ಬೀದರ್‌ | ವಸಂತ ಕುಷ್ಟಗಿ ದಾಸ ಸಾಹಿತ್ಯದ ಶ್ರೇಷ್ಠ ವಿದ್ವಾಂಸರು: ಪಂಚಾಕ್ಷರಿ ಪುಣ್ಯಶೆಟ್ಟಿ

Date:

Advertisements

ಬೀದರ್ ಜಿಲ್ಲೆಯ ಜೊತೆಗೆ ವಸಂತ ಕುಷ್ಟಗಿ ಅವರಿಗೆ ಅವಿನಾಭಾವ ಸಂಬಂಧವಿದೆ. ಬಿ.ವಿ.ಬಿ ಮಹಾವಿದ್ಯಾಲಯದ ಸ್ಥಾಪನೆಯ ಸಂದರ್ಭಕ್ಕೆ ಕನ್ನಡದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ಗಡಿಭಾಗದಲ್ಲಿ ಕನ್ನಡ ಕಟ್ಟಿ ಬೆಳೆಸುವಲ್ಲಿ ಪ್ರೊ. ವಸಂತ ಕುಷ್ಟಗಿಯವರು ಮಹತ್ವದ ಪಾತ್ರವಹಿಸಿದ್ದರು. ಇಲ್ಲಿ ಕನ್ನಡ ಗಟ್ಟಿಯಾಗಿ ನೆಲೆಯೂರಲು ಅವರ ಶ್ರಮ ಸಾಕಷ್ಟಿದೆ ಎಂದು ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ನುಡಿದರು.

ಕಲಬುರಗಿಯ ನುಡಿಸಿರಿ ಆಚಾರ್ಯ ವಸಂತ ಕುಷ್ಟಗಿ ಪ್ರತಿಷ್ಠಾನ ಹಾಗೂ ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ
ಸಹಯೋಗದಲ್ಲಿ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ವಸಂತ ಕುಷ್ಟಗಿ ಬದುಕು-ಬರಹ ಕುರಿತು ಉಪನ್ಯಾಸ ಮತ್ತು ವಸಂತ ಕುಷ್ಟಗಿಯವರ ಸ್ಮರಣಾರ್ಥವಾಗಿ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ “ವಸಂತ ಸಾಹಿತ್ಯೋತ್ಸವ 2023” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತಿ ಡಾ. ರಾಮಚಂದ್ರ ಗಣಾಪೂರ ಅವರು ಪ್ರೊ. ವಸಂತ ಕುಷ್ಟಗಿಯವರ ಬದುಕು – ಬರಹ ಕುರಿತು ಉಪನ್ಯಾಸ ನೀಡಿ, “ಕನ್ನಡ ಭಾಷೆ, ಸಾಹಿತ್ಯ ಮತ್ತು ದಾಸ ಸಾಹಿತ್ಯದ ಪ್ರಚಾರದಲ್ಲಿ ಕುಷ್ಟಗಿಯವರ ಪಾತ್ರ ಗಣನೀಯವಾಗಿದೆ. ದೈಹಿಕವಾಗಿ ನ್ಯೂನತೆ ಹೊಂದಿದರು ಕೂಡ ಕನ್ನಡದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಸೃಜನಶೀಲ ಬರಹಗಾರರಾದ ಅವರು ಗಟ್ಟಿ ಸಾಹಿತ್ಯದ ನಿರ್ಮಾಪಕರಾಗಿ ನಾಡಿನಾದ್ಯಾಂತ ಚಿರಪರಿಚಿತರು. ಅನೇಕರನ್ನು ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯುವಂತೆ ಪ್ರೇರಣೆ ಪ್ರೋತ್ಸಾಹ ನೀಡಿದ್ದರು. ನೂರಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದರು. ಸರಳ ಸಜ್ಜನ ವ್ಯಕ್ತಿತ್ವ ಮೈಗೂಡಿಸಿಕೊಂಡು ಜಾತ್ಯಾತೀತ ಮನೋಭಾವನೆಯನ್ನು ರೂಢಿಸಿಕೊಂಡು ಎಲ್ಲರೊಂದಿಗೆ ಬೆರೆತು ಬಾಳಿಬದುಕಿದರು” ಎಂದು ನುಡಿದರು.

