ಕರಾವಳಿಯ ಉಡುಪಿಯಲ್ಲಿ ಬಾರಿ ಗಾಳಿಮಳೆಯ ಹೊಡೆತಕ್ಕೆ ಮಣಿಪಾಲದ ಐನಾಕ್ಸ್ ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಕಿತ್ತುಹೋಗಿದೆ.
ಅಪಾರ ಪ್ರಮಾಣದಲ್ಲಿ ಮಳೆಯ ನೀರು ರಸ್ತೆಯಲ್ಲೇ ಹರಿದುಹೋಗುತ್ತಿದ್ದು, ನೀರಿನ ರಭಸಕ್ಕೆ ರಸ್ತೆ ಕಿತ್ತುಹೋಗಿ ತೋಡಾಗಿ ಮಾರ್ಪಟ್ಟಿದೆ. ಇದರಿಂದ ವಾಹನ ಸವಾರರಿಗೆ ಮುಂದಕ್ಕೆ ಚಲಿಸಲು ಆಗದೆ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಯಿತು. ಬಳಿಕ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಇದೇ ರೀತಿ ಮಳೆ ಮುಂದುವರಿದರೆ ಮಣಿಪಾಲ ಐನಾಕ್ಸ್ ಮುಂಭಾಗದ ರಸ್ತೆ ಸಂಪೂರ್ಣವಾಗಿ ಕಿತ್ತುಹೋಗುವ ಸಾಧ್ಯತೆ ಇದೆ. ಮಳೆನೀರು ಹೋಗಲು ಬೇರೆ ಜಾಗವಿಲ್ಲದೆ, ಹೆದ್ದಾರಿಯಲ್ಲೇ ಹರಿದು ಹೋಗುತ್ತಿದೆ.
ಇದೇ ನಮ್ಮ 22ನೇ ಶತಮಾನದ ಕೊಡುಗೆ
Very poor planning and unscientific construction approvals can cause disasters.
ಮಾಡಿದ್ದುಣ್ಣೋ ಮಹರಾಯ ಅನ್ನೋ ಗಾದೆ ಸುಮ್ಮನೆ ಹೇಳಿಲ್ಲ ಸ್ವಾಮಿ, ಅತೀ ಆಸೆ ಗತಿ ಕೇಡು ಅನ್ನೋದು ಕೂಡ ಈಗ ಈ ಗಾದೆಗಳಿಗೆ ಅರ್ಥ ಸಿಗುತ್ತಿದೆ ಅಲ್ವಾ ಸ್ವಾಮಿ