ವಿಜಯನಗರ | ಬಸವಣ್ಣನವರು ಅಂತರ್ಜಾತಿ ವಿವಾಹ ಉತ್ತೇಜಿಸಿದ್ದರು: ಸಿಎಂ ಸಿದ್ದರಾಮಯ್ಯ

Date:

Advertisements

ಹನ್ನೆರಡನೇ ಶತಮಾನದಲ್ಲಿಯೇ ಬಸವಣ್ಣವರು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನಿಡಿದ್ದರು. ಆದೇ ರೀತಿ ಈಗ ನಾವೆಲ್ಲರೂ ಅಂತಹ ವಿವಾಹ ಉತ್ತೇಜಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಅವರ ಮಗನ ಮದುವೆ ಜತೆಗೆ ಹಮ್ಮಿಕೊಂಡ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ಮಾತನಾಡಿದರು.

“ಜಾತಿ ವ್ಯವಸ್ಥೆ ತೊಲಗಿ ಸಮಸಮಾಜ ನಿರ್ಮಾಣವಾಗಲು ಅಂತರ್ಜಾತಿ ವಿವಾಹ ಹೆಚ್ಚಾಗಬೇಕು. ಇಂತಹ ಮದುವೆಗಳು ಹೆಚ್ಚಚ್ಚು ನಡೆಯಬೇಕು. ಹಾಗೆಯೇ ಶ್ರೀಮಂತರು ತಮ್ಮ ಸಂಪತ್ತನ್ನು ಇಂತಹ ಕಾರ್ಯಗಳಿಗೆ ಸ್ವಲ್ಪ ಬಳಸಬೇಕು. ನಮ್ಮ ದೇಶದಲ್ಲಿ ಶ್ರೀಮಂತರು, ಬಡವರು ಇಬ್ಬರೂ ಇದ್ದಾರೆ. ಶ್ರೀಮಂತರು ಅದ್ದೂರಿಯಾಗಿ ಮದುವೆ ಮಾಡುತ್ತಾರೆ. ಬಡವರು ಮದುವೆ ಮಾಡಿಕೊಳ್ಳಲು ಕಷ್ಟ. ಇಂತಹ ಸಾಮೂಹಿಕ ಮದುವೆಯಲ್ಲಿ ಬಡವರ ಮದುವೆ ಮಾಡುವುದು ಉತ್ತಮ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisements

“ಬಡವರು ಮದುವೆ ಮಾಡಲು ಸಾಲ ಮಾಡುತ್ತಾರೆ. ಮನೆ, ಆಸ್ತಿ, ಒಡವೆ ಮಾರಾಟ ಮಾಡುತ್ತಾರೆ. ಪ್ರತಿಯೊಬ್ಬರೂ ಸರಳ ಮದುವೆಯಾಗಬೇಕು. ಪಕ್ಕದ ಮನೆಯವಳು ಓಲೆ ಹಾಕಿದರೆ ಕಿವಿ ಕಿತ್ತುಕೊಳ್ಳಲು ಸಾಧ್ಯವೆ?. ಬಡವರು ಬಡವರಾಗಿಯೇ ಸಾಯಬೇಕಾ? ಬಡವರೂ ಶ್ರೀಮಂತರಾಗಬಹುದು. ನಾವು ಯಾವ ಜಾತಿಯಲ್ಲಿದ್ದೀವಿ ಅದೇ ಜಾತಿಯಲ್ಲಿಯೇ ಇರಬೇಕೆಂದೇನಿಲ್ಲ” ಎಂದ ಹೇಳಿದರು.

“ನಾವು ಜಾತ್ಯತೀತರಾಗಬೇಕು. ಬಸವಣ್ಣನವರ ಆದರ್ಶಗಳನ್ನು ಪಾಲನೆ ಮಾಡಬೇಕು. ಬಸವಣ್ಣನವರು ಜನರಿಗೆ ಅರ್ಥವಾಗುವ ರೀತಿಯಲ್ಲಿ ಬೋಧನೆ ಮಾಡಿದ್ದಾರೆ. ಬಸವಣ್ಣನವರನ್ನು ನಮ್ಮ ಸರ್ಕಾರ ʼಸಾಂಸ್ಕೃತಿಕ ನಾಯಕʼ ಅಂತ ಮಾಡಿದೆ. ಕುವೆಂಪು ಹೇಳಿದಂತೆ ಹುಟ್ಟುವಾಗ ವಿಶ್ವಮಾನವರಾಗಿ ಇರುತ್ತಾರೆ. ಆದರೆ ಜಾತಿ ವ್ಯವಸ್ಥೆಯಿಂದಾಗಿ ನಾವು ಅಲ್ಪ ಮಾನವರಾಗುತ್ತೇವೆ” ಎಂದು ಹೇಳಿದರು.

“ನಾವು ಇಂತಿಂಥ ಜಾತಿಯಲ್ಲಿ ಹುಟ್ಟುಬೇಕೆಂದು ಅರ್ಜಿ ಹಾಕಿದ್ದೀವಾ? ಒಂದು ಜಾತಿಯವರು ಇನ್ನೊಂದು ಜಾತಿಯನ್ನು ದ್ವೇಷಿಸಬಾರದು, ಪ್ರೀತಿಸಬೇಕು. ಆರ್ಥಿಕ ಸ್ವಾವಲಂಬನೆ ಆಗದಿದ್ದರೆ ಜಾತಿ ವ್ಯವಸ್ಥೆ ಚಲನೆಯಾಗುವುದಿಲ್ಲ. ಜಾತಿ ವ್ಯವಸ್ಥೆ ಇನ್ನೂ ಹೋಗಿಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾಣೆಹಳ್ಳಿ ಶ್ರೀ ವಿರಚಿತ ‘ಮೋಳಿಗೆ ಮಾರಯ್ಯ’ ಕಿರುನಾಟಕ ಯಶಸ್ವಿ ಪ್ರದರ್ಶನ

“ಅಂಧ ಮಹಿಳೆಗೆ ಸಿರಾಜ್ ಶೇಖ್ ಮದುವೆ ಮಾಡಿಸಿದ್ದು ಖುಷಿಯ ವಿಚಾರ. ಇಬ್ರಾಹಿಂ ಮಸ್ತಾನ್ ಅಂಧ ಮಹಿಳೆ ಯಾಸ್ಮಿನ್‌ನನ್ನು ಮದುವೆಯಾಗಿದ್ದಾರೆ. ನನ್ನ ಮೊದಲನೇ ಮಗ ಅಂತರ್ಜಾತಿ ಮದುವೆಯಾಗಿದ್ದ, ಈಗ ಅವನು ಇಲ್ಲ. ನನ್ನ ಎರಡನೇ ಮಗ ಮದುವೆಯೇ ಆಗಿಲ್ಲ” ಎಂದರು.

“ನಾವು ಮಹಿಳೆಯರು ಆರ್ಥಿಕ ಸ್ವಾವಲಂಬನೆಯಾಗುವ ಕೆಲಸ ಮಾಡುತ್ತೇವೆ. ಶ್ರೀಮಂತರು ಸಾಮಾಜಿಕ ಒಳ್ಳೆಯ ಕೆಲಸ ಮಾಡಬೇಕು. ನಾವು ಸಮಾಜದಿಂದಲೇ ಸಿಎಂ ಆಗಿದ್ದೇನೆ. ಹಾಗಾಗಿ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಅಂಬೇಡ್ಕರ್ ಅವರು ಸಮಾನ ಹಕ್ಕು ಕೊಡದೇ ಹೋಗಿದ್ದರೆ, ನಾನು ಸಿಎಂ ಆಗುತ್ತಿರಲಿಲ್ಲ. ಹಾಗಾಗಿ ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು” ಎಂದು ಸಿಎಂ ಹೇಳಿದರು.

ಇಬ್ಬರು ಮಕ್ಕಳಷ್ಟೇ ಸಾಕು: ನಮ್ಮ ದೇಶದಲ್ಲಿ 140 ಕೋಟಿ ಜನಸಂಖ್ಯೆಯಿದೆ. ಜನಂಖ್ಯೆಯಲ್ಲಿ ಚೀನಾ ದೇಶವನ್ನು ನಾವು ಹಿಂದಕ್ಕೆ ಹಾಕಿದ್ದೇವೆ. ಅರತಿಗೊಂದು ಮಗು ಕೀರ್ತಿಗೊಂದು ಮಗು ಎನ್ನುವಂತೆ ಎರಡು ಮಕ್ಕಳು ಸಾಕು. ದೇಶದಲ್ಲಿ ಜನಸಂಖ್ಯೆ ನಿಯಂತ್ರಣ ಕೂಡ ಅವಶ್ಯಕ. ಅಧಿಕಾರ, ಸಂಪತ್ತು ಹಂಚಿಕೆಯಾಗಬೇಕು” ಎಂದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X