ಉತ್ತರ ಕನ್ನಡ | ಬಾಡಿಗೆ ಮನೆಗಾಗಿ ಜಾತಿ ಬದಲಾಯಿಸಿದ್ದ ತಂದೆ; 40ವರ್ಷಗಳ ನಂತರ ಮಗಳಿಗೆ ಸಂಕಷ್ಟ

Date:

Advertisements

ಜಾತಿಯ ಕಾರಣಕ್ಕೆ ಸಿಗದ ಬಾಡಿಗೆ ಮನೆಗಾಗಿ, ಮಗಳ ಜಾತಿಯನ್ನೇ ಬದಲಾಯಿಸಿದ್ದ ತಂದೆ-ಮಗಳು 40ವರ್ಷಗಳ ನಂತರ ಸಂಕಷ್ಟ ಎದುರಿಸುವಂತಾಗಿದೆ.

ಹೌದು, ಇದೊಂದು ಅಪರೂಪದ ಮತ್ತು ವಿಚಿತ್ರ ಘಟನೆ. ಸಮಾಜದಲ್ಲಿನ ಜಾತಿಯತೆಯ ಕಟ್ಟು ಪಾಡುಗಳು ಮತ್ತು ಮೇಲ್ವರ್ಗದವರೆಂಬ ಅಹಂಕಾರ ಪರಿಶಿಷ್ಟ ಜಾತಿ ಸಮುದಾಯದ ಬಡಪಾಯಿಗಳನ್ನು ಜೀವನ ಪರ್ಯಂತ ಅವರನ್ನು ಹೇಗೆ ಸಂಕಷ್ಟಕ್ಕಿಡು ಮಾಡುತ್ತದೆ ಎಂಬುದಕ್ಕೆಈ ಘಟನೆ ಸ್ಪಷ್ಟ ನಿದರ್ಶನ.

ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ,
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ
ಇದು ಕಾರಣ ಕೂಡಲಸಂಗಮದೇವಾಲಿಂಗಸ್ಥಲವನರಿದವನೆ ಕುಲಜನು.

Advertisements

ಕಸುಬಿನ ಆಧಾರದ ಮೇಲೆ ನಿರ್ಮಾಣವಾಗಿರುವ ಜಾತಿ ವ್ಯವಸ್ಥಯನ್ನು ಬಸವಣ್ಣವರು 12ನೇಯ ಶತಮಾನದಲ್ಲಿಯೆ ವಿರೋದಿಸಿದ್ದಾರೆ. ಆದರೂ, ಸಹ ಇಂದಿಗೂ ಜಾತಿ ತಾರತಮ್ಯದ ಪ್ರಕರಣಗಳು ಕೆಳವರ್ಗದ ಜನರನ್ನು  ಕಷ್ಟದ ಕೂಪಕ್ಕೆ ನೂಕುತ್ತಿವೆ. 40ವರ್ಷಗಳ ಹಿಂದಿನ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನಲ್ಲಿ ನಡೆದಿದೆ.

ಇದು ವೀಣಾ ಹುಲಸ್ವಾರ ಎಂಬ ಪರಿಶಿಷ್ಟ ಜಾತಿಯ ಮಹಿಳೆಯ ಕಥೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ಇವರ ತಂದೆ ಪ್ರವಾಸೋಧ್ಯಮ ಇಲಾಖೆಯಲ್ಲಿ ಗೈಡ್ ಆಗಿ ವಿಜಯಪೂರ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕುಟುಂಬವನ್ನೂ ತಮ್ಮೊಟ್ಟಿಗೆ ಕರೆತಂದ ಅವರಿಗೆ ಜಾತಿಯ ಕಾರಣಕ್ಕೆ ಎಷ್ಟೇ ಅಲೆದಾಡಿದರೂ, ಎಷ್ಟೆ ಹುಡುಕಿದರು ಇವರಿಗೆ ಯಾರು ಸಹ ಬಾಡಿಗೆ ಮನೆ ಕೊಡುವುದಿಲ್ಲ.

ಇವರು ಪರಿಶಿಷ್ಟ ಜಾತಿಯವರೆಂಬ ಕಾರಣಕ್ಕೆ ಇವರಿಗೆ ಯಾರು ಸಹ ಮನೆ ಬಾಡಿಗೆ ನೀಡದೆ ತಿರಸ್ಕರಿಸಿ ಅವಮಾನಿಸುತ್ತಾರೆ. ಇದರಿಂದ ಚಿಂತಿತರಾದ ವೀಣಾ ಅವರ ತಂದೆ ಬಾಡಿಗೆ ಮನೆ ಪಡೆಯಲು ಮಗಳನ್ನು ಶಾಲೆಗೆ ಸೇರಿಸುವಾಗ ಅವರ ನಿಜ ಜಾತಿಯನ್ನು ಬಿಟ್ಟು, ಮರಾಠಾ ಎಂದು ಶಾಲೆಯಲ್ಲಿ ಜಾತಿಯನ್ನು ನಮೂದಿಸುತ್ತಾರೆ.

