ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಉಡುಪಿ ಶಾಖೆಯಲ್ಲಿ ಆಯೋಜಿಸಲಾಗಿರುವ ‘ಆರ್ಟಿಸ್ಟ್ರಿ’ ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ಯೋಗ ತಜ್ಞೆ ಡಾ. ಚರಿಷ್ಮಾ ಶೆಟ್ಟಿ, ಚೇತನಾ ಗದ್ರಟಗಿ ಹಾಗೂ ಡಾ. ಚೈತ್ರಾ ಸುಹಾನ್ ಶೆಟ್ಟಿ ಅವರು ಕ್ರಮವಾಗಿ ಮೈನ್ ವಜ್ರಾಭರಣ, ಡಿವೈನ್ ಚಿನ್ನಾಭರಣ ಹಾಗೂ ‘ಎರ’ ಅನ್‌ಕಟ್ ಡೈಮಂಡ್ಸ್ ಸಂಗ್ರಹಗಳನ್ನು ಅನಾವರಣಗೊಳಿಸಿದರು. ರೂಪದರ್ಶಿಗಳಾದ ಸುಶ್ಮಾ, ಸಮೀಕ್ಷಾ ಮತ್ತು ಆರಾಧನಾ ಶೆಟ್ಟಿ ರ್ಯಾಂಪ್ ವಾಕ್ ಮೂಲಕ ಆಭರಣಗಳ ವೈವಿಧ್ಯಮಯ ವಿನ್ಯಾಸಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚೇತನಾ ಗದ್ರಟಗಿ, ಮಲಬಾರ್ ಗೋಲ್ಡ್ ಸಂಸ್ಥೆಯ ಮೇಲಿರುವ ವಿಶ್ವಾಸವೇ ಗ್ರಾಹಕರು ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡಲು ಪ್ರಮುಖ ಕಾರಣವಾಗಿದೆ ಎಂದರು.
ಡಾ. ಚರಿಷ್ಮಾ ಶೆಟ್ಟಿ ಮಾತನಾಡಿ, ಸಂಸ್ಥೆಯಲ್ಲಿನ ವೈವಿಧ್ಯಮಯ ಆಭರಣಗಳು ಆಕರ್ಷಕವಾಗಿದ್ದು, ಸಿಬ್ಬಂದಿಯ ಗ್ರಾಹಕ ಸ್ನೇಹಿ ಸೇವೆ ಮೆಚ್ಚುಗೆಗೆ ಪಾತ್ರವಾಗಿದೆ. ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಡಾ. ಚೈತ್ರಾ ಸುಹಾನ್ ಶೆಟ್ಟಿ ಮಾತನಾಡಿ, ಚಿನ್ನ ಮತ್ತು ವಜ್ರಾಭರಣಗಳ ಕಲಾತ್ಮಕ ವಿನ್ಯಾಸಗಳು ವಿಶೇಷ ಆಕರ್ಷಣೆ ಹೊಂದಿವೆ. ಆಭರಣಗಳ ವೈವಿಧ್ಯತೆಯ ಜತೆಗೆ ಗ್ರಾಹಕರಿಗೆ ತಾಳ್ಮೆಯಿಂದ ಸೇವೆ ನೀಡುವ ಸಿಬ್ಬಂದಿಯ ಕಾರ್ಯವೈಖರಿಯೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಲಬಾರ್ ಗೋಲ್ಡ್ ಉಡುಪಿ ಶಾಖಾ ಮುಖ್ಯಸ್ಥ ವಿಜಯ ಕುಮಾರ್ ಡಿ., ಶಾಖಾ ವ್ಯವಸ್ಥಾಪಕ ಪುರಂದರ ತಿಂಗಳಾಯ, ಸೇಲ್ಸ್ ಮ್ಯಾನೇಜರ್ ಹರೀಶ್ ಎಂ.ಜಿ., ಸುಧಾಕರ, ಇರ್ಷಾದ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ತಂಝೀಮ್ ಶಿರ್ವ ಉಪಸ್ಥಿತರಿದ್ದರು. ಆರ್ಟಿಸ್ಟ್ರಿ ಪ್ರದರ್ಶನದ ಕುರಿತು ಸಮೀರ್ ಮಾಹಿತಿ ನೀಡಿದರು. ವಿಘ್ನೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನವೆಂಬರ್ 2ರವರೆಗೆ ನಡೆಯಲಿರುವ ಪ್ರದರ್ಶನದಲ್ಲಿ ಚಿನ್ನ, ಅನ್‌ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ರತ್ನಾಭರಣಗಳ ವೈವಿಧ್ಯಮಯ ಸಂಗ್ರಹಗಳನ್ನು ವೀಕ್ಷಿಸಿ ಖರೀದಿಸಲು ಅವಕಾಶವಿದೆ. ಸಂಸ್ಥೆಯ ಪ್ರಕಟಣೆಯ ಪ್ರಕಾರ, ಚಿನ್ನ, ಅನ್‌ಕಟ್ ಮತ್ತು ಅಮೂಲ್ಯ ರತ್ನಾಭರಣಗಳ ಮೇಕಿಂಗ್ ಚಾರ್ಜ್‌ನಲ್ಲಿ ಶೇ. 30ರವರೆಗೆ ಹಾಗೂ ವಜ್ರದ ಮೌಲ್ಯದ ಮೇಲೆ ಶೇ. 30ರವರೆಗೆ ರಿಯಾಯಿತಿ ನೀಡಲಾಗುತ್ತಿದೆ.
ಪಾರದರ್ಶಕ ವ್ಯವಹಾರ, ವಿನಿಮಯದಲ್ಲಿ ಶೂನ್ಯ ಕಡಿತ, ಬೈಬ್ಯಾಕ್ ಗ್ಯಾರಂಟಿ, ಉಚಿತ ವಿಮೆ ಹಾಗೂ ಹಾಲ್‌ಮಾರ್ಕ್ ಹೊಂದಿರುವ ಆಭರಣಗಳು ಸಂಸ್ಥೆಯ ಪ್ರಮುಖ ವೈಶಿಷ್ಟ್ಯಗಳಾಗಿವೆ ಎಂದು ಸಂಸ್ಥೆ ತಿಳಿಸಿದೆ.







