ಉಡುಪಿ | ಶ್ರೀಕೃಷ್ಣ ಮಠದ ಪರಿಸರದಲ್ಲಿ ಜಲಾವೃತದ ಭೀತಿ…! ಮುಳುಗಡೆಯ ಆತಂಕ..!

Date:

Advertisements

ಉಡುಪಿಯ ಶ್ರೀ ಕೃಷ್ಣ ಮಠದ ರಥಬೀದಿಯಿಂದ, ಸೋದೆ ವಾದಿರಾಜ ಮಠದ ಭೂವರಾಹ ಕಾಂಪ್ಲೆಕ್ಸ್ ಸನಿಹದಿಂದ, ಹಾಗೂ ಕಾಣಿಯೂರು ಮಠದ ಹಿಂಬಾಗದಿಂದ ಮಳೆ ನೀರು ಸಾಗುವ ತೋಡು ಮದ್ವ ಸರೋವರದ ಪಕ್ಕದಿಂದ ಗೀತಾ ಮಂದಿರದ ಎದುರಿನಿಂದ ಹಾದುಹೋಗಿ ಮುಕುಂದ ಕೃಪಾ ಶಾಲೆಯ ಸನಿಹದಿಂದ ಕಲ್ಸಂಕದಲ್ಲಿ ಹಾದುಹೋಗುವ ಇಂದ್ರಾಣಿ ನದಿಯನ್ನು ಸೇರಿ ಆ ಮೂಲಕ ಮಳೆನೀರು ಕಡಲನ್ನು ಸೇರುತ್ತದೆ.

ಪ್ರಸ್ತುತ ತೋಡಿನಲ್ಲಿ ಹೂಳು ತುಂಬಿಕೊಂಡಿದ್ದು, ಕಲ್ಲುಗಳು ಬಿದ್ದುಕೊಂಡಿವೆ. ಕೆಲವು ಕಡೆಗಳಲ್ಲಿ ತೋಡಿನ ದಂಡೆಯ ಮೇಲೆ ಕಾನೂನು ಬಾಹಿರವಾಗಿ ನಿರ್ಮಾಣ ಕಾಮಗಾರಿಗಳು ನಡೆಯುತ್ತಿರುವುದು ಕಂಡುಬಂದಿದೆ. ಶ್ರೀಕೃಷ್ಣ ಮಠದ ಪರಿಸರವು ತಗ್ಗು ಪ್ರದೇಶವಾಗಿದ್ದು‌, ಮಳೆಗಾಲದಲ್ಲಿ ಎತ್ತರ ಪ್ರದೇಶದ ಮಳೆ‌ ನೀರು ಈ ಪ್ರದೇಶದಲ್ಲಿ ಹರಿದು ನಗರಸಭೆಯ ತೋಡಿನ ಮೂಲಕ ಕಲ್ಸಂಕ ಇಂದ್ರಾಣಿ ನದಿ‌ ಸೇರುವುದು ಸಮರ್ಪಕ ವ್ಯವಸ್ಥೆಯಾಗಿತ್ತು, ಈವಾಗ ನಗರಸಭೆಯ ತೋಡಿನಲ್ಲಿ ಹೂಳು ತುಂಬಿರುವುದು ಅಕ್ರಮಗಳು ನಡೆದಿರುವುದರಿಂದ ಬೈಲಕೆರೆ, ಬಡಗುಪೇಟೆ, ಬುಡ್ನಾರು, ಕಲ್ಸಂಕ, ಶ್ರೀಕೃಷ್ಣ ಮಠದ ಪರಿಸರ, ರಥಬೀದಿಗೆ ನೆರೆಭೀತಿ ಎದುರಾಗಿದೆ. ಪರಿಸರವು ಜನವಸತಿ ಪ್ರದೇಶವಾಗಿದ್ದು ಮುಳುಗಡೆ ಭೀತಿಯಿಂದ ಸ್ಥಳೀಯರು ಆತಂಕಗೊಳಗಾಗಿದ್ದಾರೆ. ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವಸ್ಥಾನಗಳು ಕೊಳಚೆ ನೀರಿನಿಂದ ಜಲಾವೃತಗೊಳ್ಳುವ ಸಾಧ್ಯತೆ ಇದೆ.

ಅಷ್ಟ‌ಮಠದ ಸ್ವಾಮೀಜಿಯವರು ಶ್ರೀ ಕೃಷ್ಣ ಮಠದ ಪರಿಸರವನ್ನು ನೆರೆಯಿಂದ ರಕ್ಷಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ದ್ವನಿ ಎತ್ತಬೇಕಾಗಿದೆ. ಜಿಲ್ಲಾಡಳಿತ, ನಗರಾಡಳಿತ ಸೂಕ್ತ ಕ್ರಮವನ್ನು ಜರುಗಿಸಬೇಕಾಗಿದೆ ಎಂದು ನಗರಸಭೆಯ‌ ಮಾಜಿ ಸದಸ್ಯ ನಿತ್ಯಾನಂದ‌ ಒಳಕಾಡುವರು ವಿನಂತಿಸಿಕೊಂಡಿದ್ದಾರೆ. ಸಂಭವನೀಯ ನೆರೆಯಿಂದ ರಕ್ಷಿಸುವಂತೆಯೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

Download Eedina App Android / iOS

X