Advertisements

ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡಿ, “ನನ್ನಂತಹ ಅನೇಕ ಕನ್ನಡದ ಸೇವಕರನ್ನು ಈ ನಾಡಿಗೆ ಕೊಟ್ಟ ಕೀರ್ತಿ ವಸಂತ ಕುಷ್ಟಗಿಯವರಿಗೆ ಸಲ್ಲುತ್ತದೆ. ಅವರ ಸುಪುತ್ರ ಶಾಮ ಕುಷ್ಟಗಿ ಹಾಗೂ ಸಂಜೀವಕುಮಾರ ಅತಿವಾಳೆಯವರು ಅವರ ಕರ್ಮಭೂಮಿಯಾಗಿದ್ದ ಬೀದರನಲ್ಲಿ ಅವರನ್ನು ನೆನಯುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ” ಎಂದು ತಿಳಿಸಿದರು.

ವಸಂತ ಕುಷ್ಟಗಿಯವರ ಸುಪುತ್ರ ಸಂಚಾರಿ ಜರ್ನೋ ಶಾಮ ಕುಷ್ಟಗಿ ಮಾತನಾಡಿ, “ನಾಡಿನಾದ್ಯಂತ ವಸಂತ ಕುಷ್ಟಗಿ ಅವರ ಬದುಕು, ಸಾಹಿತ್ಯ ಹಾಗೂ ಅವರ ಕೊಡುಗೆ ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ಕಾರ್ಯಕ್ರಮಗಳನ್ನು ಮಾಡುತ್ತಾ ಅವರೊಂದಿಗೆ ಒಡನಾಟ ಹೊಂದಿದ ಅನೇಕ ಮಹನಿಯರಿಗೆ ಪ್ರಶಸ್ತಿ, ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ” ಎಂದು ತಿಳಿಸಿದರು.

ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಡಾ. ಸಂಜೀವಕುಮಾರ ಅತಿವಾಳೆ ಮಾತನಾಡಿ, “ನಾಡು-ನುಡಿ, ಸಾಹಿತ್ಯ-ಸಂಸ್ಕೃತಿ ಉಳಿಸಿ ಬೆಳೆಸುವ ಹಾಗೂ ಮುಂದಿನ ಜನಾಂಗಕ್ಕೆ ಪರಿಚಯಿಸುವ ಕಾರ್ಯಕ್ರಮಗಳನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕರುನಾಡು ಸಾಂಸ್ಕೃತಿಕ ಭವನದಲ್ಲಿ ನಿರಂತರವಾಗಿ ಮಾಡಲಾಗುತ್ತಿದೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ನಾಟಕ ಅಕಾಡಮಿಯ ಮಾಜಿ ಸದಸ್ಯ ವಿನೋದ ಅಂಬೇಕರ, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ರವೀಂದ್ರ ಲಂಜವಾಡಕರ, ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಮ್. ಅಮರವಾಡಿ ಆಗಮಿಸಿ ವಸಂತ ಕುಷ್ಟಗಿಯವರೊಂದಿಗಿನ ತಮ್ಮ ಒಡನಾಟದ ಕುರಿತು ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ತಪ್ಪಿದ ಘೋರ ದುರಂತ- ಆಳುವವರ ಅಲಕ್ಷ್ಯ ಅಕ್ಷಮ್ಯ

ಕಾರ್ಯಕ್ರಮದಲ್ಲಿ ವಸಂತಸಿರಿ ಸ್ನೇಹ ಸಂಪದ ಪ್ರಶಸ್ತಿ ದಿ. ಪ್ರೊ. ದೇವೆಂದ್ರ ಕಮಲ್, ಬೀದರ ಅವರ ಪರವಾಗಿ ರತಿನ್ ಕಮಲ್, ವಸಂತಸಿರಿ ಶಿಷ್ಯೋತ್ತಮ ಪ್ರಶಸ್ತಿ, ಡಾ. ಹರತಿ ದ್ವಾರಕಾನಾಥ, ವಿಕಾರಾಬಾದ್, ವಸಂತಸಿರಿ ಹಾರಾಯಿಕೆ ಸಿರಿಕಾವ್ಯ,  ಡಾ. ಸುಮನ ಯಜುರ್ವೇದಿ, ಕಲಬುರಗಿ ಅವರಿಗೆ ಪ್ರದಾನ ಮಾಡಲಾಯಿತು.
ರೇಣುಕಾ ಎನ್.ಬಿ.ಕೀರ್ತನೆ ಗಾಯನ ನಡೆಸಿಕೊಟ್ಟರು, ಸಂತೋಷಕುಮಾರ ಜೋಳದಾಪಕೆ ಸ್ವಾಗತಿಸಿದರು, ಉಮಾಕಾಂತ ಮೀಸೆ ನಿರೂಪಿಸಿದರು, ಸೂರ್ಯಕಾಂತ ನಿರ್ಣಾಕರ ವಂದಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X