ಉಡುಪಿ ನಗರದ ದೊಡ್ಡಣಗುಡ್ಡೆಯ ಚಕ್ರತಿರ್ಥದ ಬಳಿ ಕೋಟ್ಯಂತರ ರೂಪಾಯಿ ಹಣ ಸುರಿದು, ನಿರ್ಮಿಸಿರುವ ಸರಕಾರಿ ಕಟ್ಟಡವೊಂದು ಉದ್ಘಾಟನೆ ಭಾಗ್ಯ ಕಾಣದೆ ಅನಾಥ ಸ್ಥಿತಿಯಲ್ಲಿದ್ದು, ಸಾರ್ವಜನಿಕರ ಹಣವು ವ್ಯರ್ಥವಾಗಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಈ ಕಟ್ಟಡದ ಸುತ್ತಲು ಗಿಡಗಂಟಿಗಳು ಬೆಳೆದು ನಿಂತಿದ್ದು., ಕಳ್ಳಕಾಕರಿಗೂ ಅಡಗುತಾಣದಂತಾಗಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬಂದಿದ್ದು, ಈ ಸುಸಜ್ಜಿತ ಕಟ್ಟಡವು ಯಾವ ಇಲಾಖೆಯ ಕಛೇರಿಗೆ ನಿರ್ಮಿಸಿದ್ದೆಂಬ ಮಾಹಿತಿ ಕೂಡ ತಿಳಿದುಬಂದಿಲ್ಲ.
ಇದನ್ನು ಓದಿದ್ದೀರಾ? ಬೆಳಗಾವಿ | ತಹಶೀಲ್ದಾರ್ ಆಪ್ತ ಸಹಾಯಕ ರುದ್ರಣ್ಣನದ್ದು ಆತ್ಮಹತ್ಯೆಯಲ್ಲ, ಕೊಲೆ: ಪೊಲೀಸ್ ಕಚೇರಿಗೆ ಅನಾಮಧೇಯ ಪತ್ರ!
ಈ ಬಂಗಲೆ ಹಲವು ವರ್ಷಗಳಿಂದ ಅನಾಥವಾಗಿರುವುದು ವಿಪರ್ಯಾಸದ ಸಂಗತಿ. ಉಡುಪಿಯಲ್ಲಿ ಮಕ್ಕಳ ರಕ್ಷಣಾ ಘಟಕಕ್ಕೂ ಸ್ವಂತ ಕಟ್ಟಡದ ಅವಶ್ಯಕತೆ ಇದೆ. ಉಡುಪಿ ಜಿಲ್ಲೆಗೆ ತುರ್ತಾಗಿ ನಿರ್ಗತಿಕರ ಪುರ್ನವಸತಿ ಕೇಂದ್ರವು ಬೇಕಾಗಿದೆ. ಜಿಲ್ಲಾಡಳಿತವು ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮವನ್ನು ಜರುಗಿಸುವಂತೆ ಸಾಮಾಜಿಕ ಕಾರ್ಯರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

