ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಅಪರಿಚಿತ ಶವದ ಸಂಬಂಧಿಕರನ್ನು ಪತ್ತೆ ಹಚ್ಚುವಲ್ಲಿ ಉಡುಪಿ ನಗರ ಪೋಲಿಸ್ ಠಾಣೆಯ ಪೋಲಿಸರು ಯಶಸ್ವಿಯಾಗಿದ್ದಾರೆ.
ಮಂಗಳೂರಿನಲ್ಲಿದ್ದ ಸಂಬಂಧಿಕರು ಉಡುಪಿಗೆ ಬಂದು ಶವವನ್ನು ಕಂಡು ದೃಢೀಕರಿಸಿದ್ದರು. ಮೃತ ಯುವಕ ಪಶ್ಚಿಮ ಬಂಗಾಳದ ನಿವಾಸಿ, ಕಟ್ಟಡ ಕಾರ್ಮಿಕನೆಂದು ತಿಳಿದುಬಂದಿದೆ. ಗಬ್ಬು ವಾಸನೆ ಬೀರುತ್ತಿರುವ ಶವವನ್ನು ಪಶ್ಚಿಮ ಬಂಗಾಳಕ್ಕೆ ಕೊಂಡೊಯ್ಯಲು ಸಂಬಂಧಿಕರಿಗೆ ಅಸಹಾಯಕ ಪರಿಸ್ಥಿತಿ ಎದುರಾಯಿತು. ಈ ಸಂದರ್ಭ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ನೆರವಿಗೆ ಬಂದು, ಬೀಡಿನ ಗುಡ್ಡೆ ರುದ್ರಭೂಮಿಯಲ್ಲಿ ಕಾನೂನು ಪ್ರಕ್ರಿಯೆ ನಡೆದ ಬಳಿಕ ಅಂತ್ಯಸಂಸ್ಕಾರ ನಡೆಸಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಏಡ್ಸ್ ದಿನದ ಅಂಗವಾಗಿ ಜಾಗೃತಿ ಜಾಥಾ
ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯ್ಕ್ ಎಎಸ್‌ಐ, ಪಿಎಸ್‌ಐ ಪುನೀತ್ ಕುಮಾರ್ ಹಾಗೂ ಎಎಸ್‌ಐ ಹರೀಶ್, ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು. ಅಂತ್ಯಸಂಸ್ಕಾರ ನಡೆಸಲು ಸತೀಶ್ ಕುಮಾರ್, ಫ್ಲವರ್ ವಿಷ್ಣು, ನಗರಸಭೆ ಸಹಕರಿಸಿತು. ಆದಿ ಉಡುಪಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಯುವಕನ ಶವವು ಕಳೆದ ಬುಧವಾರ ಪತ್ತೆಯಾಗಿತ್ತು.
