ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯ ಕಂಡಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ನಡೆದಿದೆ.
ಯಲ್ಲಾಪುರ ಮೂಲದ ಇಮ್ಯಾನುಲ್ ಸಿದ್ದಿ (40) ಮತ್ತು ಯಶೋಧಾ (32) ಮೃತ ದುರ್ದೈವಿ ದಂಪತಿ.
ಭಾನುವಾರ ಬೆಳಗ್ಗೆ ಟಿವಿ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಜಗಳವಾಗಿದ್ದು, ಈ ವೇಳೆ ಯಶೋಧಾ ತೋಟದಲ್ಲಿದ್ದ ಹೊಂಡಕ್ಕೆ ಹಾರಿದ್ದಾರೆ. ಯಶೋಧಾರನ್ನು ರಕ್ಷಿಸಲು ತೆರಳಿದ್ದ ಪತಿ ಇಮ್ಯಾನುಲ್ ಕೂಡ ನೀರುಪಾಲಾದ್ದಾನೆ.
ಎರಡು ವರ್ಷಗಳಿಂದ ಇಮ್ಯಾನುಲ್, ಯಶೋಧಾ ದಂಪತಿ ನಲ್ಲೂರಿನ ತೋಟವೊಂದರಲ್ಲಿ ಕೆಲಸಕ್ಕಿದ್ದರು. ದಂಪತಿ ಸಾವಿನಿಂದ ಇದೀಗ 10 ವರ್ಷದ ಪುತ್ರ ಮತ್ತು 9 ವರ್ಷದ ಪುತ್ರಿ ಅನಾಥರಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ಜೋಡಿ ಕೊಲೆ ಪ್ರಕರಣ; ಒರ್ವನ ಬಂಧನ, ಮತ್ತಿಬ್ಬರಿಗಾಗಿ ಶೋಧ
ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ, ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ತೇಜಸ್ವಿ ಹಾಗೂ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.