ಕಳಸ ತಾಲ್ಲೂಕಿನ ಹೊರನಾಡು ಗ್ರಾಮಕ್ಕೆ ಬೇರೆ ಭಾಗಗಳಿಂದ ಪ್ರವಾಸಿಗರು ಹಾಗೂ ಜನರು ಬರುತ್ತಾರೆ, ಅದರಲ್ಲೂ, ಹೊರನಾಡು ಎಂದರೆ ತಕ್ಷಣ ನೆನಪು ಆಗುವುದೇ ಹೊರನಾಡಿನಲ್ಲಿ ನೆಲೆಸಿರುವ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರು ಎಂದು ಜನರ ನಂಬಿಕೆ ಮಾತಾಗಿದೆ.
ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಇರುವ ಜಾಗದಲ್ಲಿ, ನನ್ನದೇ ಜಾಗ ಎಂಬುವ ರೀತಿಯಲ್ಲಿ ಸರ್ಕಾರದ ಜಾಗ, ಅದರಲ್ಲೂ ಡಾಂಬರೀಕರಣ ಹಾಕಿರುವ ಜಾಗದಲ್ಲಿ ಗೋಪುರ ನಿರ್ಮಾಣ ಮಾಡಲು ಓರ್ವ ವ್ಯಕ್ತಿ ಮುಂದಾಗಿದ್ದಾನೆ. ದೇವಾಲಯದ ಎದುರಿಗೆ ಇರುವ ಹೊರನಾಡು ಮುಖ್ಯ ರಸ್ತೆಯಲ್ಲಿ ತಿರುಗಾಡುವ ರಸ್ತೆಯ ಮಧ್ಯ ಭಾಗದಲ್ಲಿ ಗೋಪುರ ನಿರ್ಮಿಸುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ತೊಂದರೆ ಆಗುತ್ತಿದೆ.

ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಎದುರು ಭಾಗದಿಂದ ಹೊಕ್ಕಳಿಕೊಪ್ಪ, ದಿಂಡಿನಮಕ್ಕಿ, ಮಕ್ಕಿಹಾಳಿ, ಗೋಳಿಬಿಳಲು ಗ್ರಾಮಸ್ಥರು ದೇವಾಲಯದ ದಕ್ಷಿಣಕ್ಕೂ ಮತ್ತು ಹೊಕ್ಕಳಿಕೊಪ್ಪಕ್ಕೆ ಹೋಗುವ ತಿರುವಿನಲ್ಲಿ ಪ್ರಯಾಣ ಮಾಡಬೇಕಿದೆ. ಈ ಸಮಸ್ಯೆಯನ್ನ ಸೃಷ್ಟಿ ಮಾಡಿರುವುದು ಬೇರೆ ಯಾರು ಅಲ್ಲ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಭೀಮೇಶ್ವರ ಜೋಷಿ. ತನ್ನ ಪೂರ್ವಜರ ಪುತ್ಥಳಿ ಗೋಪುರ ನಿರ್ಮಾಣ ಮಾಡುವುದಕ್ಕೆ, ಈ ರಸ್ತೆಯ ಅಂಚಿನಲ್ಲಿ ವಸತಿ ಗೃಹ, ಹೋಟೆಲ್, ಬಸದಿ, ಮನೆಗಳು, ಹೋಂಸ್ಟೇಗಳು, ವಸತಿ ಗೃಹಗಳಿಗೆ ನೂರಾರು ಗ್ರಾಹಕರು ತೊಂದರೆ ಕೊಟ್ಟು ಗೋಪುರ ನಿರ್ಮಾಣ ಮಾಡಿ ಅದನ್ನ ಅನಾವರಣಗೊಳಿಸುತ್ತಿದ್ದಾರೆ. ನಾವು ಎಷ್ಟೇ ಹೇಳಿದರೂ ನಮ್ಮ ಮಾತಿಗೆ ಬೆಲೆ ಇಲ್ಲದಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರು ಯಾವ ಕ್ರಮ ತೆಗೆದುಕೊಂಡಿಲ್ಲ, ಎಂದು ಸಾರ್ವಜನಿಕರು ಈದಿನ.