ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳ ನಗರ ಮಣಿಪುರ, ಉಡುಪಿ ಇವರ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ವತಿಯಿಂದ ಸತತವಾಗಿ 3ನೇ ಬಾರಿ ಬೃಹತ್ ಎರಡು ದಿನಗಳ ಉದ್ಯೋಗ ಮೇಳ ನವೆಂಬರ್ 16 ಮತ್ತು 17 ರಂದು ಎಂಆರ್ಜಿ ಗ್ರೂಪ್ ನ ಪ್ರಾಯೋಜಕತ್ವದಲ್ಲಿ ನಡೆಯಲಿದೆ ಎಂದು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರು ಆದ ಅಶೋಕ ಕುಮಾರ ಶೆಟ್ಟಿ ಹೇಳಿದರು.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಎರಡು ಬಾರಿ ನಡೆದ ಉದ್ಯೋಗ ಮೇಳ ದಲ್ಲಿ 1300ಕ್ಕಿಂತಲೂ ಹೆಚ್ಚು ಅಭ್ಯರ್ಥಿಗಳಿಗೆ ಉತ್ತಮ ಕಂಪನಿಗಳಲ್ಲಿ ಉದ್ಯೋಗ ಸಿಕ್ಕಿದೆ. ಈ ಬಾರಿಯು ಈಗಾಗಲೇ ಸುಮಾರು 1500 ಅಭ್ಯರ್ಥಿ ಗಳು ಆನ್ಲೈನ್ ಮೂಲಕ ರಿಜಿಸ್ಟರ್ ಮಾಡಿದ್ದು, ಒಟ್ಟಾರೆ ಸ್ಪಾಟ್ ರಿಜಿಸ್ಟ್ರೇಷನ್ 16 ರಂದು ಮಾಡುವ ಮೂಲಕ 2500ರಷ್ಟು ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು ಎಂಬ ನೀರೀಕ್ಷೆ ಇದೆ ಎಂದರು.
ನಾವು ಪ್ರತಿ ಸಲವು ಉತ್ತಮ 30 ಕಂಪನಿಗಳಿಗೆ ರಿಜಿಸ್ಟರ್ ಮಾಡಿ ಒಳ್ಳೆಯ ಉದ್ಯೋಗ ಅವಕಾಶಗಳನ್ನು ಅಭ್ಯರ್ಥಿಗಳಿಗೆ ಸೃಷ್ಟಿ ಮಾಡುತ್ತೇವೆ ಎಂದು ತಿಳಿಸಿದ ಅವರು, ಈ ಬಾರಿ 30 ಕಂಪನಿಗಳಲ್ಲಿ 1500ಕ್ಕೂ ಮಿಕ್ಕಿ ಉದ್ಯೋಗ ಅವಕಾಶಗಳಿವೆ ಆದ ಕಾರಣ ಬರಲಿರುವ ಒಳ್ಳೆಯ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವ ನೀರೀಕ್ಷೆ ಇದೆ ಎಂದು ಹೇಳಿದರು.

ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಪ್ರೋಗ್ರಾಮ್ ಡೈರೆಕ್ಟರ್ ದಿವ್ಯ ರಾಣಿ ಪ್ರದೀಪ್ ಮಾತನಾಡಿ, ಉದ್ಯೋಗ ಮೇಳಕ್ಕ ಈಗಾಗಲೇ ಕಲಿತ ಮತ್ತು ಅಂತಿಮ ವರ್ಷ ದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ಇದ್ದು, ಪ್ರತಿಯೊಬ್ಬ ಅಭ್ಯರ್ಥಿಗಳಿಗೆ 5 ಕಂಪನಿಗಳಲ್ಲಿ ಸಂದರ್ಶನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಪ್ರತಿಯೊಂದು ಸಂದರ್ಭದಲ್ಲಿ ಬಯೋ ಡಾಟಾ ತರಬೇಕೆಂದು ತಿಳಿಸಿದರು.
