ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಸಂಸ್ಥೆಯ ಅಧೀನದಲ್ಲಿ ನಡೆದ ಮದ್ರಸಾ ಪಬ್ಲಿಕ್ ಪರೀಕ್ಷೆಯಲ್ಲಿ ಉಡುಪಿ ರೇಂಜ್ ವ್ಯಾಪ್ತಿಯ ಹೂಡೆ ದಾರುಸ್ಸಲಾಮ್ ಮದ್ರಸಾದ ಏಳು ಮತ್ತು ಐದನೆಯ ತರಗತಿಯ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಏಳನೆಯ ತರಗತಿಯ ಹಫ್ಸಾ ನಾಹಿದ್ ತಝ್ಕಿಯಾದಲ್ಲಿ 100ರಲ್ಲಿ 94 ಅಂಕ ಪಡೆದರೆ ಉಳಿದ ಎಲ್ಲ ವಿಷಯಗಳಲ್ಲಿ ನೂರಕ್ಕೆ ನೂರು ಪಡೆದು 600ರಲ್ಲಿ 594 ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇವರು ಮರ್ಹೂಮ್ ಉಸ್ತಾದ್ ಆಸಿಫ್ ಖಾದರ್ ಬಾಷಾ ಮತ್ತು ನದೀಲಾ ಝರೀನ್ ದಂಪತಿಯ ಪುತ್ರಿ.
ಈ ಸುದ್ದಿ ಓದಿದ್ದೀರಾ? ಆಘಾತಕಾರಿ ಸಂಗತಿ | ದ್ವಿತೀಯ ಪಿಯುಸಿಯಲ್ಲಿ ಫೇಲ್; ಐವರು ವಿದ್ಯಾರ್ಥಿಗಳು ಆತ್ಮಹತ್ಯೆ
ಐದನೆಯ ತರಗತಿಯ ಅಖ್ಸಾ ಫಾತಿಮಾಳಿಗೆ ಮರು ಮೌಲ್ಯಮಾಪನದಲ್ಲಿ ತಾರೀಖ್‌ನಲ್ಲಿ 10 ಮತ್ತು ಫಿಖ್ಹ್‌ನಲ್ಲಿ 9 ಅಂಕಗಳು ಹೆಚ್ಚುವರಿಯಾಗಿ ಲಭಿಸಿದ್ದು, ಒಟ್ಟು 600ರಲ್ಲಿ 534(89% ) ಅಂಕ ಪಡೆದು ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಹೂಡೆಯ ಅಧ್ಯಕ್ಷರಾದ ಅಶ್ರಫ್ ಜಿ ತೋನ್ಸೆ ಮತ್ತು ರೌಳತ್ ಅವರ ಪುತ್ರಿ.
ವಿದ್ಯಾರ್ಥಿಗಳ ಸಾಧನೆಗೆ ದಾರುಸ್ಸಲಾಮ್ ಎಜುಕೇಶನ್ ಸೊಸೈಟಿ ಹೂಡೆ ಸಮಿತಿಯು ಅಭಿನಂದನೆ ಸಲ್ಲಿಸಿದೆ.