ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕು ಅಹಿಂದ ಸಂರಕ್ಷಣಾ ವೇದಿಕೆಯು ವತಿಯಿಂದ ಬಡ ಮಕ್ಕಳಿಗೆ ಉಚಿತ ಕ್ಷೌರ ಕಾರ್ಯಕ್ರಮ ಹಮ್ಮಿಕೊಂಡು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ವಿಶಿಷ್ಟವಾಗಿ ಆಚರಣೆ ಮಾಡಲಾಯಿತು.
ಮದ್ದೂರು ತಾಲೂಕು ಅಹಿಂದ ಸಂರಕ್ಷಣಾ ವೇದಿಕೆಯ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ವಳಗೆರೆಹಳ್ಳಿ ಗ್ರಾಮದಲ್ಲಿ ನಿರಾಶ್ರಿತರ ಹಾಗೂ ಬಡ ಕುಟುಂಬದ ಮಕ್ಕಳಿಗೆ ಈ ಉಚಿತ ಕ್ಷೌರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮದ್ದೂರು ತಾಲೂಕು ಅಹಿಂದ ಸಂರಕ್ಷಣಾ ವೇದಿಕೆಯು ಈ ರೀತಿಯಲ್ಲಿ ಬಡ ಮಕ್ಕಳಿಗೆ ಉಚಿತ ಕ್ಷೌರ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತಾಲೂಕಿನಲ್ಲಿ ಎಲ್ಲರೂ ಮೆಚ್ಚುವಂಥದ್ದು. ಸಂಘಟನೆಯ ಅಧ್ಯಕ್ಷರು, ಪದಾಧಿಕಾರಿಗಳು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಕನ್ನಡ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷ ಉಮಾಶಂಕರ್ ತಿಳಿಸಿದರು.

ಶಿಕ್ಷಕ, ಸಂಘಟಕ ಕೆ ಟಿ ಶಿವಕುಮಾರ್ ಮಾತನಾಡಿ, ಅಹಿಂದ ಸಂರಕ್ಷಣಾ ವೇದಿಕೆಯು ಸವಿತ ಸಮಾಜದ ಒಡಗೂಡಿ ಎಲ್ಲಾ ವರ್ಗದ ಬಡಮಕ್ಕಳಿಗೆ ಉಚಿತ ಕ್ಷೌರವನ್ನು ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇದು ಸಮಾಜಕ್ಕೆ ಉತ್ತಮವಾದ ಸಂದೇಶವಾಗಿದೆ. ಈ ರೀತಿಯ ಕಾರ್ಯಕ್ರಮ ರಾಜ್ಯಾದ್ಯಂತ ಅಹಿಂದ ಸಂರಕ್ಷಣಾ ವೇದಿಕೆಯ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಹಿಂದ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಅತಗೂರು ನಿಂಗಪ್ಪ, ಸಂಘಟನಾ ಕಾರ್ಯದರ್ಶಿ ಶಶಿ ಕುಮಾರ್ ಪಿ, ಕನ್ನಡ ಜನಪರ ವೇದಿಕೆ ಅಧ್ಯಕ್ಷ ಉಮಾಶಂಕರ್, ಶಿಕ್ಷಕ ಸಂಘಟಕ ಕೆ.ಟಿ ಶಿವಕುಮಾರ್, ಮದ್ದೂರು ತಾಲೂಕು ಸವಿತಾ ಸಮಾಜದ ಸಂಘಟನೆ ಕಾರ್ಯದರ್ಶಿ ವಳಗೆರೆಹಳ್ಳಿ ಶ್ರೀ ನಿವಾಸ, ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯರು ವಿ ಎಚ್ ಶಿವಲಿಂಗಯ್ಯ, ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ವೆಂಕಟೇಶ್, ಮಾಜಿ ಸೈನಿಕ ಶ್ರೀನಿವಾಸ, ಸಿದ್ದರಾಮೇಗೌಡ, ಹಾಗೂ ಇತರರು ಈ ವೇಳೆ ಉಪಸ್ಥಿತರಿದ್ದರು.