ಕಾಮ್ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಪುತ್ಥಳಿ ಜಾಗವನ್ನು ವಿಸ್ತರಿಸಲು ದೇವಾಲಯದವರು ಮುಂದಾಗಿದ್ದು, “ನೂರಾರು ವರ್ಷಗಳಿಂದ ತಿರುಗಾಡುವ ರಸ್ತೆಯ ಮಧ್ಯಭಾಗದಲ್ಲಿ ಗೋಪುರ ನಿರ್ಮಿಸುತ್ತಿರುವುದು ಯಾವ ನ್ಯಾಯ ಅವರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯನಾ” ಇದರಿಂದಾಗಿ ಎಂಟು ಚಕ್ರದ ವಾಹನಗಳನ್ನು ತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಸಂಚಾರಕ್ಕೆ ಅಡಚಣೆ ಮಾಡುತ್ತಿರುವ ಅಕ್ರಮವಾಗಿ ನಿರ್ಮಿಸಿರುವ ಗೋಪುರವನ್ನು ತೆರವುಗೊಳಿಸಬೇಕು ಎಂದು ಸ್ಥಳೀಯ ಭಾಗದ ಗ್ರಾಮಸ್ಥರು ಈದಿನ.ಕಾಮ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ದಲಿತರ ಗುಡಿಸಲನ್ನು ನೆಲಸಮ ಮಾಡಿದ ತಾಲೂಕು ಅಧಿಕಾರಿಗಳು
ಪಟ್ಟಣಗಳಿಗೆ ಹೋಗಬೇಕಾದ ವಾಹನಗಳ ಸಂಚಾರಕ್ಕೆ ಅಡಚಣೆ ಹಾಗೂ ಇದರಿಂದ ಆ ಭಾಗದಲ್ಲಿ ವಾಸ ಮಾಡುತ್ತಿರುವ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಸರ್ಕಾರದ ಜಾಗ ಹಾಗೂ ಡಾಂಬರೀಕರಣ ಮಾಡಿರುವ ಮಧ್ಯ ರಸ್ತೆಯಲ್ಲಿ, ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪುತ್ಥಳಿ ಗೋಪುರವನ್ನು ಸಂಬಂಧ ಪಟ್ಟ, ಅಧಿಕಾರಿಗಳು ತೆರವುಗೊಳಿಸಿ ಸುತ್ತಮುತ್ತಲಿನ ಗ್ರಾಮಸ್ಥರಿಗೆ ನ್ಯಾಯ ಒದಗಿಸಿ ಕೊಡುವರೇ ಕಾದು ನೋಡಬೇಕಾಗಿದೆ.
ಮೊದಲನೇಯದಾಗಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಭೀಮೇಶ್ವರ ಜೋಷಿ ಅವರ ಸ್ವಂತದ್ದು, ಸಾರ್ವಜನಿಕ ದೇವಾಲಯ ಅಲ್ಲ. ಭಕ್ತಿಯಿಂದ ಜನರು ಅಲ್ಲಿಗೆ ಬರುತ್ತಾರೆಯೇ ಅಷ್ಟೆ. ಭೀಮೇಶ್ವರ ಜೋಷಿ ಅಲ್ಲಿನ ಪ್ರಧಾನ ಅರ್ಚಕ ಅಲ್ಲ. ಅವರು ಧರ್ಮದರ್ಶಿಗಳು. ಹೊರನಾಡು ಪ್ರಸಿದ್ದಿ ಪಡೆಯಲು ಕಾರಣವೇ ಭೀಮೇಶ್ವರ ಜೋಷಿ ಮನೆತನದ ದೇವರು ಶ್ರೀ ಅನ್ನಪೂರ್ಣೇಶ್ವರಿ.
ಮೊದಲನೇಯದಾಗಿ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ ಭೀಮೇಶ್ವರ ಜೋಷಿ ಅವರ ಸ್ವಂತದ್ದು, ಸಾರ್ವಜನಿಕ ದೇವಾಲಯ ಅಲ್ಲ. ಭಕ್ತಿಯಿಂದ ಜನರು ಅಲ್ಲಿಗೆ ಬರುತ್ತಾರೆಯೇ ಅಷ್ಟೆ. ಭೀಮೇಶ್ವರ ಜೋಷಿ ಅಲ್ಲಿನ ಪ್ರಧಾನ ಅರ್ಚಕ ಅಲ್ಲ. ಅವರು ಧರ್ಮದರ್ಶಿಗಳು. ಹೊರನಾಡು ಪ್ರಸಿದ್ದಿ ಪಡೆಯಲು ಕಾರಣವೇ ಭೀಮೇಶ್ವರ ಜೋಷಿ ಮನೆತನದ ದೇವರು ಶ್ರೀ ಅನ್ನಪೂರ್ಣೇಶ್ವರಿ. ಹೊರನಾಡಲ್ಲಿ ಹೋಂ ಸ್ಟೇ, ವಸತಿಗೃಹಗಳು ನಿರ್ಮಾಣವಾಗಲು ಕಾರಣವೇ ಭೀಮಶ್ವರ ಜೋಷಿ ಅವರ ಪೂರ್ವಜನ ಅಂದರೆ ಮನೆತನದ ದೇವರು ಶ್ರೀ ಅನ್ನಪೂರ್ಣೇಶ್ವರಿ.
ಮೊದಲ ಮಸೀದಿ ಎಷ್ಟೋ e ತರ ಇದೆ ನೋಡಿ
En artha nim mathidu