ವಿಜಯನಗರ | ಐಐಎಸ್‌ಸಿಯಲ್ಲಿ ದಲಿತ ಪ್ರಾಧ್ಯಾಪಕರಿಗೆ ನಿಂದನೆ; ತಪ್ಪಿತಸ್ಥ ಜಾತಿವಾದಿಗಳ ವಿರುದ್ಧ ಕ್ರಮಕ್ಕೆ ಡಿ ಬಸವರಾಜ್ ಆಗ್ರಹ

Date:

Advertisements

ವಿಜಯನಗರ ಜಿಲ್ಲೆಯಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಹವಾಮಾನ ವೈಪರೀತ್ಯ ವಿಷಯದ ತಜ್ಞರಾಗಿರುವ ಡಾ. ಸಣ್ಣದುರ್ಗಪ್ಪನವರ ಮೇಲೆ ಜಾತಿ ದೌರ್ಜನ್ಯ ನಡೆಸಿರುವ ಇನ್ಫೋಸಿಸ್ ಸಹ ಸಂಸ್ಥಾಪಕ ಪದ್ಮಭೂಷಣ ಪುರಸ್ಕೃತ ಗೋಪಾಲಕೃಷ್ಣನ್ ಸಹಿತ 18 ಮಂದಿ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮಾಜಿ ಅಧ್ಯಕ್ಷ, ಕೆಪಿಸಿಸಿ ವಕ್ತಾರ ಡಿ ಬಸವರಾಜ್ ಒತ್ತಾಯಿಸಿದರು.

ವಿಜಯನಗರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಡಾ. ಸಣ್ಣದುರ್ಗಪ್ಪನವರು ಹವಾಮಾನ ವೈಪರೀತ್ಯ ವಿಷಯದ ತಜ್ಞರಾಗಿರುವುದಲ್ಲದೇ ಸುಮಾರು 50 ದೇಶಗಳಿಗೆ ವಿಶೇಷ ಆಹ್ವಾನಿತರಾಗಿ ಹೋಗಿ ವಿಷಯ ಮಂಡನೆ ಮಾಡಿದ್ದಾರೆ. ಅವರು ನಮ್ಮ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಗ್ರಾಮದವರಾಗಿದ್ದು, ದಲಿತ ಪ್ರಾಧ್ಯಾಪಕರ ಏಳಿಗೆ ಮತ್ತು ಸಾಧನೆ ಸಹಿಸದೆ 2014ರಲ್ಲಿ ಇವರನ್ನು ಉದ್ದೇಶಪೂರ್ವಕವಾಗಿ ಹನಿ ಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿ ಸೇವೆಯಿಂದ ವಜಗೊಳಿಸಲಾಗಿದೆ” ಎಂದು ಹೇಳಿದರು.

“ಕಳೆದ ಹತ್ತು ವರ್ಷಗಳಿಂದ ಡಾ.ಸಣ್ಣದುರ್ಗಪ್ಪನವರು ತಮಗಾದ ಅನ್ಯಾಯ ಮತ್ತು ಶೋಷಣೆಯ ದೌರ್ಜನ್ಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ನಡೆಸುತ್ತ ಬಂದಿದ್ದಾರೆ. ಸಿವಿಲ್ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಮೂರ್ತಿಗಳ ನಿರ್ದೇಶನದ ಆಧಾರದ ಮೇಲೆ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿದೆ. 2008ರಿಂದ 2025ರವರೆಗೂ ಇವರಿಗೆ ಜಾತಿ ನಿಂದನೆ ಮತ್ತು ಬೆದರಿಕೆ ಹಾಕುವುದರ ಮೂಲಕ ನಿರಂತರವಾಗಿ ಶೋಷಣೆ ಮಾಡಲಾಗಿದೆ. ಹನಿ ಟ್ರ್ಯಾಪ್‌ಗೆ ಸಂಬಂಧಿಸಿದಂತೆ ಈಗಾಗಲೇ ಡಾ. ಸಣ್ಣದುರ್ಗಪ್ಪನವರ ದೂರಿನ ಮೇರೆಗೆ ಕರ್ನಾಟಕ ಲೆಜೆಸ್ಲೇಟಿವ್ ಅಸೆಂಬ್ಲಿಯಿಂದ ತನಿಖೆ ನಡೆದಿದ್ದು, ತನಿಖೆಯಲ್ಲಿ ಡಾ.ಸಣ್ಣದುರ್ಗಪ್ಪನವರು ತಪ್ಪಿತಸ್ಥಲ್ಲ ಕೇವಲ ದಲಿತ ಜಾತಿಗೆ ಸೇರಿದ್ದರಿಂದ ಇವರನ್ನು ಸೇವೆಯಿಂದ ವಜಗೊಳಿಸಿರುತ್ತಾರೆಂಬ ವರದಿ ಬಂದಿದೆ” ಎಂದು ಹೇಳಿದರು.

