ಉಡುಪಿ ಜಿಲ್ಲೆಯ ಶಿರೂರು ಸಮೀಪದ ದೊಂಬೆ ಬೇಲೆಮನೆ ಎಂಬಲ್ಲಿ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ಇಂದು ಸಂಜೆ ನಡೆದಿದೆ.
ಶೇಷ ಮಾಸ್ಟರ್ ಎಂಬುವವರ ಮನೆ ಸಮೀಪದ ಕೊಟ್ಟಿಗೆಗೆ ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸಮುದ್ರ ಸಮೀಪ ಇರುವ ಕಾರಣ ಗಾಳಿಯ ರಭಸಕ್ಕೆ ಬೆಂಕಿ ಅಧಿಕವಾಗಿ, ಬೆಂಕಿ ಕೆನ್ನಾಲಿಗೆಗೆ ಕೊಟ್ಟಿಗೆ ಭಸ್ಮವಾಗಿದೆ.
ಕೊಟ್ಟಿಗೆಯಲ್ಲಿ ಹುಲ್ಲು, ಕೃಷಿ ಪರಿಕರ ಸಂಪೂರ್ಣ ಸುಟ್ಟು ಹೋಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ. ಅಕ್ಕಪಕ್ಕದಲ್ಲಿ ಮನೆಗಳಿದ್ದು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಇದನ್ನು ಓದಿದ್ದೀರಾ? ಉಡುಪಿ | ಗ್ರಾಮ ಪಂಚಾಯತ್ ಚುನಾವಣೆ: ಮೀಸಲಾತಿ ಪ್ರಕಟ; ನಾಮಪತ್ರ ಸಲ್ಲಿಕೆಗೆ ನ. 27 ಕೊನೆಯ ದಿನ
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ, ಕರಾವಳಿ ಕಾವಲು ಪಡೆ, ಮೆಸ್ಕಾಂ ಇಲಾಖೆ, ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ಸ್ಥಳೀಯರು ಹಾಗೂ ಇಲಾಖೆಯ ಪ್ರಯತ್ನದಿಂದ ಬೆಂಕಿ ನಂದಿಸಲಾಯಿತು.
