ಉಡುಪಿಯಲ್ಲಿ ಇಂದು ಸಂಜೆ ಬೀಸಿದ ವೇಗದ ಗಾಳಿಗೆ ಬೃಹತ್ತಾದ ಆಲದಮರವೊಂದು, ಮನೆಯ ಮೇಲೆ ಉರುಳಿಬಿದ್ದ ಘಟನೆ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗ, ಡಾ. ವಿ.ಎಸ್.ಆಚಾರ್ಯ ಮನೆಯ ಸನಿಹ ನಡೆದಿದೆ.
ಮನೆಯೊಳಗೆ ಸಿಲುಕಿ ಕೊಂಡಿರುವ ದಂಪತಿಗಳನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಸ್ಥಳೀಯರ ಸಹಕಾರದಿಂದ ಹೊರ ತೆಗೆದಿದ್ದಾರೆ. ಇರ್ವರಿಗೂ ಗಂಭೀರ ಸ್ವರೂಪದ ಗಾಯಗಳಾರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲುಪಡಿಸಿದ್ದಾರೆ.
ಬಾಣಸಿಗ ರಾಘವೇಂದ್ರ ಭಟ್ (60ವ) ಪತ್ನಿ ನೀರಜಾ ಭಟ್ (49ವ) ಗಾಯಾಳುಗಳಾಗಿದ್ದಾರೆ. ಮನೆ ಸಂಪೂರ್ಣ ಜಖಂಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು, ಮರ ಕಡಿದು ರಸ್ತೆ ಸಂಚಾರವನ್ನು ಸಂಗಮಗೊಳಿಸಿದ್ದಾರೆ.