ಸಮನ್ವಯ ಶಿಕ್ಷಣಕ್ಕಾಗಿ ಶಿಕ್ಷಕರನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ ಉಡುಪಿಯ ಆಟಿಸಂ ಸೊಸೈಟಿಯು “ಸಾಥಿ” ಛಾಯಾ ಶಿಕ್ಷಕರ (shadow teacher) ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ.
ಈ ಬಗ್ಗೆ ಇಂದು ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆಟಿಸಂ ಸೊಸೈಟಿಯ ಅಧ್ಯಕ್ಷೆ ಅಮಿತಾ ಪೈ ಉಡುಪಿಯ ಆಟಿಸಂ ಸೊಸೈಟಿಯು ಜಿಲ್ಲೆಯಲ್ಲಿ ಸ್ವಲೀನತೆ ಹೊಂದಿರುವ ಮಕ್ಕಳಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ಬೆಂಬಲ ನೀಡಲು ಮೀಸಲಾಗಿರುವ ಏಕೈಕ ಸಂಸ್ಥೆಯಾಗಿದೆ. ಪ್ರಸ್ತುತ ದಿನಗಳಲ್ಲಿ ಆಟಿಸಂ ಸ್ಪೆಕ್ಟಮ್ ಡಿಸಾರ್ಡರ್ (ASD) ಹೆಚ್ಚಾಗಿ ಕಂಡುಬರುತ್ತಿದ್ದು ಜನತೆಯಲ್ಲಿ ಅರಿವು ಮೂಡಿಸಲು, ತರಬೇತಿ ನೀಡಲು ಮತ್ತು ಪೋಷಕರು, ಆರೈಕೆದಾರರು ಮತ್ತು ವೃತ್ತಿಪರರಲ್ಲಿ ಸಾಮರ್ಥ್ಯವನ್ನು ಬೆಳೆಸಲು ಈ ಸಂಸ್ಥೆಯು ಕೆಲಸ ಮಾಡುತ್ತಿದೆ.
ಉಡುಪಿಯ ಆಟಿಸಂ ಸೊಸೈಟಿಯು ಜನವರಿ 16 ರಿಂದ 18 ರವರೆಗೆ ಉಡುಪಿಯ ಐ.ಎಂ.ಎ. ಭವನದಲ್ಲಿ ಬೆಳಿಗ್ಗೆ 9:30 ರಿಂದ ಸಂಜೆ 4 ರವರೆಗೆ ಮೂರು ದಿನಗಳ “ಸಾಧಿ” ಛಾಯಾ ಶಿಕ್ಷಕರ ತರಬೇತಿ ಕಾರ್ಯಗಾರ ನಡೆಯಲಿದೆ ಎಂದು ಹೇಳಿದರು.
ಮೂರು ದಿನಗಳ ಕಾರ್ಯಾಗಾರದಲ್ಲಿ ವಿಶೇಷ ಅಗತ್ಯತೆಗಳನ್ನು ಹೊಂದಿರುವ ಮಕ್ಕಳನ್ನು ಶೈಕ್ಷಣಿಕ ಜೀವನದಲ್ಲಿ ಪರಿಣಾಮಕಾರಿಯಾಗಿ ಬೆಂಬಲಿಸಲು ಅಗತ್ಯವಿರುವ ಕೌಶಲ್ಯ ಮತ್ತು ಪರಿಣತಿಯೊಂದಿಗೆ ಭಾಗವಹಿಸುವವರನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾಗಿದ್ದು, ಪ್ರಖ್ಯಾತ ಪೀಡಿಯಾಟ್ರಿಕ್ ಫಿಸಿಯೋಥೆರಪಿಸ್ಟ್, ಆಟಿಸಂ ಇಂಟರ್‌ವೆನ್ನನಿಸ್ಟ್, ಬಿಹೇವಿಯರ್ ಥೆರಪಿಸ್ಟ್, ಮುಂಬೈನ “ಸಾಹಸ್” ಪೀಡಿಯಾಟ್ರಿಕ್ ಇಂಟರ್‌ವೆನ್ಯನ್ ಸೆಂಟರ್‌ನ ನಿರ್ದೇಶಕಿ ಡಾ. ನೀತಾ ಮೆಹ್ರಾ ಅವರು ತರಬೇತಿ ನೀಡಲಿದ್ದಾರೆ. ಇವರು ಬ್ರೇನ್ ಜಿಮ್ ಮತ್ತು ಹ್ಯಾಂಡಲ್ ಟೆಕ್ನಿಕ್ಸ್‌ನಲ್ಲಿಯೂ ತರಬೇತಿ ಪಡೆದಿದ್ದಾರೆ. ವಿಶೇಷ ಸಾಮರ್ಥ್ಯವುಳ್ಳ ಮಕ್ಕಳಿಗೆ ತಜ್ಞರ ಮೇಲ್ವಿಚಾರಣೆಯಲ್ಲಿ ಎಲ್ಲಾ ಸೇವೆಗಳನ್ನು ಒದಗಿಸಲು “ಸಾಹಸ್’ ಅನ್ನು ಅವರು 2015 ರಲ್ಲಿ ಸ್ಥಾಪಿಸಿದ್ದು, ಚಿಕಿತ್ಸೆಯ ಪ್ರತಿ ಹಂತದಲ್ಲೂ ಪೋಷಕರು, ಆರೈಕೆ ಮಾಡುವವರು ಮತ್ತು ಚಿಕಿತ್ಸಕರಿಗೆ ಸಲಹೆ ನೀಡುವ ವಿಶಿಷ್ಟವಾದ ಮೂರು-ಮಾರ್ಗ- ವಿಧಾನವನ್ನು ಅವರು ಅನುಸರಿಸುತ್ತಾರೆ. ಈ ವಿಶಿಷ್ಟ್ಯತೆಯ ಕಾರಣದಿಂದಾಗಿ ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಅದ್ಭುತ ಫಲಿತಾಂಶಗಳು ಕಂಡುಬಂದಿವೆ. ಇವರು ಸೆರೆಬ್ರಲ್ನಾಲಿ, ಆಟಿಸಂ ಕಲಿಕೆಯ ತೊಂದರೆಗಳು ಎ.ಡಿ.ಹೆಚ್.ಡಿ ಗಳಿಗೆ ಸಂವೇದನಾ ಪ್ರಕ್ರಿಯ ಚಿಕಿತ್ಸಾ ಕ್ರಮದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.
