ಉಡುಪಿ ನಗರದ ಹೃದಯಭಾಗದಲ್ಲಿರುವ ಮಲ್ಪೆ- ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ 169ಎ ಚತುಷ್ಪಥ ಕಾಮಗಾರಿ ಕಳೆದ ಕೆಲವು ವರ್ಷಗಳಿಂದ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಇಂದ್ರಾಳಿಯಲ್ಲಿರುವ ರೈಲ್ವೆ ಮೇಲ್ವೇತುವೆ ಕಾಮಗಾರಿ ವಿಳಂಬದಿಂದಾಗಿ ಮಣಿಪಾಲವನ್ನು ಸಂಪರ್ಕಿಸುವ ಇಕ್ಕಟ್ಟಾಗಿರುವ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಲವು ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಹಲವರು ಬಲಿಯಾಗಿದ್ದಾರೆ.

ರಸ್ತೆ ಕಾಮಗಾರಿ ಆರಂಭವಾದ ಎರಡು ಮೂರು ತಿಂಗಳಲ್ಲಿ ಸೇತುವೆ ಸಂಚಾರ ಮುಕ್ತವಾಗಲಿದೆ ಎಂದು ಜನ ಪ್ರತಿನಿಧಿಗಳು, ಅಧಿಕಾರಿಗಳು ವರ್ಷದ ಹಿಂದೆ ಹೇಳಿದ್ದರು. ಆದರೆ, ಗರ್ಡರ್ ಬಂದು ವರ್ಷ ಕಳೆದರೂ ಕಾಮಗಾರಿ ಮಾತ್ರ ಸಾಗುವುದೇ ಇಲ್ಲ. ಕಾರಣ ಒಂದು ‘ನಟ್, ಬೋಲ್ಡ್’ ಫಿಟ್ ಮಾಡಲೂ ರೈಲ್ವೇ ಇಲಾಖೆಯವರು ಅನುಮತಿಸಬೇಕು. ಇಲಾಖೆ ಅಧಿಕಾರಿಗಳನ್ನು ಹಿಡಿಯುವುದೇ ಗುತ್ತಿಗೆದಾರರಿಗೆ ಸವಾಲಾಗಿದೆ.
ಇಂದ್ರಾಳಿ ಸೇತುವೆ ಕಾಮಗಾರಿಯ ವಿಳಂಬದಿಂದಾಗಿ 2023ನೇ ಸಾಲಿನಲ್ಲಿ 8 ಅಪಘಾತ ಪ್ರಕರಣಗಳು ಸಂಭವಿಸಿದ್ದು ಒಬ್ಬ ಮೃತಪಟ್ಟರೆ, 7 ಪ್ರಕರಣಗಳಲ್ಲಿ ಹಲವರಿಗೆ ತೀವ್ರ ತರಹದ ಗಾಯ ಹಾಗೂ ಸಾಧಾರಣ ಗಾಯ ವಾಗಿದೆ. 2024ನೇ ಸಾಲಿನಲ್ಲಿ 10 ಪ್ರಕರಣಗಳು ವರದಿಯಾಗಿದ್ದು, ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಉಳಿದ 8 ಪ್ರಕರಣಗಳಲ್ಲಿ 10 ಮಂದಿ ತೀವ್ರ ತರಹದ ಹಾಗೂ ಸಾಮಾನ್ಯ ಗಾಯಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವುಗಳಿಗೆಲ್ಲಾ ಉತ್ತಿಗೆದಾರರು ಹಾಗೂ ಸಂಬಂಧಪಟ್ಟ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರು ಕಾಮಗಾರಿಯಲ್ಲಿ ತೋರಿದ ನಿರ್ಲಕ್ಷ್ಯವೇ, ಇವರು ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿರುವುದೇ ಕಾರಣವಾಗಿದೆ ಎಂದು ಈ ಹಿಂದೆ ಉಡುಪಿ ಜಿಲ್ಲಾಧಿಕಾರಿ ಡಾ ವಿದ್ಯಾಕುಮಾರಿ ಖಡಕ್ ಸೂಚನೆಯನ್ನು ಸಹ ನೀಡಿದ್ದರು. ಆದಾಗ್ಯೂ ಕಾಮಗಾರಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಅಗದ ಕಾರಣ ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರೀಕರು ಒಟ್ಟು ಸೇರಿ ಅಕ್ಟೋಬರ್ 29ರಂದು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಈ ಬಗ್ಗೆ ಈದಿನ.ಕಾಮ್ ಜೊತೆ ಮಾತಾನಾಡಿದ ಸಾಮಾಜಿಕ ಕಾರ್ಯಕರ್ತ ಹಾಗೂ ಇಂದ್ರಾಳಿ ರೈಲ್ವೆ ಸೇತುವೆ ಹೋರಾಟ ಸಮಿತಿ ಸಂಚಾಲಕ ಅಮೃತ್ ಶೆಣೈ ಉಡುಪಿ ಮಣಿಪಾಲ ಸಂಪರ್ಕಿಸುವ ರಸ್ತೆ ಇದಾಗಿದ್ದು ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯ ಮೂಲಕವೇ ಹಾದು ಹೋಗಬೇಕಾಗುತ್ತದೆ. ಈ ರಸ್ತೆ ದಾಟಿ ಮಣಿಪಾಲಕ್ಕೆ ಹೋಗಬೇಕಾದರೆ ಒಂದು ಕಿಮೀ ಮೀಟರ್ ದಾಟಲು ಏನಿಲ್ಲದಿದ್ದರೂ ಅರ್ದ ಗಂಟೆ ಬೇಕಾಗುತ್ತದೆ. ಈ ಸೇತುವೆಯ ಪಕ್ಕದಲ್ಲಿ ಶಾಲೆ ಸಹ ಇದೆ ಮಳೆಗಾಲದಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಬಿಡಲು ಬರುವ ಕಷ್ಟ ಅಷ್ಟಿಷ್ಟಲ್ಲ, ಇಲ್ಲಿ ಜಾಗದಲ್ಲಿ ಪ್ರತಿದಿನ ರಸ್ತೆ ಅಪಘಾತ ತಪ್ಪಿದ್ದಲ್ಲ. ಸಂಸದೆ ಶೋಭಾ ಕರಂದ್ಲಾಜೆ ಈ ಭಾಗದ ಸಂಸದೆ ಆಗಿದ್ದಾಗ ಒಂದೊದಂದು ದಿನಾಂಕ ನೀಡುತ್ತಾ ಹೋದ್ರು ಆಮೇಲೆ ಅವರು ಈ ಭಾಗದಲ್ಲಿ ಚುನಾವಣೆಗೆ ನಿಲ್ಲಲಿಲ್ಲ ಈಗ ಬೆಂಗಳೂರಿನಲ್ಲಿ ಸಂಸದೆ ಆಗಿದ್ದಾರೆ ಈಗ ಪ್ರಸ್ತುತ ಇರುವ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಉಡುಪಿ ತಾಲೂಕಿನ ಶಾಸಕರು ಯಶ್ಪಾಲ್ ಸುವರ್ಣ ಕಳೆದ ಅಕ್ಟೋಬರ್ ನಲ್ಲಿ ಪ್ರತಿಭಟನೆ ಮಾಡಲು ಮುಂದಾದಾಗ ಡಿಸೆಂಬರ್ ನಲ್ಲಿ ಕಾಮಾಗಾರಿ ಮುಗಿಯುತ್ತದೆ ಎಂದು ಹೇಳಿದ್ದರು ಇದೀಗ ಒಂದು ವರ್ಷ ಮುಗಿದೇ ಹೋಯಿತು ಯಾವುದೇ ಕಾಮಗಾರಿ ಆಗಲಿಲ್ಲ ಇಲ್ಲೊಂದು ನಾಟಕ ಸಹ ನಡೆಯುತ್ತಿದೆ ಕಣ್ಕಟ್ಟಿಗೆ ಸ್ವಲ್ಪ ದಿನ ಕೆಲಸ ಮಾಡಿದ ಹಾಗೇ ಮಾಡುವುದು ಆಮೇಲೆ ಮಾಯ ಆಗುವುದು ಇನ್ನೂ ಎಷ್ಟು ಜನರ ಬಲಿ ಬೀಳಬೇಕು ಎಂದು ಪ್ರಶ್ನಿಸಿದರು.

ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಅನ್ಸರ್ ಅಹಮದ್ ಮಾತಾನಾಡಿ ಕಳೆದ ಆರು ವರ್ಷಗಳಿಂದ ಕಾಮಗಾರಿಯಲ್ಲಿರುವ ಅರ್ದಕ್ಕೆ ನಿಂತಿರುವ ಈ ಇಂದ್ರಾಳಿ ರೈಲ್ವೆ ಸೇತುವೆಯಿಂದ ಸ್ಥಳಿಯರಿಗೆ ಉಂಟಾಗಿರುವ ಸಮಸ್ಯೆ ಒಂದೆರಡಲ್ಲ, ಮಣಿಪಾಲ ಆಸ್ಪತ್ರೆಗೆ ಪ್ರತಿದಿನ ನೂರಾರು ಅಂಬುಲೆನ್ಸ್ ಗಳು ಹೋಗುತ್ತದೆ, ಈ ರಸ್ತೆಯಲ್ಲಿ ಹಾದು ಹೋಗಲು ಒಂದು ಗಂಟೆಯಾದರು ಬೇಕು ಆಂಬುಲೆನ್ಸ್ ಗಳು ಸಹ ಈ ಮಾರ್ಗದಲ್ಲಿ ಹೋಗಲು ಬಹಳಷ್ಟು ಸಮಸ್ಯೆ ಆಗುತ್ತದೆ ಈ ಬಾರಿ ಪ್ರತಿಭಟನೆ ನಡೆಸಿ ಇಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಸರ್ಕಾರದ ಗಮನವನ್ನು ಸೆಳೆಯಲು ಈ ಹೊರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಪ್ರತಿಭಟನೆಯ ಸುದ್ದಿಯ ಬೆನ್ನು ಹಿನ್ನಲ್ಲೆ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ರೈಲ್ವೆ ಬ್ರಿಡ್ಜ್ ಕಾಮಗಾರಿ ವೀಕ್ಷಣೆ ಮಾಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು.ಈ ಸೇತುವೆ ಬಗ್ಗೆ ತುಂಬಾ ವಿವಾದಗಳು ನಡೆಯುತ್ತಿವೆ, ಅಪಘಾತಗಳು ಆಗಿವೆ. 2018 ರಲ್ಲಿ ಈ ಕಾಮಗಾರಿ ಆರಂಭವಾಗಿದೆ. ರೈಲ್ವೆ ಇಲಾಖೆ ವಿಳಂಬದಿಂದ ತಡವಾಗುತ್ತಿದೆ.138 ಟನ್ ತೂಕದ ಗರ್ಡರ್ ಅಳವಡಿಸುವ ಯೋಜನೆ ಇದಾಗಿತ್ತು. ರಸ್ತೆ ಉದ್ದ 38 ಮೀಟರ್ ನಿಂದ 58 ಮೀಟರ್ ಗೆ ವಿಸ್ತರಣೆಯಾಗಿದೆ. ಗರ್ಡರ್ ಗಳಿಗೆ ಅಳವಡಿಸುವ ಸ್ಟೀಲ್ 420 ಟನ್ ಗೆ ಏರಿಕೆಯಾಗಿದೆ.ಕಾಮಗಾರಿ ವಿಳಂಬ ವಾಗಿರುವುದು ಹೌದು. ಜನವರಿ 15 ರೊಳಗೆ ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗುವುದು.ಜಿಲ್ಲಾಧಿಕಾರಿಗಳು ಮತ್ತು ಎಸ್ ಪಿ ನಡೆಸಿರುವ ಸಭೆಯಲ್ಲಿ ತೀರ್ಮಾನವಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಇಂದ್ರಾಳಿ ರೈಲ್ವೆ ಸೇತುವೆ ಹೋರಾಟ ಸಮಿತಿಯ ಸದಸ್ಯರು ಜನವರಿ 15 ರ ಒಳಗೆ ಪೂರ್ಣಗೊಳ್ಳದಿದ್ದಲ್ಲಿ ಜನವರಿ 30ರಂದು ಇನ್ನಷ್ಟು ಜನರನ್ನು ಸೇರಿ ಮುಷ್ಕರವನ್ನು ನಡೆಸುವುದುದಾಗಿಯೂ ಒಂದು ವೇಳೆ ಜನವರಿ 15ರ ಒಳಗೆ ಕಾಮಗಾರಿ ಪೂರ್ಣಗೊಂಡಲ್ಲಿ ಜನವರಿ 16ರಂದು ಸಂಸದರಿಗೆ ಸನ್ಮಾನ ಮಾಡುವುದಾಗಿಯೂ ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ಪ್ರತಿಭಟನೆ ಕಾವು ಜೋರಾಗಿದ್ದು, ಉಡುಪಿ ಜಿಲ್ಲೆಯ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು ಕೈ ಜೋಡಿಸಿವೆ. ಈ ಹೋರಾಟದ ಮೂಲಕವಾದರೂ ಕಾಮಗಾರಿ ಅಂತಿಮ ರೂಪ ಪಡೆಯಬಹುದೇ ಎಂದು ಕಾದು ನೋಡಬೇಕಾಗಿದೆ.
