ಉಡುಪಿ | ಕಾಲೇಜು ಹಾಸ್ಟೇಲ್ ಗೋಡೆಯಲ್ಲಿ ದೇಶ ವಿರೋಧಿ ಬರಹ, ಪ್ರಕರಣ ದಾಖಲು

Date:

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪ್ರತಿಷ್ಠಿತ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ತಿನಿಯರ ಹಾಸ್ಟೆಲ್ ಶೌಚಾಲಯದ ಗೋಡೆಯಲ್ಲಿ ಪ್ರಚೋದನಾಕಾರಿ ಬರಹಗಳನ್ನು ಬರೆದಿರುವ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ವೀಡಿಯೊ ಸಂದೇಶದ ಮೂಲಕ ಮಾಹಿತಿ ನೀಡಿರುವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ ಅವರು ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ವಸತಿ ನಿಲಯದ ಶೌಚಾಲಯದ ಒಳಗಡೆ ಒಂದು ಪೆನ್ನನ್ನು ಇಟ್ಟು ಪ್ರಚೋದನಾಕಾರಿ ಹೇಳಿಕೆಗಳನ್ನು ಬರೆದಿರುತ್ತಾರೆ. ಅದು ಹಿಂದೂ ಮತ್ತು ಮುಸ್ಲಿಂ ಧರ್ಮಕ್ಕೆ ಧಕ್ಕೆ ತರುವ ರೀತಿಯಲ್ಲಿ ಬರೆದಿರಲಾಗಿರುತ್ತದೆ. ಈ ಬಗ್ಗೆ ಹಾಸ್ಟೆಲಿನ ಮ್ಯಾನೇಜ‌ರ್ ಅವರು ಪೊಲೀಸರಿಗೆ ಶುಕ್ರವಾರ ಬೆಳಿಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನು ಯಾರೋ ಅಪರಿಚಿತ ವಿದ್ಯಾರ್ಥಿಗಳು ಬರೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದ್ದು, ಇದರ ಬಗ್ಗೆ ಕೂಲಕುಂಶವಾಗಿ ತನಿಖೆ ನಡೆಸಿ ಯಾರು ಇದನ್ನು ಮಾಡಿದ್ದಾರೋ ಅವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಮೇ-17ರ ಶನಿವಾರ ಹಿಂದುಳಿದ ವರ್ಗಗಳ ಮುಖಂಡರ ಭೇಟಿ

ಜಿಲ್ಲೆಯಲ್ಲಿ ಹಿಂದುಳಿದ ಜಾತಿಗಳ ಸಂಘಟನೆ ಸಲುವಾಗಿ ರಾಜ್ಯದ ಹಿಂದುಳಿದ ವರ್ಗಗಳ ಮುಖಂಡರು...

ಗುಲಬರ್ಗಾ ವಿಶ್ವವಿದ್ಯಾಲಯ ಉಳಿಸಿ : ಎಐಡಿಎಸ್ಒ ಪ್ರತಿಭಟನೆ

ಗುಲಬರ್ಗಾ ವಿಶ್ವವಿದ್ಯಾಲಯ ಉಳಿಸುವಂತೆ ಒತ್ತಾಯಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿಗಳ ಸಂಘಟನೆಯ...

ಬೀದರ್ | ಶುಶ್ರೂಷಕರ ವೈದ್ಯಕೀಯ ಸೇವೆ ಶ್ರೇಷ್ಠ : ಶೈನಿ ಪ್ರದೀಪ್ ಗುಂಟಿ

ಶುಶ್ರೂಷಕರ ವೈದ್ಯಕೀಯ ಸೇವೆ ಶ್ರೇಷ್ಠವಾದದ್ದು ಎಂದು ಶೈನಿ ಪ್ರದೀಪ್ ಗುಂಟಿ ಹೇಳಿದರು. ಬೀದರ್...

ತುಮಕೂರು | ಸಂವಿಧಾನ ದ್ರೋಹಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಬೇಕು : ಡಾ.ಯತೀಂದ್ರ ಸಿದ್ದರಾಮಯ್ಯ

ತುಮಕೂರು : ಸಂವಿಧಾನ ರಚನೆಯಾದಾಗಿನಿಂದ ಯಾರು ಸಂವಿಧಾನ ವಿರೋಧ ಮಾಡುತ್ತಿದ್ದರೋ ಅಂತಹ...