ವೀಣಾ ಅವರ ತಂದೆ ಮಗಳ ಜಾತಿಯನ್ನು ಬದಲಾಯಿಲು ಪ್ರಮುಖ ಕಾರಣವೆ ಮನೆ ಬಾಡಿಗೆ ಸಿಗಲಿ ನನ್ನ ಮಗಳ ಜಾತಿ ಕಾಗದವನ್ನು ತೊರಿಸಿ ಬಾಡಿಗೆ ಮನೆ ಪಡೆಯಬಹುದೆಂಬ ಒಂದೇ ಉದ್ದೇಶ ಅವರದಾಗಿತ್ತು. ನಂತರ ಕಲಿತು, ಶಾಲೆ ಬಿಟ್ಟ ವೀಣಾ ಅವರು ಬೆಳೆದು ದೊಡ್ಡವರಾಗಿ, ಮದುವೆ ಆಗಿ ಮಕ್ಕಳಾದ ಕೆಲವು ವರ್ಷಗಳ ನಂತರ ಅವರ ಗಂಡ ಮರಣ ಹೊಂದಿದ್ದರು.

ಹೀಗೆ ಕಷ್ಟದ ಜೀವನ ನಡೆಸುತ್ತಿದ್ದ, ವೀಣಾ ಅವರಿಗೆ ಮತ್ತೊಂದು ಸಂಕಷ್ಟ ಎದುರಾಯಿತು, ಅದುವೆ ಜಾತಿ ಪ್ರಮಾಣ ಪತ್ರ. ಇಲ್ಲಿ ವೀಣಾ ಅವರ ತಂದೆ ಜಾತಿ ಪರಿಶಿಷ್ಟ ಜಾತಿಯವರು ಗಂಡನು ಪರಿಶಿಷ್ಟ ಜಾತಿಯವರು. ಆದರೆ, 40ವರ್ಷಗಳ ಹಿಂದೆ ಪರಿಶಿಷ್ಟ ಜಾತಿಯವರೆಂಬ ಬಾಡಿಗೆ ಮನೆ ಸಿಗದ ಕಾರಣಕ್ಕೆ ವೀಣಾ ಅವರನ್ನು ಶಾಲೆಗೆ ಸೇರಿಸುವಾಗ ಮರಾಠಾ ಎಂದು ಇವರ ಶಾಲೆಯಲ್ಲಿ ಮರಾಠ ಎಂದು ನಮೂದಾಗಿತ್ತು.

ಈ ಕಾರಣಕ್ಕಾಗಿ ವೀಣಾ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಸಿಗಲಿಲ್ಲ  ಅಧಿಕಾರಿಗಳು ನಿಮ್ಮದು ಮರಾಠಾ ಎಂದು ಇದ್ದು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುವದಿಲ್ಲ ಎಂದು ತಿಳಿಸುತ್ತಾರೆ. ಈ ಕಾರಣಕ್ಕಾಗಿ ವೀಣಾ ಅವರು ಪರಿಶಿಷ್ಟ ಜಾತಿಗೆ ಸಿಗುವ ಎಲ್ಲ ಮಿಸಲಾತಿ ಮತ್ತು ಯೋಜನೆಗಳಿಂದ ವಂಚಿತರಾಗುವಂತಾಗಿದೆ. ನಿಯಮದ ಪ್ರಕಾರ ಮದುವೆ ಆದ ನಂತರ ಗಂಡನ ಜಾತಿ ಎಂದು ಪ್ರಮಾಣ ಪತ್ರವನ್ನು ನೀಡಬೇಕಾಗಿತ್ತು. ಆದರೆ, ಅಧಿಕಾರಿಗಳು ಯಾವುದೆ ಕಾರಣಕ್ಕೂ ನಿಮಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ಕೊಡುವುದಿಲ್ಲ ಎಂದಿದ್ದಾರೆ.

