ದಲಿತರ ಮತ್ತು ರೈತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಕ್ಕೆ ತಡೆ ಹಾಕಬೇಕು ಮತ್ತು ಸಮುದಾಯದ ಹಕ್ಕೊತ್ತಯಾಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು.
“ಸರ್ಕಾರಿ ಪರಂಪೋಕು ಜಮೀನುಗಳಲ್ಲಿ , ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಜಾತಿಯವರಿಗೆ ಶೀಘ್ರವೇ ಪಟ್ಟಾ ನೀಡಬೇಕು, ಎಲ್ಲಾ ಗ್ರಾಮಗಳಲ್ಲಿ ಶಾಶ್ವತ ರುದ್ರ ಭೂಮಿಯನ್ನು ಕಲ್ಪಿಸಿಕೊಡಬೇಕು ಹಾಗೂ ವೃತ್ತಿಪರ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ವಸತಿ ನಿಲಯ ಸೌಲಭ್ಯ ಕಲ್ಪಿಸಿಕೊಡಬೇಕು” ಎಂಬ ಬೇಡಿಕೆ ಮುಂದಿರಿಸಲಾಯಿತು.
ರೈತರ ಮೇಲೆ ದಲ್ಲಾಳಿ ಅಂಗಡಿಯವರಿಂದ , ನಡೆಯುತ್ತಿರುವ ವಂಚನೆ ದೌರ್ಜನ್ಯಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ತಾಲ್ಲೂಕಿನ ಎಲ್ಲಾ ಗ್ರಾಮಗಳ ದಲಿತ ಕಾಲೋನಿಗಳಿಗೆ , ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿನ , ನೈರ್ಮಲ್ಯ ಕಾಪಾಡಲು ಅಗತ್ಯ ಕ್ರಮಗಳನ್ನು ಜರುಗಿಸಬೇಕು. ಗ್ರಾಮೀಣ ಪ್ರದೇಶಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ , ಸಕಾಲಕ್ಕೆ ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕು” ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೃಹತ್ ಪ್ರತಿಭಟನೆ ಅಯೋಜಿಸಿತ್ತು.
ದಲಿತ ಸಂಘರ್ಷ ಸಮಿತಿಯ ಮುಖಂಡ ಎಸ್ ದುರುಗೇಶ ಮಾತನಾಡಿ , “ಹಕ್ಕೊತ್ತಾಯಗಳು ಕೆಲವು ಸ್ಥಳೀಯ ಆಡಳಿತ ವ್ಯಾಪ್ತಿಗೆ ಸೇರಿದ್ದು, ಹಲವು ಜಿಲ್ಲಾ ಮಟ್ಟದಲ್ಲಿವೆ. ಕಾರಣ ತಹಶಿಲ್ದಾರರು ತಮ್ಮ ವ್ಯಾಪ್ತಿಯ ಸಮಸ್ಯೆಗಳನ್ನು , ಶೀಘ್ರವೇ ಈಡೇರಿಸಬೇಕಿದೆ. ಉಳಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು , ಸಂಪರ್ಕಿಸಿ ಬಗೆಹರಿಸಿಕೊಳ್ಳಲಾಗುತ್ತದೆ. ಶೀಘ್ರವೇ ಸಮಸ್ಯೆಗಳ ಪರಿಹಾರದ ಬಗ್ಗೆ ಸ್ಪಂದಿಸಬೇಕು. ನಿರ್ಲಕ್ಷ್ಯ ದೋರಣೆ ತಾಳಿದ್ದಲ್ಲಿ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗುವುದು” ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಎಚ್ಚರಿಸಿದ್ದಾರೆ.
ವಿಜಯನಗರ | ರೈತರು, ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಹೋರಾಟ
ಪೋಸ್ಟ್ ಹಂಚಿಕೊಳ್ಳಿ:





