“ಕಾವೇರಿ ನೀರಿಗಾಗಿ ಅ.17ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ” ಎಂದು ಕನ್ನಡದ ಹಿರಿಯ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದರು.
ಈ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಅವರು, “ನಮಗೇ ಇಲ್ಲಿ ಕುಡಿಯುವ ನೀರಿಲ್ಲ. ಆದರೂ, ತಮಿಳುನಾಡಿಗೆ ನೀರು ಬಿಡುವಂತಾಗಿದೆ. ಹಾಗಾಗಿ, ನಾವು ಸರ್ಕಾರದ ಮೇಲೆ ಒತ್ತಡ ಹೇರಲು ಅ.17 ರಂದು ವಿಧಾನಸೌಧ ಮುತ್ತಿಗೆ ಹಾಕಲಿದ್ದೇವೆ” ಎಂದು ಹೇಳಿದರು.
“ಕಾವೇರಿ ಪ್ರಾಧಿಕಾರ, ಕಾವೇರಿ ನಿರ್ವಹಣಾ ಸಮಿತಿ ನಮಗೆ ತೀವ್ರವಾಗಿ ಅನ್ಯಾಯ ಮಾಡಿದ್ದಾರೆ. ಕೇಂದ್ರ ಸರ್ಕಾರ ನಮ್ಮನ್ನು ಕಡೆಗಣಿಸಿದೆ. ನಮ್ಮ ಲೋಕಸಭಾ ಸದಸ್ಯರು ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯ ಸರ್ಕಾರ ಯಾವ ಅಡ್ಡಿ ಆತಂಕವಿಲ್ಲದೇ ನೀರನ್ನು ಬಿಡುತ್ತಿದ್ದಾರೆ. ಕರ್ನಾಟಕಕ್ಕೆ, ಕನ್ನಡಿಗರಿಗೆ ಯಾರಿಂದಲೂ ರಕ್ಷಣೆ ಇಲ್ಲ, ಎಲ್ಲವೂ ನಾಟಕೀಯ. ಕನ್ನಡಪರ ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿದ್ದಾರೆ. ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಕೆಆರ್‌ಎಸ್‌ನಲ್ಲಿ ನೀರಿಲ್ಲ. ಕಬಿನಿ, ಹಾರಂಗಿ, ಹೇಮಾವತಿಯಲ್ಲೂ ನೀರಿಲ್ಲ. ಇದರಿಂದ ಬೆಂಗಳೂರಿಗೆ ಕುಡಿಯುವ ನೀರು ನಿಲ್ಲುವ ಸೂಚನೆಯಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸ್ನೇಹಿತರೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಪೀಡಿಸಿದ ವಿಕೃತ ಪತಿ; ದೂರು ದಾಖಲು
“ಹೀಗೆ ಆದರೆ, ಬೆಂಗಳೂರಿನ ಜನರ ಗತಿ ಏನು? ನೀರಿಲ್ಲದೆ ಒಣಗುತ್ತಿರುವ ನಮ್ಮ ರೈತರ ಗತಿ ಏನು? ಕರ್ನಾಟಕ ರಾಜ್ಯ ಕಗ್ಗತ್ತಲಿನಲ್ಲಿದೆ. ಕರ್ನಾಟಕದಲ್ಲಿ ಬೆಳಕಿದ್ದರೂ ಬೆಳಕಿಲ್ಲ. ಕಾವೇರಿ ನೀರು ತಮಿಳುನಾಡಿಗೆ ಬಿಡಬೇಡಿ” ಒತ್ತಾಯಿಸಿದರು.