ಈ ಬಾರಿ ಸ್ಥಳೀಯ, ಕರ್ನಾಟಕ, ಬೇರೆ ರಾಜ್ಯ ಮಾತ್ರವಲ್ಲದೆ ಅಂತರಾಷ್ಟ್ರೀಯ ಕಂಪ ಗಳು ರಿಜಿಸ್ಟ್ರೇಷನ್ ಮಾಡಿವೆ. ಆದ ಕಾರಣ ಎಲ್ಲಾ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳಿವೆ ಎಂದು ಮಾಹಿತಿ ನೀಡಿದರು.
ಈ ಬಾರಿಯ ಬೃಹತ್ ಉದ್ಯೋಗ ಮೇಳದ ಉದ್ಘಾಟನಾ ಕಾರ್ಯಕ್ರಮ ನವೆಂಬರ್ ತಾ. 16ರಂದು ಶನಿವಾರ -ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್, ಕುಂತಳ ನಗರ, ಮಣಿಪುರ, ಉಡುಪಿ ಇವರ ಸ್ಕಿಲ್ ಡೆವಲಪ್ಟೆಂಟ್ ಸೆಂಟರ್, ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ನನ್ ಸೆಂಟರ್ನಲ್ಲಿ ಎಂಆರ್ಜಿ ಗ್ರೂಪ್ನ ಚೇರ್ಮನ್ ಡಾ. ಕೆ.ಪ್ರಕಾಶ್ ಶೆಟ್ಟಿ ಉದ್ಘಾಟನೆ ಮಾಡಲಿದ್ದು, ಮಣಿಪಾಲ ಮಾಹೆಯ ಚಾನ್ಸೆಲ್ಲರ್ ಡಾ. ಎಚ್.ಎಸ್. ಬಲ್ಲಾಳ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ, ಲೋಕಸಭಾ ಸದಸ್ಯರುಗಳಾದ ಕೋಟ ಶ್ರೀನಿವಾಸ್ ಪೂಜಾರಿ ಮತ್ತು ಬ್ರಜೇಶ್ ಚೌಟ, ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಯಶ್ಪಾಲ್ ಸುವರ್ಣ, ಐವನ್ ಡಿಸೋಜಾ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ರಘುಪತಿ ಭಟ್, ಮುಖಂಡರುಗಳಾದ ಮಟ್ಟಾರು ರತ್ನಾಕರ್ ಹೆಗ್ಡೆ, ಕಾಪು ವಾಸುದೇವ ಶೆಟ್ಟಿ, ಮನೋಹರ್ ಶೆಟ್ಟಿ, ಸಾಯಿ ರಾಧಾ ಗ್ರೂಪ್, ಪ್ರಸಾದ್ ರಾಜ್ ಕಾಂಚನ್, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಸಂತೋಷ್ ಶೆಟ್ಟಿ ಪೂನಾ, ಸುಗ್ಗಿ ಸುಧಾಕರ್ ಶೆಟ್ಟಿ,, ಪ್ರೊ ಶರತ್ ಆಳ್ವ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಉದ್ಯೋಗ ಮೇಳದ ಪ್ರಯೋಜನವನ್ನು ಎಲ್ಲರೂ ಪಡೆದು, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುದೆ ನಮ್ಮ ಟ್ರಸ್ಟ್ ನ ಮತ್ತು ಎಂಆರ್ಜಿ ಗ್ರೂಪ್ ಉದ್ದೇಶ. ಈ ಬಾರಿ ಸುಮಾರು 1200 ರಿಂದ 1500 ಅಭ್ಯರ್ಥಿಗಳಿಗೆ ಈ ಉದ್ಯೋಗ ಮೇಳದಲ್ಲಿ ಉದ್ಯೋಗ ಸಿಗಬಹುದಂಬ ನಿರೀಕ್ಷೆ ಇಟ್ಟಿದ್ದೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಯಾವುದೇ ಜಾತಿ ಮತ ಬೇಧ ಇಲ್ಲದೆ ಎಲ್ಲ ಸಮುದಾಯದ ಯುವಕ, ಯುವತಿಯವರಿಗೆ ಅವಕಾಶ ಇದ್ದು, ಯಾವುದೇ ನೋಂದಣಿ ಶುಲ್ಕ ಇಟ್ಟಿಲ್ಲ ಎಂದು ತಿಳಿಸಿದರು.
