ಕರ್ನಾಟಕ ವಿಶ್ವವಿದ್ಯಾಲಯ ಡಾ. ಆರ್ ಸಿ ಹಿರೇಮಠ ಕನ್ನಡ ಅಧ್ಯಯನ ಪೀಠದ ವತಿಯಿಂದ ಶಾಭೋದ್ದೀನ ಮುಗಳಿಕಟ್ಟಿ ಅವರಿಗೆ ಪಿಎಚ್.ಡಿ ಪದವಿ ಘೋಷಣೆ.
ಸಹಾಯಕ ಪ್ರಾಧ್ಯಾಪಕ ಡಾ. ವಾಮದೇವ ಎಚ್. ತಳವಾರ ಇವರ ಮಾರ್ಗದರ್ಶನದಲ್ಲಿ “ಮುಂಡಗೋಡ ತಾಲೂಕು: ಸಾಂಸ್ಕೃತಿಕ ಅಧ್ಯಯನ” ಎಂಬ ವಿಷಯ ಕುರಿತು ಮಹಾಪ್ರಬಂಧ ಮಂಡಿಸಿರುವ ಸಂಶೋಧಕ ಶಾಭೋದ್ದೀನ ಮುಗಳಿಕಟ್ಟಿ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದಿಂದ ಪಿಎಚ್.ಡಿ ಪ್ರದಾನ ಮಾಡಲಾಗಿದೆ.
“ಪ್ರಸ್ತುತ ಮಹಾಪ್ರಬಂಧವು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಕುರಿತು ಕೈಗೊಂಡ ಮೊಟ್ಟಮೊದಲ ಸಮಗ್ರ ಅಧ್ಯಯನವಾಗಿದೆ. ಶಾಭೋದ್ದೀನ ಮುಗಳಿಕಟ್ಟಿ ಇವರು ತಮ್ಮ ಸಂಶೋಧನೆಯಲ್ಲಿ 11 ಶಾಸನಗಳು, 69 ಸ್ಮಾರಕ ಶಿಲ್ಪಗಳು ಮತ್ತು 142 ಕ್ಕೂ ಹೆಚ್ಚು ಮೂರ್ತಿಶಿಲ್ಪಗಳನ್ನು ಹೊಸದಾಗಿ ಕಂಡುಹಿಡಿದು ಪ್ರಬಂಧದಲ್ಲಿ ವಿಶ್ಲೇಷಿಸಿದ್ದಾರೆ ಎಂದು ಮಾರ್ಗದರ್ಶಕರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಅನಧಿಕೃತ ರಸ್ತೆ ಅಗೆದ ಅಂಗಡಿ ಪರವಾನಗಿ ರದ್ದು, ಮಾಲೀಕನಿಗೆ 12 ಸಾವಿರ ದಂಡ
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹಳೂರ ಗ್ರಾಮದ ಮಹ್ಮದ ಹನೀಫ ಮತ್ತು ಸಪೂರಾ ಬೇಗಂ ಇವರ ತಮ್ಮ ಮಗ ಶಾಭೋದ್ದೀನ ಮುಗಳಿಕಟ್ಟಿ ಅವರಿಗೆ ಕವಿವಿ ಪಿ ಎಚ್.ಡಿ ಪ್ರದಾನ ಮಾಡಿದ್ದಕ್ಕೆ ತಂದೆ-ತಾಯಿ, ಕುಟುಂಬ, ಗುರು- ಹಿರಿಯರು, ಸ್ನೇಹಿತಬಳಗ ಹರ್ಷ ವ್ಯಕ್ತಪಡಿಸಿದ್ದಾರೆ.
