ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ ವೀರಪ್ಪ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ದೇವರಾಜು ಸಿ ಅವಿರೋಧ ಆಯ್ಕೆಯಾದರು.
ಅಧ್ಯಕ್ಷರ ಸ್ಥಾನಕ್ಕೆ ಎಂ ವೀರಪ್ಪ ರೆಡ್ಡಿ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ದೇವರಾಜು ಸಿ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಅಧಿಕಾರಿ ವನಿತಾ ಅಧಿಕೃತ ಆಯ್ಕೆಯನ್ನು ಘೋಷಿಸಿದರು.
ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಎಂ ವೀರಪ್ಪರೆಡ್ಡಿ ಮಾತನಾಡಿ, ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದ ರೈತರ ಸಹಕಾರದೊಂದಿಗೆ ಹಾಲು ಉತ್ಪಾದಕರ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇನೆ ಎಂದು ಹೇಳಿದರು.

ಎಸ್ಟಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಮಣಿಕಂಠ ಮಾತನಾಡಿ, ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ ಸುಧಾಕರ್ ಮತ್ತು ಕೋಚಿಮುಲ್ ನಿರ್ದೇಶಕ ಅಶ್ವಥ್ ನಾರಾಯಣ್ ಬಾಬು ಅವರ ಮಾರ್ಗದರ್ಶನದಂತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪ್ರಕ್ರಿಯೆ ನಡೆದಿದ್ದು, ಅವರ ಸೂಚನೆಯಂತೆ ಡೈರಿ ಅಭಿವೃದ್ಧಿಗೆ ಎಲ್ಲರೂ ಸಹಕರಿಸುವುದಾಗಿ ಹೇಳಿದರು.
ಇದನ್ನೂ ಓದಿ : ಚಿಂತಾಮಣಿ | ಅಧಿಕ ಬೆಲೆಗೆ ಔಷಧಿ ಮಾರಾಟ; ಮೆಡಿಕಲ್ ಶಾಪ್‌ಗೆ ಬೀಗ
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಜಿ ಅಪ್ಪಾಜಿ ರೆಡ್ಡಿ, ಲಕ್ಷ್ಮಣ್ ರೆಡ್ಡಿ, ವಿ ಸುರೇಶ, ವಿ ಗೋವಿಂದ್ ಗೌಡ, ಎಸ್ ನಾಗೇಶ್, ರಾಧಕೃಷ್ಣ, ಆರ್ ಶಂಕರಪ್ಪ, ಲಕ್ಷ್ಮಮ್ಮ, ಶಾಂತಮ್ಮ ಹೆಚ್ಎಸ್, ನಾಗರಾಜ್ ಎಂ ಎಸ್, ಶಂಕರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ನರಸಿಂಹಪ್ಪ, ಪ್ರಮುಖ ಮುಖಂಡರಾದ ಶಿವಾರೆಡ್ಡಿ, ಆರ್ ಚೌಡರೆಡ್ಡಿ, ನಾರಾಯಣಸ್ವಾಮಿ ಆರ್‌ಎಂಪಿ, ಮೇಸ್ತ್ರಿ ವೆಂಕಟೇಶಪ್ಪ, ಚೆನ್ನಪ್ಪ, ಡೈರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಜಿ ನಾಗೇಶ್, ಸಿಬ್ಬಂದಿ ವರ್ಗದವರಾದ ಶಿವರಾಜ್, ಶ್ರೀನಿವಾಸಪ್ಪ, ಚೇತನ್ ಕುಮಾರ್, ರಾಮಪ್ಪ ಇದ್ದರು.