ನಾನು ಧೈರ್ಯದಿಂದ ಇದ್ದೀನಿ ಹೊಸ ಸಂವಿಧಾನ ಆಗಲು ಸಾಧ್ಯವೇ ಇಲ್ಲ ಎಂದು, ಹೊಸ ಸಂವಿಧಾನ ಅವರಿಗೋಸ್ಕರ ಬರೆದು ಕೊಂಡಿರಬಹುದು ಅಷ್ಟೇ ನಮಗಾಗಿ ಅದನ್ನು ಅನುಷ್ಠಾನ ಮಾಡಲು ಆಗುವುದಿಲ್ಲ ಮತ್ತು ಆಗಲು ನಾವು ಬಿಡುವುದಿಲ್ಲ. 15 ದಿನದಲ್ಲಿ ಹತ್ತು ಜನ ಕುಳಿತುಕೊಂಡು ತಯಾರಿಸಿದ ಸಂವಿಧಾನ ಒಪ್ಪಲು ಸಾಧ್ಯವೇ ಇಲ್ಲ ಹೊಸ ಸಂವಿಧಾನ ತರಲು ಹೊರಟರೆ ಅದಕ್ಕೆ ವಿರೋಧ ಮಾಡಲು ಈಗಿನಿಂದಲೇ ಪ್ರಾರಂಭ ಮಾಡೋಣ ಎಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಹೇಳಿದರು
ಅವರು ಇಂದು ಉಡುಪಿಯ ಹಿರಿಯಡ್ಕದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆದ ಗಾಂಧಿ ಭಾರತ ಬೃಹತ್ ಸಮಾವೇಶದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು ನಮಗೆ ಗೌರವವಿರುವ ಸಂವಿಧಾನ ನಮಗೆ ಬೇಕು ಎಂದು ಹೇಳುವವರು ಇದನ್ನು ತಿಳಿದುಕೊಳ್ಳಬೇಕು ಭಾರತದ ಸಂವಿಧಾನ ಏನು ಗೌರವ ಕಟ್ಟಿದೆ ಅದಕ್ಕಿಂತಲೂ ದೊಡ್ಡ ಗೌರವನ್ಬು ಕೊಟ್ಟ ಸಂವಿಧಾನ ಬೇರೊಂದಿಲ್ಲ. ಅಂಬೇಡ್ಕರ್ ರವರು ಸಂವಿಧಾನವನ್ನು ರಚಿಸಿದಾಗಲೆ ಹೇಳಿದ್ದರು ಈ ಸಂವಿಧಾನದ ವಿಷಯದಲ್ಲಿ ಗೊಂದಲ ಎಬ್ಬಿಸುವವರು ಇರುತ್ತಾರೆ ಆಗಲು ಇದ್ದರೂ ಈಗಲೂ ಇದ್ದಾರೆ ಮುಂದೆಯೂ ಇರುತ್ತಾರೆ ಇಡೀ ಸಂವಿಧಾನವೇ ಜಾತ್ಯಾತೀತತೆ ಭಾರತಕ್ಕೆ ಹೆಸರು ಬಂದದ್ದೆ ಜಾತ್ಯಾತೀತತೆಯಿಂದ ಪ್ರತಿಯೊಬ್ಬರೂ ಇತಿಹಾಸವನ್ನು ತಿಳಿಯಬೇಕು ಓದುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹಿಂದು ರಾಷ್ಟ್ರದ ಸಂವಿಧಾನದ ತಯಾರಾಗಿದೆ ಎಂದು ಹೇಳಲಾಗುತ್ತಿದೆ. ನಮ್ಮ ಸಂವಿಧಾನವನ್ನು ಉಳಿಸುವ ಅವಕಾಶ ಬಂದರೆ ಎರಡನೇ ಸ್ವಾತಂತ್ರ್ಯ ಸಂಗ್ರಾಮ ಹೋರಾಟಕ್ಕೂ ತಯಾರಾಗಬೇಕು ಎಂದು ಹೇಳಿದರು.

ಕಾಂಗ್ರೆಸ್ ನ ಯುವ ಮುಖಂಡ ಹಾಗೂ ಕೆಪಿಸಿಸಿ ವಕ್ತಾರರಾದ ನಿಕೀತ್ ರಾಜ್ ಮೌರ್ಯ ಹಾಗೂ ಸುಧೀರ್ ಕುಮಾರ್ ಮುರುಳಿ ಮುಖ್ಯ ಭಾಷಣ ಮಾಡಿದರು. ಉಡುಪಿ ಕಾಂಗ್ರೆಸ್ ನ ಹಿರಿಯ ಮುಖಂಡ ಜಯಂತ್ ರಾವ್ ಎಲ್ಲರನ್ನೂ ಸ್ವಾಗತಿಸಿದರು, ಕಾಂಗ್ರೆಸ್ ಮುಖಂಡರುಗಳಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಗೋಪಾಲ ಪೂಜಾರಿ, ಅಶೋಕ್ ಕೊಡವೂರು, ವಿರೋನಿಕ ಕರ್ನೇಲಿಯೂ ಮುಂತಾದವರು ಉಪಸ್ಥಿತರಿದ್ದರು. ನಾಗೇಶ್ ಉದ್ಯಾವರ್ ಕಾರ್ಯಕ್ರಮ ನಿರೂಪಿಸಿದರು.
