ಸ್ವಿಚ್ ಬೋರ್ಡ್‌ಗೆ ಹಾಕಲಾಗಿದ್ದ ಚಾರ್ಜರ್ ವೈರ್‌ಅನ್ನು ಬಾಯಿಗೆ ಹಾಕಿಕೊಂಡ ಪರಿಣಾಮ ವಿದ್ಯುತ್ ತಗುಲಿ 8 ತಿಂಗಳ ಮಗು ಸಾವನ್ನಪ್ಪಿರುವ ದುರ್ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಡೆದಿದೆ.
ತಾಲೂಕಿನ ಸಿದ್ದರ ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಸಂತೋಷ ಹಾಗೂ ಸಂಜನಾ ದಂಪತಿ ಮಗಳು ಸಾನಿಧ್ಯ ಮೃತಪಟ್ಟಿದ್ದಾಳೆ. ಮನೆಯಲ್ಲಿ ಮೊಬೈಲ್ ಚಾರ್ಜ್ ಹಾಕಿದ್ದ ಪೋಷಕರು, ಮೊಬೈಲ್ ತೆಗೆದುಕೊಂಡು ಸ್ವಿಚ್ ಆಫ್ ಮಾಡದೇ ಬಿಟ್ಟಿದ್ದಾರೆ. ಅ ಚಾರ್ಜರ್ ವೈರ್‌ಅನ್ನು ಬಾಯಲ್ಲಿಟ್ಟುಕೊಂಡ ಮಗು ವಿದ್ಯುತ್ ತಗಲಿ ಸಾವನ್ನಪ್ಪಿದೆ.
ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.