ಯಶ್ಪಾಲ್ ಸುವರ್ಣ ರಿಂದ ಬ್ರ್ಯಾಂಡ್ ಉಡುಪಿ ಮಾಡಲು ಸಾಧ್ಯವಿಲ್ಲ, ಉಡುಪಿ ಶತಮಾನದ ದಿನಗಳಿಂದ ಬ್ರ್ಯಾಂಡ್ ಆಗಿಯೇ ಇದೆ, ಈಗ ಉಡುಪಿ ಶಾಸಕರು ಬ್ಯಾಂಕ್ ಪೆಡರೇಷನ್ ಎಲ್ಲಾ ಕೊಳ್ಳೆ ಹೊಡೆದು ಬ್ರ್ಯಾಂಡ್ ಆಗಲು ಹೊರಟಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳ್ಳರು ಖದೀಮರಿಗೆ ಮಾತ್ರ ಇಂತಹ ನಿಗ್ರಹ ಪಡೆಗಳು ಬಂದರೆ ಬಯವಾಗುತ್ತದೆ, ಯಶ್ಪಾಲ್ ಸುವರ್ಣ ಆ ಗುಂಪಿಗೆ ಸೇರಿ ಕೊಂಡಿರಬಹುದು ಹಾಗಾಗಿ ಈ ರೀತಿ ಕಳವಳ ಎಂದಿದ್ದಾರೆ.
ಕೋಮು ನಿಗ್ರಹ ಪಡೆಯಿಂದ ಜಿಲ್ಲೆಯ ಜನತೆ ಶಾಂತಿ ಮತ್ತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸರಕಾರ ಈ ನಿರ್ಧಾರ ಮಾಡಿದೆ, ಸರಕಾರದ ಒಳ್ಳೆಯ ಕಾರ್ಯಕ್ರಮವನ್ನು ಅಭಿನಂದಿಸಲು ಸಾಧ್ಯವಾಗದೆ, ಈ ರೀತಿಯ ಹತಾಶೆಯ ಹೇಳಿಕೆಯನ್ನು ಉಡುಪಿ ಶಾಸಕರು ಹೇಳಿದ್ದಾರೆ.
ಕೋಮು ಗಲಭೆ ಎಂದಾಗ ನೀವು ಹಿಂದೂಗಳ ತಲೆಗೆ ಕೋಮು ಬಣ್ಣ ಕಟ್ಟಬೇಡಿ ಉಡುಪಿ ಶಾಸಕರೇ, ಯಾವುದೇ ಕೋಮಿನ ವ್ಯಕ್ತಿಯಾಗಿರಲಿ ಕೋಮು ಸಂಘರ್ಷ ಸೃಷ್ಟಿ ಮಾಡಿದರೆ “ಕೋಮು ನಿಗ್ರಹ ಪಡೆ “ಅವರ ಕೆಲಸ ಮಾಡುತ್ತಾರೆ,” ಸರಕಾರದ ಕೋಮು ನಿಗ್ರಹ ಪಡೆ “ಅಂದಾಗ ಅದು ಸಾರ್ವಜನಿಕರನ್ನು ಬಂಧಿಸುವುದಕ್ಕಲ್ಲ, ಸಮಾಜದಲ್ಲಿ ವಿಷ ಬೀಜ ಬಿತ್ತಿ ಜಾತಿ ಜಾತಿಗಳ ಮಧ್ಯೆ ಬಿನ್ನಾಭಿಪ್ರಾಯ ಮೂಡಿಸಿ ಪ್ರಚೋದನೆ ಮಾಡುವವರನ್ನು, ಸೌಹಾರ್ದತೆ ಹಾಳುಮಾಡುವವರ ವಿರುದ್ಧ ಈ ನಿಗ್ರಹ ಪಡೆಯನ್ನು ರಚಿಸಿದ್ದಾರೆ, “ಗುಂಬಳ ಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳೋದು ಯಾಕೆ ಶಾಸಕರೇ ” ಎಂದು ಪ್ರಶ್ನಿಸಿದ್ದಾರೆ.