ವೃದ್ಧೆಯೊಬ್ಬರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಫ್ಯಾನಿಗೆ ಸೀರೆಯಿಂದ ನೇಣುಬಿಗಿದು ಆತ್ಮಹತ್ಯೆಗೈದಿರುವ ಘಟನೆ ಉಡುಪಿ ನಗರದ ಶಾರದಾ ಕಲ್ಯಾಣ ಮಂಟಪ ಹಿಂಬದಿಯ, ಓಕುಡೆ ಲೇಔಟ್, 6 ನೇ ಕ್ರಾಸಿನಲ್ಲಿ ಶುಕ್ರವಾರ ನಡೆದಿದೆ. ಹೆಸರು ಕಾವೇರಿ (70) ತಿಳಿದು ಬಂದಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಉಡುಪಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ನಗರ ಠಾಣೆಯ ಪಿ ಎಸ್ ಐ ಗೋಪಾಲ ಕೃಷ್ಣ ಜೋಗಿ, ಎ ಎಸ್ ಐ ಸುಬಾಸ್ ಕಾಮತ್, ಹೆಡ್ ಕಾನ್ಸಟೇಬಲ್ ಸುಶ್ಮ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಮರಣೋತ್ತರ ಪರೀಕ್ಷೆ ನಡೆಸಲು, ಶವ ಜಿಲ್ಲಾಸ್ಪತ್ರೆಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡುವರು ನೆರವಾದರು.

