ಧರ್ಮಸ್ಥಳದಲ್ಲಿ ನಡೆದ ಸೌಜನ್ಯಳ ಸಾವಿನ ಪ್ರಕರಣ ಪುನರ್ ತನಿಖೆಯಾಗಬೇಕು ಹಾಗೂ ರಾಜ್ಯದ ಅಹಸಜ ಸಾವುಗಳು ಬಗ್ಗೆ ಶೀಘ್ರವಾಗಿ ತನಿಖೆಯಾಗಬೇಕು ಎಂದು ಆಗ್ರಹಿಸಿ ಹೊಸಪೇಟೆಯ ಡಿವೈಎಫ್‌ಐ ಹಾಗೂ ಎಸ್‌ಎಫ್‌ಐ ಪ್ರತಿಭಟನೆ ನಡೆಸಿ ಆಗ್ರಹಿಸಿದವು.
ನಗರದ ಪುನೀತ್ ರಾಜಕುಮಾರ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು, “11 ವರ್ಷದ ಹಿಂದೆ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಸಂಬಂಧಿಸಿದಂತೆ ಅಮಾಯಕ ಸಂತೋಷ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು, ಸಾಕ್ಷಿಗಳ ಕೊರತೆಯಿಂದ ಸಂತೋಷನನ್ನು ನ್ಯಾಯಾಲಯ ಬಿಡುಗಡೆ ಮಾಡಿತು. ಆದರೆ ನಿಜವಾದ ಆರೋಪಿ ಯಾರು ಎಂದು ಇದವರೆಗೂ ಪತ್ತೆ ಹಚ್ಚದೇ ಇರುವುದು ಪೋಲೀಸ್ ಇಲಾಖೆಗೆ ಹಾಗೂ ಸರಕಾರಗಳಿಗೆ ನಾಚಿಗೇಡಿನ ಸಂಗತಿ. ಆಡಳಿತ ಸರ್ಕಾರವು ಈಗಲಾದರೂ ಎಚ್ಚೆತ್ತುಕೊಂಡು ಕೂಡಲೆ ಸೌಜನ್ಯ ಸಾವಿಗೆ ನ್ಯಾಯ ಒದಗಿಸಬೇಕು. ಪದ್ಮಲತಾ, ವೇದಾವತಿ, ಹಾಗೂ ಯಾದಗಿರಿಯಲ್ಲಿ ಪೇಪರ್ ಆಯವಂತ ಇಬ್ಬರು ಬಾಲಕಿಯರ ಪ್ರಕರಣ ಸೇರಿದಂತೆ ರಾಜ್ಯದ ಅಹಸಜ ಸಾವುಗಳ ಪ್ರಕರಣಗಳನ್ನು ಕೂಡಲೇ ತನೆಖೆಗೆ ಒಳಪಡಿಸಬೇಕು. ತ್ವರಿತವಾಗಿ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.

ಸೌಜನ್ಯ ಪ್ರಕರಣ ಕುರಿತು ಸವಿವರವಾಗಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಅವರಿಗೆ ಬರುತ್ತಿರುವ ಕಾಣದ ಕೈಗಳ ಬೆದರಿಕೆ ಕರೆಗಳು ನಿಲ್ಲಬೇಕು ಮತ್ತು ಬೆದರಿಕೆ ಹಾಕಿದವರುನ್ನು ಕೂಡಲೆ ಬಂಧಿಸಿಬೇಕು. ಸೌಜನ್ಯ ನ್ಯಾಯಕ್ಕಾಗಿ ಯಾರೆಲ್ಲ ಹೋರಾಟ ಮಾಡುತ್ತಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುವರಿಗೆಲ್ಲ ಸರ್ಕಾರವು ರಕ್ಷಣೆ ನೀಡಬೇಕು ಎಂದರು.
ಇದನ್ನೂ ಓದಿ: ವಿಜಯನಗರ | ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ವಿಚಾರ ಸಂಕಿರಣ
ಡಿವೈಎಫ್‌ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಎಸ್‌ಎಫ್‌ಐ ಕಾರ್ಯದರ್ಶಿ ಶಿವಾ ರೆಡ್ಡಿ, ಡಿವೈಎಫ್‌ಐ ಅಧ್ಯಕ್ಷ ಸ್ವಾಮಿ, ಎಸ್‌ಎಫ್‌ಐ ಅಧ್ಯಕ್ಷೆ ಲಕ್ಷ್ಮೀ, ಪವನ್, ಅಲ್ತಾಫ್, ಸುಧಾಕರ್, ಲಕ್ಷ್ಮೀ ಎಸ್, ಮಂಜುನಾಥ್ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
