ನಾರಾಯಣ ಗುರುಗಳ 17೦ನೇ ಜಯಂತಿಯನ್ನು ರಾಷ್ಟ್ರೀಯ ಬಿಲ್ಲವ ಈಡಿಗ ನಾಮಧಾರಿ ಧೀವರ ಮಹಾಮಂಡಳಿ (ರಿ)ಉಡುಪಿ ಜಿಲ್ಲೆಯ ವತಿಯಿಂದ ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಸ್ಮರಣಿಕ ಸಭಾಂಗಣದಲ್ಲಿ ಅಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಬಿಲ್ಲವ ಈಡಿಗ ನಾಮಧಾರಿ ಧೀವರ ಮಹಾಮಂಡಳಿ ಜಿಲ್ಲಾಧ್ಯಕ್ಷ ಚಂದ್ರಹಾಸ ಕಾಪು, “ಒಂದೇ ಮತ ಒಂದೇ ಜಾತಿ ಒಂದೇ ಧರ್ಮ ಎನ್ನುವ ನಾರಾಯಣ ಗುರುಗಳ ಸಂದೇಶ ಇಡೀ ಮಾನವ ಕುಲಕ್ಕೆ ನೀಡಿರುವ ಬಹುದೊಡ್ಡ ಕೊಡುಗೆಯಾಗಿದೆ. ಮಾನವೀಯತೆ ಇಲ್ಲದ, ಮೂಢನಂಬಿಕೆಗಳು ಎದ್ದಿದ್ದ ಕಾಲದಲ್ಲಿ ಮಹಾನ್ ಮಾನವತಾವಾದಿಯಾಗಿ ಸಮಾಜದ ಕಣ್ಣರಳಿಸಿದ ದಾರ್ಶನಿಕ ಶ್ರೀ ನಾರಾಯಣಗುರುಗಳು” ಎಂದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ನಗರದ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣ ದಲ್ಲಿ ಸಾರ್ವಜನಿಕರಿಗೆ ಸಿಹಿ ತಿಂಡಿ ವಿತರಿಸಲಾಯಿತು.
ಇದನ್ನು ಓದಿದ್ದೀರಾ? ಮಂಗಳೂರು | ಫುಟ್ಬಾಲ್ ಪಂದ್ಯದ ದ್ವೇಷ; ವಿದ್ಯಾರ್ಥಿಗಳನ್ನು ಅಪಹರಣಗೈದು ಅರೆನಗ್ನಗೊಳಿಸಿ ಹಲ್ಲೆ; ಇಬ್ಬರ ಬಂಧನ
ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷರಾದ ದಿವಾಕರ್ ಸನಿಲ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೊಡವೂರು, ಕೋಶಾಧಿಕಾರಿ ಉದಯ ಸನಿಲ್, ಜಯಕುಮಾರ್ ಪರ್ಕಳ,ದಿವಾಕರ್ ಪೂಜಾರಿ ಅಂಬಲಪಾಡಿ, ವಿಶುಕುಮಾರ್ ಕಲ್ಯಾಣಪುರ, ಸಂತೋಷ್ ಬೈರಂಪಳ್ಳಿ, ಬಾಲಚಂದ್ರ ಕಿದಿಯೂರು ಬಾಲಕೃಷ್ಣ ಮಲ್ಪೆ, ಕೃಷ್ಣ ಸನಿಲ್, ಅಶ್ವಿನ್ ಕುಮಾರ್ ಮತ್ತಿತ್ತರರು ಉಪಸ್ಥಿತರಿದ್ದರು.