Advertisements

ಐಐಎಸ್‌ಸಿ ಸಂಸ್ಥೆಯಲ್ಲಿ ಇರುವವರೆಗೂ ಸುಮಾರು 30 ಲೈಂಗಿಕ ಕಿರುಕುಳ ದೂರುಗಳು ದಾಖಲಾಗಿದ್ದರೂ ಕೂಡಾ ಯಾರೊಬ್ಬರನ್ನು ಸೇವೆಯಿಂದ ವಜಾಗೊಳಿಸಿರುವುದಿಲ್ಲ. ಕೇವಲ ದಲಿತರಾಗಿರುವ ಕಾರಣ ಹಾಗೂ ಇವರು ಗಳಿಸಿದ ಖ್ಯಾತಿಯ ಕಾರಣದಿಂದ ಮಾತ್ರ ಇವರನ್ನು ಕೆಲಸದಿಂದ ವಜಾಮಾಡಲಾಗಿದೆ” ಎಂದು ಆರೋಪಿಸಿದರು.

“ಡಾ. ಸಣ್ಣ ದುರ್ಗಪ್ಪನವರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತೇವೆಂದು ಸಮಿತಿಯ ಮುಂದೆ ಐಐಎಸ್‌ಸಿ ನಿರ್ದೇಶಕರು ಒಪ್ಪಿಕೊಂಡಿದ್ದರು. ಆದರೆ ಈವರೆಗೂ ಕೆಲಸಕ್ಕೆ ಸೇರಿಸಿಕೊಂಡಿಲ್ಲ. ಇದೂ ಕೂಡಾ ಪರೋಕ್ಷವಾಗಿ ಜಾತಿ ಲೈಂಗಿಕ ಕಿರುಕುಳ ದೌರ್ಜನ್ಯವೇ ಆಗಿದೆ” ಎಂದರು.‌

ಈ ಸುದ್ದಿ ಓದಿದ್ದೀರಾ? ಬೀದರ್‌ | ಕುಷ್ಠರೋಗ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಕೈಜೋಡಿಸಿ : ಧ್ಯಾನೇಶ್ವರ ನಿರಗುಡಿ

“ಡಾ.ಸಣ್ಣದುರ್ಗಪ್ಪನವರಿಗೆ ನಿರಂತರವಾಗಿ ಬೆದರಿಕೆ ಆಗಿರುವುದಲ್ಲದೆ ನ್ಯಾಯಾಲಯದ ನ್ಯಾಯಾಧೀಶರನ್ನೇ ಬುಕ್ ಮಾಡಿಕೊಂಡು ಕೇಸ್ ಗೆಲ್ಲುತ್ತೇನೆಂದು ಹೇಳಿರುವುದು ನ್ಯಾಯಸ್ಥಾನಗಳ ವಿಶ್ವಾಸಾರ್ಹತೆಯನ್ನು ಗೇಲಿ ಮಾಡಿದಂತಿದೆ. ಸತ್ಯ, ನ್ಯಾಯಗಳು ಇನ್ನೂ ಜೀವಂತವಾಗಿರುವುದೇ ಆಗಿದ್ದರೆ ಸಂತ್ರಸ್ತ ಡಾ. ಸಣ್ಣದುರ್ಗಪ್ಪ ಅವರನ್ನು ಕೇಂದ್ರ ಸರ್ಕಾರದ ಐಐಎಸ್‌ಸಿ ಸಂಸ್ಥೆಗೆ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು” ಎಂದು ಒತ್ತಾಯಿಸಿದರು..

ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ವಿ ಅಂಜಿನಪ್ಪ, ಪುರಸಭೆ ಸ್ಥಾಯಿ ಸಮಿತಿಯ ಅಧ್ಯಕ್ಷ ವೆಂಕಟೇಶ್ ಟಿ, ವಕೀಲ ಚಿಕ್ಕೇರಿ ಬಸಣ್ಣ, ಎಲ್ ಎಂ ನಾಯಕ್ ಶಂಕರ್, ದಲಿತಪರ ಮತ್ತು ಪ್ರಗತಿಪರ ಹೋರಾಟಗಾರರು ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X