ಐಪಿಎಲ್ ಕ್ರಿಕೆಟ್ ಮ್ಯಾಚ್ ಪ್ರಾರಂಭವಾಗಿದ್ದು ಯುವಕರು ಕ್ರಿಕೆಟ್ ಬೆಟ್ಟಿಂಗ್ ಆಪ್ ಮೂಲಕ ಸಾಲಗಾರರಾಗಿ, ಜೀವ ಕಳೆದುಕೊಳ್ಳುವುದು, ಮನೆ, ಊರು ಬಿಟ್ಟು ಓಡಿ ಹೋಗುವ ನೂರಾರು ಘಟನೆಗಳು ನಮ್ಮ ಸುತ್ತ ಮುತ್ತಲೂ ನಡೆಯುತ್ತಲಿದ್ದು ಅಂತಹ ಬೆಟ್ಟಿಂಗ್ ಆಪ್ ಗಳಿಗೆ ಕಡಿವಾಣ ಹಾಕುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷರಾದ ಕೋಟ ನಾಗೇಂದ್ರ ಪುತ್ರನ್ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ಅರುಣ್ ಕುಮಾರ್ ರವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸುಮಾರು ವರ್ಷಗಳಿಂದ ನೋಡಿಕೊಂಡು ಬಂದಿರುವ ಹಾಗೆ ಐಪಿಎಲ್ ಸಮಯದಲ್ಲಿ ಊರಲ್ಲಿ ಇದ್ದು ಐಪಿಎಲ್ ಮುಗಿಯುತ್ತಿದಂತೆ ಜೀವ ಕಳೆದುಕೊಂಡಿರುವವರು ಮತ್ತು ಊರು ಬಿಟ್ಟು ಸಾಲಗಾರರಾಗಿ ಓಡಿ ಹೋದವರನ್ನು ಬಹಳಷ್ಟು ನೋಡಿದ್ದೇವೆ, ಈಗ ಮತ್ತೆ ಐಪಿಎಲ್ ಕ್ರಿಕೆಟ್ ಆರಂಭವಾಗಿದೆ, ಕ್ರಿಕೆಟ್ ಅಪ್ ಗಳ ಮೂಲಕ ಬೆಟ್ಟಿಂಗ್ ಮೂಲಕ ಆಟ ಆಡಿ ಮನೆಯನ್ನು ಕಳೆದುಕೊಂಡು ಸಂಸಾರವನ್ನು ಬೀದಿ ಪಾಲಾಗದ ಘಟನೆಗಳು ನಡೆದಿವೆ.
ಯುವಕರು ದಾರಿ ತಪ್ಪದ ಹಾಗೆ ಉಡುಪಿ ಜಿಲ್ಲೆಗೆ ತಾವು ಎಲ್ಲಾ, ಠಾಣೆಗಳಿಗೂ ಸೂಚಿಸಬೇಕು ಮತ್ತು ಬೆಟ್ಟಿಂಗ್ ನಡೆಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಉಡುಪಿ ಜಿಲ್ಲೆಯಲ್ಲಿ ಬೆಟ್ಟಿಂಗ್ ನಡೆಸುವವರನ್ನು ಸಂಪೂರ್ಣವಾಗಿ ಮಟ್ಟ ಹಾಕಿ, ನೂರಾರು ಸಂಸಾರಕ್ಕೆ ನೆರವು ಆಗುವಂತೆ ಸಹಾಯ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.