ಈ ಕಾರ್ಯಾಗಾರವು ಉಡುಪಿಯ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ತರಬೇತಿ ಪಡೆದ ಛಾಯಾ ಶಿಕ್ಷಕರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಗುರಿಯನ್ನು ಹೊಂದಿದೆ.
ಸಮನ್ವಯ ಶೈಕ್ಷಣಿಕ ವ್ಯವಸ್ಥೆಯಲ್ಲಿ ಛಾಯಾ ಶಿಕ್ಷಕರು ನಿರ್ಣಾಯಕ ಪಾತ್ರವನ್ನು ವಹಿಸಲಿದ್ದು, ಕಾರ್ಯಕ್ರಮವು ಸ್ವಲೀನತೆ, ಎಡಿಎಚ್‌ಡಿ ಮತ್ತು ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳನ್ನು ಮುಖ್ಯವಾಹಿನಿಯ ಶಿಕ್ಷಣಕ್ಕೆ ಸಂಯೋಜಿಸುವ ಗುರಿಯನ್ನು ಹೊಂದಿದ್ದು, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ವಿಶೇಷ ಮಕ್ಕಳನ್ನು ಸಬಲಗೊಳಿಸಲು ಈ ಕಾರ್ಯಗಾರವು ನೆರವಾಗುತ್ತದೆ ಎಂದು ಹೇಳಿದರು.
ಕಾರ್ಯಾಗಾರದ ಪ್ರಮುಖಾವಾದ ಅಂಶಗಳು
- ಇದರಲ್ಲಿ ಭಾಗವಹಿಸುವವರು ಪ್ರಾಯೋಗಿಕ ಅನುಭವವನ್ನು ಪಡೆಯುತ್ತಾರೆ:
ಸಮನ್ವಯ ಶಿಕ್ಷಣದಲ್ಲಿ ಛಾಯಾ ಶಿಕ್ಷಕರ ಪ್ರಮುಖ ಪಾತ್ರವನ್ನು ಅರ್ಥ ಮಾಡಿಕೊಳ್ಳುವುದು.
- ಆಟಿಸಂ, ಎ.ಡಿ.ಎಚ್.ಡಿ, ಮತ್ತು ಇತರ ಕಲಿಕೆಯಲ್ಲಿ ಅಸಮರ್ಥತೆ ಹೊಂದಿರುವ ಮಕ್ಕಳಲ್ಲಿನ ವಿಶೇಷ ಕೌಶಲ್ಯವನ್ನು ಬಳಸಿಕೊಂಡು ನಿರ್ವಹಿಸುವುದು.
- ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂವಹನವನ್ನು ಹೆಚ್ಚಿಸುವುದು.
ಸಮನ್ವಯ ಕಲಿಕಾ ಪರಿಸರವನ್ನು ರಚಿಸುವ ಮತ್ತು ನಿರ್ವಹಿಸುವ ಪ್ರಾಯೋಗಿಕ ವಿಧಾನಗಳ ಬಗ್ಗೆ ಅರಿವು ಮೂಡಿಸುವುದು.
ಕಾರ್ಯಾಗಾರವು ಸಂವಾದಾತ್ಮಕ ತರಗತಿಗಳು, ಕೇಸ್ ಸ್ಟಡೀಸ್ ಮತ್ತು ಮುಕ್ತ ಚರ್ಚೆಗಳನ್ನು ಒಳಗೊಂಡಿರುತ್ತದೆ, ಭಾಗವಹಿಸುವವರಿಗೆ ಅವರ ಜವಾಬ್ದಾರಿಗಳ ಬಗ್ಗೆ ಸುಸಜ್ಜಿತ ತಿಳುವಳಿಕೆಯನ್ನು ನೀಡಲಾಗುತ್ತದೆ. ನೀಡುತ್ತದೆ. ಭಾಗವಹಿಸುವವರಿಗೆ ಪ್ರಮಾಣಪತ್ರಗಳನ್ನು
ಕಾರ್ಯಾಗಾರದಲ್ಲಿ ಯಾರು ಭಾಗವಹಿಸ ಬಹುದು?
- ಶಿಕ್ಷಣ ತಜ್ಞರು ಮತ್ತು ಛಾಯ ಶಿಕ್ಷಣದ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿರುವರು.
- ವಿಶೇಷ ಅಗತ್ಯವಿರುವ ಮಕ್ಕಳ ಪೋಷಕರು.
- ಸಮನ್ವಯ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿರುವವರು
ಈ ತರಬೇತಿ ಕಾರ್ಯಕ್ರಮವನ್ನು ಒನ್ ಗುಡ್ ಸ್ಟೆಪ್, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ( IMA) ಕರಾವಳಿ ಉಡುಪಿ ಮತ್ತು ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್. ಉಡುಪಿಯ ಆಟಿಸಂ ಸೊಸೈಟಿಯ ಸಹಯೋಗದೊಂದಿಗೆ ನಡೆಯಲಿದೆ ಎಂದು ಹೇಳಿದರು.
