ಉಡುಪಿ‌ | ಡಿಜಿಟಲ್ ಅರೆಸ್ಟ್ ಮೂಲಕ 89ಲಕ್ಷ ರೂ ವಂಚನೆ ಪ್ರಕರಣ, ಓರ್ವನ ಬಂಧನ

Date:

Advertisements

ಉಡುಪಿ ನಗರದ ಬಡಗುಪೇಟೆಯ ಜ್ಯುವೆಲ್ಲರಿ ಅಂಗಡಿಯ ಮಾಲಕರಿಗೆ ಡಿಜಿಟಲ್ ಎರೆಸ್ಟ್ ಹೆಸರಿನಲ್ಲಿ 89ಲಕ್ಷ ರೂ. ವಂಚಿಸಿದ ಪ್ರಕರಣಕ್ಕೆ ಓರ್ವನನ್ನು ಜಿಲ್ಲಾ ಸೆನ್ ಪೊಲೀಸರು ಬಂಧಿಸಿ 7ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.

ಕನ್ನಾರ್ ಶಂಕರ್ ಆಚಾರ್ಯರ ಪುತ್ರ ಸಂತೋಷ ಕುಮಾ‌ರ್ (45)ರಿಗೆ ಕಳೆದ ಸೆ. 11 ರಂದು ಯಾರೋ ಅಪರಿಚಿತರು ಕರೆಮಾಡಿ Telecom Regulatory Authority of India ದಿಂದ ಕರೆ ಮಾಡುತ್ತಿದ್ದು, ನಿಮ್ಮ ಮೊಬೈಲ್ ನಂಬ್ರವು ನಿಮ್ಮ ಹೆಸರಿನಲ್ಲಿ ಇದೆ ಈ ನಂಬ್ರದಲ್ಲಿ ಇಲ್ಲೀಗಲ್ ಅಡ್ವಟೈನ್‌ಮೆಂಟ್ ಹಾಗೂ ಹೆರಾಸಿಂಗ್ ಟೆಕ್ಸ್ ಮೆಸೇಜಸ್ ಆಗಿದ್ದು, ನಿಮ್ಮ ಮೇಲೆ ಒಟ್ಟು 17 ಎಫ್.ಐ.ಆರ್ ಆಗಿದ್ದು, ಇನ್ನು 2 ಗಂಟೆಯ ಒಳಗೆ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಕಾಂಟಾಕ್ಟ್ ನಂಬ್ರ ಡಿಸ್‌ಕನೆಕ್ಟ್ ಮಾಡುತ್ತೇವೆ. ನಿಮ್ಮ ಮೇಲೆ ಆರೆಸ್ಟ್ ವಾರಂಟು ಆಗಿರುತ್ತದೆ ಎಂಬುದಾಗಿ ಬೆದರಿಸಿದ್ದು ನಂತರ ವಾಟ್ಸಪ್ ವಿಡಿಯೋ ಕರೆ ಮಾಡಿದ್ದು, ಕರೆ ಮಾಡಿದ ವ್ಯಕ್ತಿಯು ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿದ್ದು, ಇನ್ಸಪೆಕ್ಟರ್ ಸೈಬರ್ ಅಂದೇರಿ ಈಸ್ಟ್ ಮುಂಬಾಯಿ ಎಂದು ಹೇಳಿ ಕೇಸು ಆಗಿರುವ ಬಗ್ಗೆ ಹಾಗೂ ಪಿರ್ಯಾದಿದಾರರ ಆಧಾರ್ ಕಾರ್ಡ್ ಲಿಂಕಿನಲ್ಲಿರುವ ಬ್ಯಾಂಕ್ ಅಕೌಂಟ್ ನರೇಶ್ ಗೋಯೆಲ್ ಎಂಬಾತನ ಮನಿ ಲಾಂಡ್ರಿಂಗ್ ಕೇಸ್‌ನಲ್ಲಿ ಅಕೌಂಟ್ ಇನ್‌ವಾಲ್‌ಮೆಂಟ್ ಇದೆ ಎಂದು ತಿಳಿಸಿ ಆದಾಯದ ಮೂಲ ಚೆಕ್ ಮಾಡುವುದಾಗಿ ತಿಳಿಸಿ ಪಿರ್ಯಾದಿದಾರರ ಬ್ಯಾಂಕ್ ಖಾತೆ ಹಾಗೂ ಅದರಲ್ಲಿನ ಹಣದ ವಿವರವನ್ನು ಪಡೆದು ಸದ್ರಿ ಹಣವನ್ನು ಆರ್‌ಬಿಐಯಿಂದ ಫಂಡ್ ವೆರಿಪೇಕಶನ್ ಮಾಡಲು State Bank of India ಕ್ಕೆ ಜಮಾ ಮಾಡಲು ಹೇಳಿ ಹಣದ ಬಗ್ಗೆ ಕ್ಲಿಯರ್ ಆಗುವವರೆಗೆ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿ ರೂ. 89,00,000 ಹಣವನ್ನು ವರ್ಗಾಯಿಸಿಕೊಂಡಿರುತ್ತಾರೆ. ಬಳಿಕ ಮೊಸ ಹೋದ ಬಗ್ಗೆ ಅರಿವಾದ ಕನ್ನಾರ್ ಸಂತೋಷ ಕುಮಾರ್ ಸೆನ್ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳ ಪತ್ತೆಗೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯದ ಪುಣೆ ಕಡೆಗಳಲ್ಲಿ ಕಾರ್ಯಚರಣೆ ನಡೆಸಿ ಆರೋಪಿ ಯಾದಗಿರಿ ಜಿಲ್ಲೆ ಕಿರಣ್ (24)ನನ್ನು ಧಾರವಾಡದಲ್ಲಿ ದಸ್ತಗಿರಿ ಮಾಡಿ ಆತನಿಂದ ಮೊಬೈಲ್ ಪೋನ್ ಹಾಗೂ ರೂ.5 ಲಕ್ಷ ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಹಾಗೂ ಈ ಹಿಂದೆ ಕೇರಳ ರಾಜ್ಯದ ಮೊಹಮ್ಮದ್ ನಿಶಾಮ್ ಸಿ.ಕೆ ಎಂಬವರ ಖಾತೆಗೆ ಈ ಪ್ರಕರಣಕ್ಕೆ ಸಂಬಂಧಿಸಿದ ಹಣ ಜಮಾ ಆಗಿರುವ ರೂ.2ಲಕ್ಷ ಸ್ವಾಧೀನ ಪಡಿಸಲಾಗಿದ್ದು, ಒಟ್ಟು ಈ ಪ್ರಕರಣದಲ್ಲಿ ರೂ. 7,00,000 ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

Advertisements
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X