿಸಿದೆ. ಜಿಲ್ಲೆಯ ಹಲವೆಡೆ ಶುಕ್ರವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು, ಆಗಾಗ ಮಳೆ ಸುರಿದಿದೆ. ಮಧ್ಯಾಹ್ನ ಮತ್ತು ಸಂಜೆಯ ವೇಳೆಗೆ ಮಳೆ ಬಿರುಸು ಪಡೆದಿತ್ತು.
ಉಡುಪಿ ಜಿಲ್ಲೆಯ ಕಾರ್ಕಳ- 42.7, ಕುಂದಾಪುರ – 20.4, ಬೈಂದೂರು- 37.5, ಬ್ರಹ್ಮಾವರ – 31.2, ಕಾಪು – 51.2, ಹೆಬ್ರಿ – 30.3 ಮಿ.ಮೀ ಮಳೆ ಆಗಿದೆ.
ದ.ಕ.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8ರಿಂದ ಶುಕ್ರವಾರ ಬೆಳಗ್ಗೆ 8ರ ಮಧ್ಯೆ ಸರಾಸರಿ 18.4 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿ 24.4 ಮಿಮೀ, ಬಂಟ್ವಾಳ 23.5 ಮಿಮೀ, ಮಂಗಳೂರು 30.1 ಮಿಮೀ, ಪುತ್ತೂರು 8.8 ಮಿಮೀ, ಸುಳ್ಯ 3.5 ಮಿಮೀ, ಮೂಡುಬಿದಿರೆ 31.6 ಮಿಮೀ, ಕಡಬ 8.1 ಮಿಮೀ, ಮೂಲ್ಕಿ 37 ಮಿಮೀ, ಉಳ್ಳಾಲ 23.5 ಮಿಮೀ. ಮಳೆಯಾಗಿದೆ.