ಪರಿಶಿಷ್ಟ ಜಾತಿಯವರು ಎಂಬ ಕಾರಣಕ್ಕೆ ಮನೆ ಬಾಡಿಗೆ ಸಿಗಲಿಲ್ಲವೆಂದು ವೀಣಾ ಅವರ ತಂದೆ ವೀಣಾ ಅವರನ್ನು ಶಾಲೆಗೆ ಸೇರಿಸುವಾಗ ಮರಾಠ ಎಂದು ಬರೆಯಿಸಿದ್ದು, ಇಂದು ವೀಣಾ ಅವರು ಪರಿಶಿಷ್ಟ ಜಾತಿಯವರಾಗಿದ್ದರೂ ಸಹ ಸರ್ಕಾರದ ಯೋಜನೆಗಳಿಂದ ವಂಚಿತರಾಗುವಂತೆ ಮಾಡಿದೆ. ಇದರ ಜೊತೆಗೆ ಇವಾಗಲೂ ಸಹ ವೀಣಾ ಅವರಿರುವ ಮನೆ ಅವರ ಹೆಸರಿಗೆ ಆಗಿಲ್ಲ. ಆ ಮನೆಯಲ್ಲಿ 25 ವರ್ಷಗಳಿಂದ ವಾಸವಿದ್ದರೂ ಸಹ ಅಕ್ರಮ ಮನೆ ಎಂದು ಅವರ ಹೆಸರಿನಲ್ಲಿ ಮನೆ ಇಲ್ಲ ಒಂದು ಸಣ್ಣ ಚಪ್ಪರವನ್ನು ಹಾಕಿಕೊಂಡು ಕೂಲಿ ಕೆಲಸ ಜೊತೆಗೆ ಹಪ್ಪಳ ಸಂಡಿಗೆ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ.

ಇಲ್ಲಿ ಸುಮಾರ ಮನೆಗಳಿದ್ದು, ಅವರ ಯಾರ ಹೆಸರಿನಲ್ಲಿಯೂ ಮನೆ ಆಗದಿರುವದು ಇಲ್ಲಿಯ ಜನರ ಬಹುದೊಡ್ಡ ಸಮಸ್ಯೆಯಾಗಿದೆ. ಈ ಕುರಿತು ಈ ದಿನ.ಕಾಮ್‌ ಜೊತೆ ಮಾತನಾಡಿ ಕಣ್ಣಿರಾಗುತ್ತಾರೆ ವೀಣಾ. ನಾವು ಪರಿಶಿಷ್ಟ ಜಾತಿಯವರೇ ಆದರೂ ಸರ್ಕಾರದ ಯೋಜನೆಗಳು ದೊರಕುತ್ತಿಲ್ಲ ಮತ್ತು ಈ ಸಣ್ಣ ಮನೆಯಲ್ಲಿ ಎಂಥ ಮಾಡುವದು ಮನೆಗೆ ಯಾರಾದರೂ ಬಂದರೆ ಒಳಗಡೆ ಕರೆಯಲು ಮನಸ್ಸಾಗುವದಿಲ್ಲ ಎನ್ನುತ್ತಾರೆ.

ಈ ಕುರಿತು ಇಲ್ಲಿನ ಶಾಸಕರಿಗೆ ರಾಜಕಾರಣಿಗಳಿಗೆ ಸಾಕಷ್ಟು ಸಾರಿ ಮನವಿ ಮಾಡಿದ್ದೇನೆ ಚುನಾವಣೆ ಬಂದಾಗ ನಿಮ್ಮ ಹೆಸರಿಗೆ ಮನೆ ಮಾಡಿಕೊಡತ್ತೇವೆ ಎಂದು ಹೇಳುತ್ತಾರೆಯೇ ಹೊರತು, ಇಲ್ಲಿಯವರೆಗೂ ಏನು ಮಾಡಿಲ್ಲ.

ವೀಣಾ ಅವರಿಗೆ ಇವಾಗ 48ವರ್ಷ. ಅವರು ಒಂದನೇಯ ತರಗತಿಯಲ್ಲಿ ಸೇರಿಸುವಾಗ ಮನೆ ಸಿಗಲಿ ಎಂಬ ಒಂದೇ ಕಾರಣದಿಂದ ಅವರ ತಂದೆ ಜಾತಿ ಬದಲಿಸಿದ್ದು, ಅವರು ಜೀವಮಾನವೆಲ್ಲಾ ಸರ್ಕಾರದ ಎಲ್ಲ ಯೋಜನೆಗಳಿಂದ ವಂಚಿತರನ್ನಾಗಿ ಮಾಡಿದೆ.

ಇನ್ನಾದರೂ ಕುಮಟಾ ತಾಲೂಕಿನ ತಹಸೀಲ್ದಾರ ಮತ್ತು ಆಡಳಿತಾಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸುವತ್ತ ಗಮನ ಹರಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X