ಫೆಬ್ರವರಿ 28ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಜಯನಗರದ ಐತಿಹಾಸಿಕ ಹಂಪಿ ಉತ್ಸವಕ್ಕೆ ಎರಡು ದಿನಗಳಷ್ಟೇ ಬಾಕಿ ಉಳಿದಿವೆ. ಉತ್ಸವದಲ್ಲಿ ಮುಖ್ಯಮಂತ್ರಿಗಳು, ಸಚಿವರು, ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುವ ಹಿನ್ನೆಲೆ ಭದ್ರತೆಗಾಗಿ ಹಂಪಿ ಹಾಗೂ ಹೊಸಪೇಟೆಯಲ್ಲಿ ಒಟ್ಟು 500 ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿದೆ.
ಹೆಚ್ಚಿನ ಭದ್ರತೆಗಾಗಿ ಬಳ್ಳಾರಿ, ಹಾವೇರಿ, ರಾಯಚೂರು, ಕೊಪ್ಪಳ, ಚಿತ್ರದುರ್ಗ ಸೇರಿದಂತೆ ಇತರೆ ಜಿಲ್ಲೆಗಳಿಂದ ಒಬ್ಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ನಾಲ್ವರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, 9 ಡಿವೈಎಸ್ಪಿ, 36 ಸಿಪಿಐ, 79 ಪಿಎಸ್‌ಐ, 183 ಎಎಸ್‌ಐ, 920 ಎಚ್‌ಸಿ ಮತ್ತು ಪಿಸಿ, 500 ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ನಾಲ್ಕು ಎಎಸ್‌ಪಿ ತಂಡ, ನಾಲ್ಕು ಕೆಎಸ್‌ಆರ್‌ಪಿ, ಐದು ಡಿಎಲ್‌ಆರ್ ತಂಡಗಳನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿ
ಇದನ್ನೂ ಓದಿ: ವಿಜಯನಗರ | ಎಐ ತಂತ್ರಜ್ಞಾನವನ್ನು ನಮ್ಮದೇ ಭಾಷೆಯಲ್ಲಿ ಪಳಗಿಸುವ ಕೆಲಸವಾಗಬೇಕು: ಎನ್‌ಎಎಂ ಇಸ್ಮಾಯಿಲ್
