ಉಡುಪಿ ಜಿಲ್ಲೆಯ ಕುಂದಾಪುರದ ವಿಠಲವಾಡಿಯಿಂದ ನಿನ್ನೆ ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ ವಿವಾಹಿತನೊಂದಿಗೆ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.
ಕೋಡಿ ಸಮೀಪ ಸೇತುವೆ ಮೇಲೆ ಸ್ಕೂಟಿ, ಚಪ್ಪಲಿ ಹಾಗೂ ಡೆತ್ ನೋಟ್ ಬರೆದಿಟ್ಟು ನದಿಗೆ ಹಾರುವ ನಾಟಕ ಅಡಿದ ಮಹಿಳೆ ವಿವಾಹಿತನೊಂದಿಗೆ ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಕುಂದಾಪುರದ ಫುಡ್ ಮಾರ್ಕ್ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿರುವ ವಿವಾಹಿತ ಸಾಹಿಲ್(27) ಜತೆ ಎರಡು ಮಕ್ಕಳ ತಾಯಿ ಹೀನಾ ಕೌಸರ್(33) ಪರಾರಿಯಾಗಿದ್ದಾಳೆ ಎಂದು ತಿಳಿದುಬಂದಿದೆ.
ಮಹಿಳೆಯ ಪತಿ ವಿದೇಶದಲ್ಲಿದ್ದು, ತನ್ನ ಎರಡು ಮಕ್ಕಳು ಮತ್ತು ತಾಯಿಯೊಂದಿಗೆ ಮಹಿಳೆ ವಾಸವಾಗಿದ್ದಳು. ಹೀನಾ ಕೌಸರ್ ಹಾಗೂ ಸಾಹಿಲ್ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.