ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಗ್ಯಾಸ್ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿದ್ದು, ಆಟೋ ಚಾಲಕರು ಮತ್ತು ಮಾಲಕರು ಹೈರಾಣಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ಕೇವಲ 4 ಪೂರೈಕೆ ಕೇಂದ್ರಗಳಿದ್ದು ಎಲ್ಲಾ ಕಡೆಗಳಲ್ಲೂ ಪೂರೈಕೆ ಕಡಿತ ಆಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು, ಈ ದಿನವೇ ಉನ್ನತ ಅಧಿಕಾರಿಗಳು ಹಾಗೂ ಸಂಬಂಧಿಸಿದ ಕಂಪೆನಿಯ ಅಧಿಕಾರಿಗಳನ್ನು ಸಹ ಕರೆದು ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ಭಾನುವಾರ ಸಂಜೆ ಸಮಾನ ಮನಸ್ಕ ಸಂಘಟನೆಗಳು ಪುನಃ ಸೇರಿ ಮುಂದಿನ ಹೋರಾಟದ ರೂಪುರೇಷೆಗಳನ್ನು ತೀರ್ಮಾನಿಸಲಾಗುವುದು ಎಂದು ಇದೇ ವೇಳೆ ತಿಳಿಸಿದ್ದಾರೆ.
ಸಿಐಟಿಯುಗೆ ಸೇರಿದ ಆಟೊ ಸಂಘಟನೆಗಳ ನಿಯೋಗದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ/ಬ್ರಹ್ಮಾವರ ತಾಲೂಕು ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ರಾಜು ಪೂಜಾರಿ, ಅಧ್ಯಕ್ಷರಾದ ರಾಜು ಸಾಲಿಯಾನ್, ಅಶ್ರಫ್, ನಾಗೇಶ್, ಉಮೇಶ್ ಪೂಜಾರಿ, ಉದಯ ಪೂಜಾರಿ, ಸದಾಶಿವ ಶೆಟ್ಟಿ ಹಾಗೂ ಇತರೆ ಆಟೊ ಸಂಘಟನೆಗಳ ಮುಖಂಡರಾದ ಕ್ರಷ್ಣಮೂರ್ತಿ ಆಚಾರ್ಯ, ದಿನೇಶ್ ಗಾಣಿಗ ಮತ್ತಿತರರು ಇದ್ದರು.
