ತಂಬಾಕು, ಮದ್ಯ, ಮಾದಕ ದ್ರವ್ಯ ನಿಮ್ಮಲ್ಲಿರುವ ಮನುಷ್ಯತ್ವ, ದೇಹದ ಸಮತೋಲನ ಹಾಗೂ ಮನಸ್ಸಿನ ಸದ್ಭಾವನೆಯನ್ನು ಕೊಂದು, ಮನುಷ್ಯನನ್ನು ವಿಕೃತಗೊಳಿಸುತ್ತದೆ. ಇವುಗಳಿಂದ ದೂರವಿರಿ ಎಂದು ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಕರೆ ನೀಡಿದರು.
ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಬಿ ಆರ್ ಕೆ ವೃತ್ತದಲ್ಲಿ ಪ್ರವಾದಿ ಮುಹಮ್ಮದ್(ಸ) ಜನ್ಮದಿನದ ಅಂಗವಾಗಿ ಹಯಾತುಲ್ ಇಸ್ಲಾಂ ಅಸೋಸಿಯೇಷನ್, ಬಂಗ್ಲೆಗುಡ್ಡೆ, ಸಲ್ಮಾನ್ ಜುಮ್ಮಾ ಮಸ್ಜಿದ್, ಸರ್ ಹಿಂದ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಬೃಹತ್ ಮೀಲಾದ್ ಸಂದೇಶ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದರು.
ಎಲ್ಲ ಧರ್ಮ ಗ್ರಂಥಗಳು ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದೆ. ಇಸ್ಲಾಂ ಶಾಂತಿ, ಸೌಹಾರ್ದತೆ ಸಹೋದರತೆಯ ಸಂಕೇತವಾಗಿದೆ. ಭಯೋತ್ಪಾದನೆ, ಭೀಕರವಾದ, ಅಶಾಂತಿ, ಅಸ್ಪ್ರಶ್ಯತೆ, ಅನೀತಿ, ಅನಾಚಾರ, ಅತ್ಯಾಚಾರ, ಅಕ್ರಮಗಳನ್ನು ಇಸ್ಲಾಂ ಯಾವತ್ತೂ ಒಪ್ಪುದಿಲ್ಲ. ಅದು ಇಸ್ಲಾಂ ಸಂಸ್ಕೃತಿಯಲ್ಲ ಎಂದ ಅವರು, ಕುರ್‌ಆನ್ ಮತ್ತು ಪ್ರವಾದಿಯವರ ಇಸ್ಲಾಮಿನ ಸಂದೇಶಗಳ ಮೂಲಕ ಸಮಾಜದಲ್ಲಿ ಅನ್ಯ ಧರ್ಮೀಯರೊಂದಿಗೂ ಶಾಂತಿ ಸೌಹಾರ್ದತೆಯಿಂದ ಬಾಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಸರ್ ಹಿಂದ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸಿರ್ ಶೇಖ್ ಬೈಲೂರು, ಜಲ್ವ ಏ ನೂರ್ ನ ಮೌಲಾನ ಸಹೀದ್ ರಝಾ, ಹಯಾತುಲ್ ಇಸ್ಲಾಂ ಅಸೋಸಿಯೇಷನ್, ಬಂಗ್ಲೆಗುಡ್ಡೆ ನ ಪ್ರಮುಖರಾದ ರಜ್ಜಬ್ ಎ ಕೆ, ಮಾಜಿ ಅಧ್ಯಕ್ಷರುಗಳಾದ ಬಷೀರ್ ಸಾಣೂರು, ಹನೀಫ್ ಬೆಲ್ಲೂರ್, ರಜಬ್ ಪರನಿರ್, ಮಾಜಿ ಉಪಾಧ್ಯಕ್ಷ ಕೆ ನೂರುದ್ದೀನ್, ಅಬ್ದುಲ್ ರಹಿಮಾನ್, ಸೇವಾದಳದ ಅಧ್ಯಕ್ಷ ಅಬ್ದುಲ್ಲಾ ಶೇಖ್, ಝೈನುಲ್ ಅಭಿದ್ ಸಖಾಫಿ ಮಾಗುಂಡಿ, ಅಬ್ದುಲ್ ಖಾದರ್ ಮದನಿ ಅಳಕೆ, ಮೆಹಮೂದ್ ಜುಹಾರಿ ಚೆರ್ಕಳ, ಅಷ್ಪಾಕ್ ಅಹಮದ್ ಸಖಾಫಿ, ಶಮೀಮ್ ಸಹದಿ ಸುರತ್ಕಲ್, ಇಸ್ಮಾಯಿಲ್ ಮಾಸ್ಟರ್ ಕೊಣಾಜೆ ಎಸ್ ವೈ ಎಸ್ ಮುಖಂಡರುಗಳಾದ ದಾವೂದ್ ಪರನಿರ್, ರಫೀಕ್ , ಮುಬೀನ್, ಎಸ್ ಎಸ್ ಎಫ್ ಮುಖಂಡರುಗಳಾದ ಅಲ್ತಾಫ್ ಪರನಿರ್, ನವಾಝ್ ಶರೀಫ್ , ಫಯಾಝ್ ಪರನಿರ್, ಮಯ್ಯದಿ, ಕೆ ಹಸನ್ ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಕೊಪ್ಪಳ | ಅಂತರ್ಜಾತಿ ವಿವಾಹವಾಗಿ ಕೊಲೆಗೀಡಾಗಿದ್ದ ಯುವತಿಯ ಮನೆಗೆ ಸಚಿವ ತಂಗಡಗಿ, ಸಂಸದ ಹಿಟ್ನಾಳ್ ಭೇಟಿ
ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆದಂತಹ ಧ್ವಜಾರೋಹಣ ಕಾರ್ಯಕ್ರಮವನ್ನು ಹಿರಿಯ ಧಾರ್ಮಿಕ ವಿದ್ವಾಂಸ ಇಬ್ರಾಹಿಮ್ ಫೈಝಿ ಪುಲಿಕ್ಕೂರು ಉಸ್ತಾದ್ ನೆರವೇರಿಸಿದರು. ಅಲವಿ ಫಜಲಿಲ್ ಅಲ್ ಜೆಫ್ರಿ ತoಘಳ್ ಮಿಲಾದ್ ಸಂದೇಶ ಮೆರವಣಿಗೆಗೆ ಚಾಲನೆ ನೀಡಿದರು.
