ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ನಿರುದ್ಯೋಗಿ ಯುವಜನರ ಆರ್ಥಿಕ ಅಭಿವೃದ್ದಿಗಾಗಿ ಕೊಡಲಾಗುವ ಕಾರುಗಳನ್ನು ಮಂಗಳವಾರ ಕೋಲಾರ ನಗರ ಶಾಸಕ ಕೊತ್ತೂರು ಮಂಜುನಾಥ್ ಫಲಾನುಭವಿಗಳಿಗೆ ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ರಾಜ್ಯ ಸರಕಾರದ ವಿವಿಧ ನಿಗಮಗಳಿಂದ ನಿರುದ್ಯೋಗಿ ಯುವಕರಿಗೆ ಕಾರುಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರೆ ಇಲಾಖೆಗಳಿಂದಲೂ ಅರ್ಹರನ್ನು ಗುರುತಿಸಿ ಇಲಾಖೆಗಳ ವಾಹನಗಳನ್ನು ವಿತರಿಸಲು ಕ್ರಮ ವಹಿಸಲಾಗುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವ್ಯಕ್ತಿ, ಕುಟುಂಬ, ಜಾತಿ ಪ್ರತಿಷ್ಠೆಯ ಕಣ ಚನ್ನಪಟ್ಟಣ
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಜಿಲ್ಲಾ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಉಪನಿರ್ದೇಶಕಿ ಶ್ರನೀರಾ ತಾಜ್, ರಾಜ್ಯ ಅಲ್ಪಸಂಖ್ಯಾತ ನಿಗಮದ ನಿರ್ದೇಶಕ, ಅಬ್ದುಲ್ ಖಯ್ಯಾಮ್, ಬೆಂಗಳೂರು ಉತ್ತರ ವಿವಿ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಟ್ರಾಕ್ಟರ್ ಮುಸ್ತಫಾ, ಕಠಾರಿಪಾಳ್ಯ ಗಂಗಣ್ಣ, ಮುಂತಾದವರು ಇದ್ದರು.
